ಕರುನಾಡು ಘರ್ಜನೆ ಸುದ್ದಿ ಗದಗ : ಗದಗ ನಗರದ ಲಿಡ್ಕರ್ ಆಶ್ರಯ ಬಡಾವಣೆಯ ಆರ್.ಎಸ್. ನಂ. 382 ರಿಂದ 384 / 3ಎ/2 ಮತ್ತು 384/3ಬಿ ಎಂಟು ಎಕರೆಯ ನಿವೇಶನದಲ್ಲಿ ಮೂಲ ಡಿ.ಪಿ.ಆರ್.
ಪ್ರಕಾರದ ನಕಾಶೆಯಲ್ಲಿ, ಶಾಪಿಂಗ್ ಕಾಂಪ್ಲೆಕ್ಸ್‌ಗಾಗಿ ಕಾಯ್ದಿರಿಸಿದ ವಾಣಿಜ್ಯ ಸಾರ್ವಜನಿಕ ಸ್ಥಳವನ್ನು ಅತಿಕ್ರಮಿಸಿದ ಬಗ್ಗೆ ದೂರು. ಪ್ರಕರಣ ಸಂಖ್ಯೆ:5278/2025ಲೇಔಟ್‌ನಲ್ಲಿ ಸಾರ್ವಜನಿಕ ಶಾಪಿಂಗ ಕಾಂಪ್ಲೇಕ್ಸ್ಗಾಗಿ ಮೀಸಲಿರಿಸಿದ ಜಾಗೆಯನ್ನು ಸ್ಥಳೀಯ ಗದಗ-ಬೆಟಗೇರಿ ನಗರಸಭೆ 29ನೇ ವಾರ್ಡಿನ ಹಾಲಿ ಸದಸ್ಯರಾದ ಶ್ರೀ ಲಕ್ಷ್ಮಣ ತಂದೆ ದೇವೆಂದ್ರಪ್ಪ ಚಂದಾವರಿ ಇವರು ಈ ಆಶ್ರಯ ಕಾಮಗಾರಿಯಲ್ಲಿ ಸುಮಾರು ವರ್ಷಗಳಿಂದ ಹಸ್ತಕ್ಷೇಪ ಮಾಡುತ್ತಿದ್ದು, ಈ ಎಲ್ಲ ಫಲಾನುಭವಿಗಳನ್ನು ಸಂಘಟಿಸುತ್ತಾ ನಗರಸಭೆ ಅಧಿಕಾರಿಗಳ ಜೊತೆ ಶಾಮಿಲಾಗಿ, ಶಾಪಿಂಗ್ ಕಾಂಪ್ಲೆಕ್ಸಗಾಗಿ
ಕಾಯ್ದಿರಿಸಿದ ಜಾಗದಲ್ಲಿ ರಸ್ತೆ ನಿರ್ಮಿಸಿ, ಪಕ್ಕದಲ್ಲಿರುವ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಟ್ಟು ರಸ್ತೆ ಇರುವ ಜಾಗೆಯನ್ನು ಅತಿಕ್ರಮಿಸಲು ಕುಮ್ಮಕ್ಕು ನೀಡಿದ್ದು, ನಗರಸಭೆ ಪೌರಾಯುಕ್ತರಿಗೆ 9 ತಿಂಗಳ ಹಿಂದೆ ಈ ಬಗ್ಗೆ ದೂರನ್ನು ಸಲ್ಲಿಸಿದ್ದೇನೆ. ಹಾಗೂ ಜಿಲ್ಲಾಧಿಕಾರಿಗಳಿಗೂ ದೂರು ಲಿಖಿತವಾಗಿ ಸಲ್ಲಿಸಿದ್ದು ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನೀಯರ (ಎ.ಇ.ಇ.) ಹುಚ್ಚೇಶ ಬಂಡಿವಡ್ಡರ ಅವರಿಗೂ ಗೂ ಈ ಈ ಬಗ್ಗೆ ವಿಚಾರಿಸಿದಾಗತ ಶಿದ್ದು ಹುಣಸಿಮರದ ಸೈಟ್ ಇನಚಾರ್ಜ ಇವರಿಗೆ ಸ್ಥಳ ಪರಿಶೀಲಿಸಿ ವರದಿ ಈ ವರದಿ ನೀಡಲು ಮಾಡಿದ್ದೇನೆ ಅಂತ ಮೌಖಿಕವಾಗಿ ತಿಳಿಸಿದ್ದು ಹುಣಿಸೆ ಮರದ ಅವರು ಸ್ಥಳ ಪರಿಶೀಲನೆ ಮಾಡಿ ವರದಿ ನೀಡುವುದಿಲ್ಲ.
ನೀಡದೆ ಈ ಬ್ರಷ್ಟಾಚಾರದಲ್ಲಿ ಕರ್ತವ್ಯ ಲೋಕು ಎಸಗಿದ್ದಾರೆ. ಕೇಸ್ ವರ್ಣರ ನಾಗೆದ ಅವರು ಈ ಬಗ್ಗೆ ಹಲವಾರು ತಿಂಗಳು ಅವರ ಹತ್ತಿರ ಅಲೆದಾಡಿದರು ಸರಿಯಾದ ಮಾಹಿತಿ ನೀಡದೆ ನನ್ನ ದೂರಿಗೆ ಹಿಂಬರಹದ ಒಂದು ಪತ್ರವನ್ನು ಕಳಿಸದೇ ಈ ಹಗರಣವನ್ನು ಮುಚ್ಚಿಹಾಕಲು ಸಹಕರಿಸಿದ್ದಾರೆ. ಕಾರಣ. ಇವರ ಮೇಲೆ
1. ಲಕ್ಷಣ ದೇವೇಂದ್ರಪ್ಪ ಚಂದಾವರಿ, ಜನ ಸೇವಕ, ನಗರಸಭೆ ಹಾಲಿ ಸದಸ್ಯ ವಾರ್ಡ ನಂ. 29,
2. ರಾಜರಾಮ ಪವಾರ ಪೌರಾಯುಕ್ತರು, ಗದಗ-ಬೆಟಗೇರಿ ನಗರಸಭೆ
3. ಹುಚ್ಚೇಶ ಬಂಡಿವಡ್ಡರ ಎ.ಇ.ಇ. ಗದಗ-ಬೆಟಗೇರಿ ನಗರ ಸಭೆ.
4. ನಾಗೇಶ ಕೇಸ್ ವರ್ಕರ ಗದಗ-ಬೆಟಗೇರಿ ನಗರಸಭೆ..
5. ಸಿದ್ದು ಹುಣಸಿಮರದ ಸೈಟ್ ಇನಚಾರ್ಜ ಗದಗ-ಬೆಟಗೇರಿ ನಗರಸಭೆ.
ಈ ಮೇಲಿನ ಲಕ್ಷ್ಮಣ ದೇವೇಂದ್ರಪ್ಪ ಚಂದಾವರಿ ರಾಜಕೀಯವಾಗಿ ಪ್ರಭಾವಿಯಾಗಿದ್ದು ಸ್ಥಳೀಯ ಗದಗ ಜಿಲ್ಲೆ ಉಸ್ತುವಾರಿ ಸಚಿವರ, ಆಪ್ತನಾಗಿದ್ದು ರಾಜಕೀಯ ಪ್ರಭಾವದಿಂದ ಲಿಡ್ಕರ್ ಬಡಾವಣೆಯಲ್ಲಿ ನಿರ್ಮಿಸಿರುವ, ನಗರಸಭೆಯ ಅನುದಾನದ ಸಮೂದಾಯ ಭವನಕ್ಕೆ ತಮ್ಮ ತಂದೆ-ತಾಯಿ ದೇವಕಿ-ದೇವೇಂದ್ರಪ್ಪ ಚಂದಾವರಿ ಸಭಾ ಭವನ ಅಂತ ಅನಧಿಕೃತವಾಗಿ ಹೆಸರನಿಟ್ಟಿದ್ದು ಇವರ ಪ್ರಭಾವ ಎಷ್ಟಿದೆ ಅನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ಈ ಬಗ್ಗೆ ಛಾಯಾಚಿತ್ರ ಲಗತ್ತಿಸಿದೆ. ಇವರ ಸದಸ್ಯತ್ವವನ್ನು ಅಮಾನತು ಮಾಡಲು ಕೇಳಿಕೊಳ್ಳುತ್ತೇನೆ.
ದೂರು ನೀಡಿದವರು ಪ್ರಕಾಶ್ ತಂದೆ ಮಾದೇವಪ್ಪಬನ್ನಿಗಿಡದ 
ಗದಗ ನಗರಸಭೆ ಪೌರಾಯುಕ್ತರಾದ ರಾಜಾರಾಮ ಪವಾರ ಇವರು ದೂರು ಕೊಟ್ಟು 9 ತಿಂಗಳು ಅವರ ಕಛೇರಿಗೆ ಅಲೆದಾದಾಡಿದರು. ಸ್ಥಳ ಪರಿಶಿಲಿಸದೇ ಸಾರ್ವಜನಿಕ ಶಾಪಿಂಗ್ ಕಾಂಪ್ಲೆಕ್ಸ್ ಸ್ಥಳ ಒತ್ತುವರಿ ಆಗಲು ಸಹಕರಿಸಿದ್ದಾರೆ. ಒತ್ತುವರಿ ಸುಮಾರು 5000 ಸಾವಿರ ಅಡಿಗಳಷ್ಟು (ಸುಮಾರು 1 ಕೋಟಿ ಬೆಲೆ ಬಾಳುವ ಸ್ಥಳವನ್ನು ಸ್ಥಳಿಕರಿಗೆ ಬಿಟ್ಟು ಈ ಹಗರಣದಲ್ಲಿ ಶಾಮಿಲಾಗಿದ್ದಾರೆ.
ಗದಗ ನಗರಸಭೆ ಎ.ಇ.ಇ. ಹುಚ್ಚೇಶ ಬಂಡಿವಡ್ಡರ ಅವರು, ಈ ದೂರು ಬಂದ ಮೇಲೆ ಹಗರಣ ನಡೆದ ಸ್ಥಳಕ್ಕೆ 9 ತಿಂಗಳೂ ಕಳೆದರೂ ಸ್ಥಳ ಪರಿಶೀಲಿಸದೇ ಕರ್ತವ್ಯ ಲೋಪ ಎಸಗಿದ್ದಾರೆ. ಈ ಶಾಪಿಂಗ್ ಕಾಂಪ್ಲೆಕ್ಸ ಸ್ಥಳದಲ್ಲಿ ರಸ್ತೆ, ನಿರ್ಮಾಣ ಮಾಡಲು ಇವರು ಕಾರಣರಾಗಿದ್ದಾರೆ. ಗುತ್ತಿಗೆದಾರರು ಕಾಂಪ್ಲೇಕ್ಷ ಸ್ಥಳದಲ್ಲಿ ರಸ್ತೆ ನಿರ್ಮಿಸಿದ ನಂತರವೂ ಬಿಲ್ಲು ಸಂದಾಯ ಮಾಡಲು ಸಹಕರಿಸಿದ್ದಾರೆ. ಇವರ ಕರ್ತವ್ಯ ಲೋಪದಿಂದಲೇ ಈ ಹಗರಣ ನಡೆದಿದ್ದು ಇವರ ಮೇಲೆ ಸೂಕ್ತ ಕ್ರಮಕೈಗೊಳ್ಳಲು ಕೋರಲಾಗಿದೆ.
ಗದಗ ನಗರಸಭೆ ನಾಗೇಶ ಆಶ್ರಯ ಯೋಜನಗಳ ಕೇಸ್‌ವರ್ಕರ ಆಗಿದ್ದು ಸುಮಾರು 14 ವರ್ಷಗಳವರೆಗೂ ಈ ನಗರ ಸಭೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು ರಾಜಕೀಯ ಪ್ರಭಾವಿಗಳಿಗೆ ಒತ್ತಾಸೆಯಾಗಿ ಸೇವೆ ಸಲ್ಲಿಸಿದ್ದು, ಈ ಹಗರಣದಲ್ಲಿ ಸರಿಯಾಗಿ ಮಾಹಿತಿ ನೀಡದೇ ದೂರಿಗೆ ಹಿಂಬರಹ ಬರೆಯದೇ ಹಾರಿಕೆಯ ಉತ್ತರ ಕೊಡುತ್ತಾ ದೂರೂದಾರರಾದ ನನ್ನನ್ನು 9 ತಿಂಗಳು ಅಲೆದಾಡಿಸಿದ್ದಾನೆ. ಈ ಹಗರಣದಲ್ಲಿ ಪ್ರಕರಣ ಮುಚ್ಚಿ ಹಾಕಲು ಪೋಡಿ ಮಾಡಲು ತಹಶೀಲ್ದಾರರಿಗೆ ಸೂಚಿಸಿದ್ದು, ಅದು ಬಂದ ನಂತರ ಈ ಬಗ್ಗೆ ಗೊತ್ತಾಗುತ್ತದೆ ಅಂತ ದಾರಿ ತಪ್ಪಿಸಿದ್ದು ಈ ಹಗರಣದಲ್ಲಿ ಭಾಗಿ ಆಗಿದ್ದಾನೆ. ಕಾನೂನಿನ ಪ್ರಕಾರ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲು ಈ ಮೂಲಕ ಕೋರಿಕೊಳ್ಳುತ್ತೇನೆ.
ಗದಗ ನಗರಸಭೆ ಎ.ಇ.ಇ. ಬಂಡಿವಡ್ಡರ ಅವರು ಸಿದ್ದು ಹುಣಸಿಮರದ ಇವರಿಗೆ ಸ್ಥಳ ಪರೀಶಿಲಿಸಿ ಹಗರಣ ನಡೆದ ಬಗ್ಗೆ ವರದಿ ನೀಡಲು ಆದೇಶ ರವಾನಿಸಿದ್ದು 9 ತಿಂಗಳಾದರೂ ಈ ಬಗ್ಗೆ ವರದಿ ನೀಡದೇ ಶಾಪಿಂಗ್ ಕಾಂಪ್ಲೆಕ್ಸ್ ಸ್ಥಳ ಒತ್ತುವರಿ ಆಗಲು ಸಹಕರಿಸಿದ್ದಾನೆ.
ಈ ಮೇಲಿನ ಎಲ್ಲರ ಮೇಲೆ ತನಿಖೆ ಮಾಡಿ ಸ್ಥಳ ಪರಿಶೀಲನೆ ಮಾಡಿ ಈ ಮೇಲಿನ ಎಲ್ಲ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳಲು ಕೋರಿಕೊಳ್ಳುತ್ತೇನೆ. ಸಾರ್ವಜನಿಕ ಶಾಪಿಂಗ್ ಕಾಂಪ್ಲೆಕ್ಸ ಸ್ಥಳವನ್ನು ಸಾರ್ವಜನಿಕರ ಒಳಕೆಗಾಗಿ ಅನುಕೂಲ ಮಾಡಲು ಈ ಮೂಲಕ ದೂರನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದರು.
ವರದಿ: ನೀಡಿದವರು ದೂರದಾರರು ಪ್ರಕಾಶ್ ಮಾದೇವಪ್ಪ ಬನ್ನಿಗಿಡದ.