ಕರುನಾಡು ಘರ್ಜನೆ ಸುದ್ದಿ ಗದಗ 11: ಗದಗಿನ ಹೆಮ್ಮೆಯ ಕಣ್ಮಣಿ ದಕ್ಷ, ಧೈರ್ಯ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳು ನಮ್ಮೂರು ಗದಗಿನವರಾದ ಸಬ್ಇನ್ಸ್ಪೆಕ್ಟರ್ ಮಾರುತಿ ಜೋಗದಂಡ್ಕರ್ ರವರು ಎಂದು ಗದಗ ಜಿಲ್ಲಾ ಯುವ ಕಾಂಗ್ರೇಸ್ ಮಾಜಿ ಅಧ್ಯಕ್ಷರಾದ ರವಿಕುಮಾರ ರಡ್ಡಿ ಅವರು ಹೆಮ್ಮೆಯಿಂದ ಹೇಳಿದರು
ಅವರು ರಾಷ್ಟ್ರಪತಿ ಪದಕಕ್ಕೆ ಭಾಜನರಾದ ಗದಗ ಶಹರ ರಾಜೀವಗಾಂದಿ ನಗರ ಬಡಾವಣೆಯ ಪೋಲಿಸ್ ಸಬ್‌ಇನ್ಸಪೆಕ್ಟರ್ ಮಾರುತಿ ಜೋಗದಂಡ್ಕರ ರವರಿಗೆ ಗೌರವ ಸನ್ಮಾನ ಸಲ್ಲಿಸಿ ಮಾತನಾಡಿ ಮಾರುತಿ ಜೋಗದಂಡ್ಕರ ಸಾಹೇಬರು ಅವರ ವೃತ್ತಿಜೀವನದುದ್ದಕ್ಕೂ ಸಾರ್ವಜನಿಕ ಸೇವೆಯ ಕಡೆಗೆ ಅವರ ಅಪಾರ ಸಮರ್ಪಣೆ, ಶಿಸ್ತು, ನಿಷ್ಠೆ ಮತ್ತು ಸೇವಾ ಮನೋಭಾವಕ್ಕಾಗಿ ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ. ಇದು ಇಡೀ ಗದಗ ಜಿಲ್ಲೆಗೆ ಸಂದ ಗೌರವವಾಗಿದೆ ಎಂದ ಅವರು ಶ್ರೀಯುತರು ಅವರ ವೃತ್ತಿಜೀವನದಲ್ಲಿ ಅವರ ನೈತಿಕತೆ, ವೃತ್ತಿಪರತೆ, ಪ್ರಾಮಾಣಿಕತೆ, ಧೈರ್ಯ ಮತ್ತು ಜನಸ್ನೇಹಿ ಕೆಲಸದ ಕಾರ್ಯ ಶೈಲಿಗಾಗಿ ಈಗಾಗಲೇ ಅನೇಕ ಸ್ಥಳಗಳಲ್ಲಿ ಸನ್ಮಾನಿಸಲ್ಪಟ್ಟಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ, ಅಪರಾಧವನ್ನು ತಡೆಗಟ್ಟುವಲ್ಲಿ ಮತ್ತು ಸರ್ವ ಸಮುದಾಯದೊಂದಿಗೆ ಸಕ್ರಿಯವಾಗಿ ಬೆರೆಯುವ ಸಂವಹನ ನಡೆಸುವ ಅವರ ಪ್ರೋತ್ಸಾಹದಾಯಕ ಮನೋಭಾವವು ಅವರನ್ನು ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಅತ್ಯಂತ ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ಅಧಿಕಾರಿಗಳಲ್ಲಿ ಒಬ್ಬರನ್ನಾಗಿ ಮಾಡಿದೆ. ಅಂತಹ ನಿಸ್ವಾರ್ಥ ಸೇವಾ ಮನೋಭಾವವನ್ನು ಹೊಂದಿರುವ ಮಾರುತಿ ಜೋಗದಂಡ್ಕರ್ ಅವರಿಗೆ ರಾಷ್ಟ್ರಪತಿಗಳಿಂದ ಚಿನ್ನದ ಪದಕಕ್ಕೆ ಭಾಜನರಾಗಿ ಅತ್ಯುನ್ನತ ಗೌರವ ಪಡೆದಿರುವುದು ನಮ್ಮೂರಿನ ಮಾದರಿಯ ಕಿರೀಟ ಸಾಧನೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿ ಮಾತನಾಡಿದರು
ಈ ಸಂದರ್ಭದಲ್ಲಿ ಕೀರಣ ರಡ್ಡಿ. ಹಿರಿಯರಾದ ಹನಮಂತಪ್ಪ ರಾಂಪೂರ ಪಾಂಡು ಕಾಳೆ. ಗದಗ ಜಿಲ್ಲಾ ಸವಿತಾ ಸಮಾಝದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಪ್ರಮುಖರಾದ ಶ್ರೀನಿವಾಸ ಕೊಟೇಕಲ್ಲ ಹಾಗೂ ಇತರರು ಉಪಸ್ತಿತರಿದ್ದರು.