ಕರುನಾಡು ಘರ್ಜನೆ ಸುದ್ದಿ ಗದಗ 14: ಸವಿತಾ ಸಮಾಜವು ನೈಜ ಕಾಯಕ ವರ್ಗವಾಗಿದ್ದು, ಕಾಯಕದಲ್ಲಿ ಕೈಲಾಸ ಕಾಣುವ ಶ್ರಮಿಕರಾಗಿದ್ದಾರೆ ಎಂದು ಗದಗ ಜಿಲ್ಲಾ ಯುವ ಕಾಂಗ್ರೇಸ್ ಜಿಲ್ಲಾಧ್ಯಕ್ಷರಾದ ಕೃಷ್ಣಗೌಡ್ರ ಪಾಟೀಲರು ಹೇಳಿದರು
ಅವರು ಗದಗ ಜಿಲ್ಲಾ ಸವಿತಾ ಸಮಾಜದಿಂದ ಹಮ್ಮಿಕೊಂಡ ಕ್ರಿಕೇಟ್ ಟೂರ್ನಾಮಿಂಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಕ್ರಿಕೇಟ್ ಆಡುವ ಮೂಲಕ ಉದ್ಘಾಟಿಸಿ ಮಾತನಾಡಿ ಕಾಯಕ ತತ್ವ ನಿಜವಾಗಿ ಪಾಲಿಸುತ್ತಿರುವ ಸಮುದಾಯ ಸವಿತಾ ಸಮಾಜ. ಜಗತ್ತಿಗೆ ಅತ್ಯಂತ ದೊಡ್ಡ ಕೊಡುಗೆ ಈ ಸಮಾಜ ನೀಡಿದೆ ಎಂದರು.
ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ತನ್ನ ವೃತ್ತಿ ಬಿಡಬಾರದು, ಯಾವುದೇ ವೃತ್ತಿ ಕೀಳಲ್ಲ, ಕಾಯಕದಲ್ಲಿ ಶ್ರೇಷ್ಠತೆ ಕಾಣಬೇಕಾದರೆ ಶ್ರದ್ಧೆ, ಪ್ರಾಮಾಣಿಕತೆ ಇರಬೇಕು ಎಂದ ಅವರು ಸೌಂದರ್ಯ ಸಮಾಜ ನಿರ್ಮಾಣದಲ್ಲಿ ವೇದಗಳ ಕಾಲದಿಂದಲೂ ಕ್ಷೌರ ಸೇವೆ ಮಾಡುತ್ತಿರುವ ಸವಿತಾ ಸಮಾಜದ ಕಾರ್ಯ ಶ್ಲಾಘನೀಯ ಎಂದು ಬಣ್ಣಸಿದರು.
ನೂರಾರು ವರ್ಷಗಳಿಂದ ಸಮಾಜದ ಸೇವೆ ಮಾಡುತ್ತಿರುವ ಸವಿತಾ ಸಮಾಜ ಜನರು ನೈಜ ಕಾಯಕ ಜೀವಿಗಳು. ಬದಲಾದ ದಿನಮಾನಗಳಲ್ಲಿ ಯುವಕರು ತಮ್ಮ ವೃತ್ತಿಗೆ ಆಧುನಿಕ ಸ್ಪರ್ಶ ನೀಡುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು ಎಂದು ಸಲಹೆ ನೀಡಿದರು.
ನನ್ನ ವೃತ್ತಿ ನನಗೆ ಶ್ರೇಷ್ಠವೆಂಬ ಮನೋಭಾವ ಸಮಾಜದ ಯುವಕರಲ್ಲಿ ಬೆಳೆಯಬೇಕಾಗಿದೆ ಎಂದರಲ್ಲದೆ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಅವರ ನೆತ್ರೂತ್ವದ ತಂಡವು ಸಮಸ್ತ ಗದಗ ಜಿಲ್ಲೆಯ ಸವಿತಾ ಸಮಾಜದ ಅಭಿವೃದ್ಧಿಗಾಗಿ ಅನೇಕ ರೀತಿಯಲ್ಲಿ ರಚನಾತ್ಮಕ ಸಭೆ ಸಮಾರಂಭಗಳು ಹಮ್ಮಿಕೊಂಡು ಸಂಘಟನೆ ಬಲವರ್ಧನೆ ಹಾಗೂ ಸಮಾಜ ಬಾಂಧವರಿಗೆ ಸರಕಾರದಿಂದ ಸಿಗುವಂತಹ ಸೌಲಭ್ಯಗಳು ದೊರಕಿಸಿ ಕೊಡಲು ಹಗಲು ರಾತ್ರಿಯನ್ನದೆ ಸಾಕಸ್ಟು ಸೇವೆ ಸಲ್ಲಿಸುತ್ತಿರುವುದು ಸಂತಸದ ತಂದಿದೆ ಎಂದು ಕೃಷ್ಣಗೌಡ್ರು ಪಾಟೀಲರು ಹರ್ಷ ವ್ಯಕ್ತಪಡಿಸಿ ಮಾತನಾಡಿ ಸವಿತಾ ಸಮಾಜದ ಅಭಿವೃದ್ಧಿ, ಸೇವೆಗಾಗಿ ಹೆಚ್ಚಿನ ಅನುದಾನ ಮತ್ತು ಸೌಲಭ್ಯಗಳು ನೀಡಲು ನಾನು ನಮ್ಮ ಹಿರಿಯರು ಸದಾ ಸಿದ್ಧ. ಎಲ್ಲ ರೀತಿಯ ಸಹಕಾರಕ್ಕೆ ತಾವುಗಳು ಮುಂದಾಗುವುದಾಗಿ ಭರವಸೆ ನೀಡಿದರು
ಈ ಸಂದರ್ಭದಲ್ಲಿ ಹಿರಿಯರಾದ ಹನಮಂತಪ್ಪ ರಾಂಪೂರ. ನಾಸೀರ ಮುಲ್ಲಾ. ಪರಶುರಾಮ (ಬಜ್ಜಣ್ಣ) ರಾಂಪೂರ. ಬಾಲರಾಜ ಕೊಟೇಕಲ್ಲ. ಅಬ್ದುಲಮುನಾಫ ಮುಲ್ಲಾ. ರಾಜು ಮಾನೆ. ದೀಪಕ ಮಾನೆ. ಪಾಂಡು ಕಾಳೆ. ವಿಕಾಸ ಕ್ಷೀರಸಾಗರ. ಸುಧೀರ ಮಾನೆ. ಪರಶುರಾಮ ಕೊಟೇಕಲ್ಲ. ಜಂಮ್ಮಣ್ಣ ಕಡಮೂರ. ರಮೇಶ ರಾಂಪೂರ ಪ್ರಮುಕರಾದ ಮಂಜುನಾಥ ಮಾನೆ. ತುಕಾರಾಮ ಮಾನೆ. ವಿಶಾಲ ಮಾನೆ. ಧಿನೇಶ ಕ್ಷೀರಸಾಗರ. ಹೇಮಂತ ವಡ್ಡೆಪಲ್ಲಿ. ಶ್ರೀನಿವಾಸ ಕೊಟೇಕಲ್ಲ. ಸುರೇಶ ಬುದೂರ. ಪರಶುರಾಮ ದಾವಣಗೇರಿ. ವಿಕ್ರಮ ಕ್ಷೀರಸಾಗರ. ಗಣೇಶ ಕಡಮೂರ. ಪ್ರಕಾಶ ಬುದೂರ. ಸುನೀಲ ರಾಯಚೂರ. ಕೃಷ್ಣಾ ಬುದೂರ. ವೆಂಕಟೇಶ ಕೊಟೇಕಲ್ಲ. ವಿಜಯ ಬುದೂರ. ತುಕಾರಾಮ ವಡ್ಡೆಪಲ್ಲೆ. ರಾಹೂಲ ಕೊಟೊಕಲ್ಲ. ಆದರ್ಶ ಮಾನೆ. ರಾಹೂಲ ಮೋಮ್ಮಗ. ವಿನಾಯಕ ರಾಯಚೂರ. ಹಾಗೂ ಸಮಾಜದ ನೂರಾರು ಬಾಂಧವರು ಉಪಸ್ತಿತರಿದ್ದರು.