Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
Uncategorized

ಅರಸಿಕೆರೆ ಗ್ಲಾಮರ್ ಕೇರ್ ಸಂಸ್ಥೆಯಿಂದ ವಿಶ್ವ ಕ್ಷೌರಿಕರ ದಿನ ಆಚರಣೆ – ಸನ್ಮಾನ

ಕರುನಾಡು ಘರ್ಜನೆ ಸುದ್ದಿ ಗದಗ 18: ಸವಿತಾ ಸಮಾಜಕ್ಕೆ ಸಂಬಂದಿಸಿದ 26 ಉಪಪಂಗಡದ ಕ್ಷೌರಿಕರು ವಿವಿಧ ಜಾತಿ ಸೂಚಕ ಹೆಸರುಗಳನ್ನು ಬಿಟ್ಟು, ಸಮುದಾಯದ ಮೂಲ ಹೆಸರನ್ನೇ ನೇರವಾಗಿ ಸವಿತಾ ಸಮಾಜ ಎಂದೇ ನಮೂದಿಸಬೆಕೇಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ…

ಕರುನಾಡು ಘರ್ಜನೆ ಸುದ್ದಿ ಗದಗ 18: ಸವಿತಾ ಸಮಾಜಕ್ಕೆ ಸಂಬಂದಿಸಿದ 26 ಉಪಪಂಗಡದ ಕ್ಷೌರಿಕರು ವಿವಿಧ ಜಾತಿ ಸೂಚಕ ಹೆಸರುಗಳನ್ನು ಬಿಟ್ಟು, ಸಮುದಾಯದ ಮೂಲ ಹೆಸರನ್ನೇ ನೇರವಾಗಿ ಸವಿತಾ ಸಮಾಜ ಎಂದೇ ನಮೂದಿಸಬೆಕೇಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಸವಿತಾ ಸಮಾಜದ ಕ್ಷೌರಿಕ ಬಾಂಧವರಲ್ಲಿ ಮನವಿ ಮಾಡಿ ಕರೆ ನೀಡಿದರು

ಅವರು ಅರಸಿಕೆರೆಯಲ್ಲಿ ಕಡೂರ ರವಿಕುಮಾರ ಮಾಲಿಕತ್ವದ ಗ್ಲಾಮರ್ ಕೇರ್ ಸಂಸ್ಥೆಯಿಂದ ಹಮ್ಮಿಕೊಂಡ ವಿಶ್ವ ಕ್ಷೌರಿಕರ ದಿನ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಸ್ಥೆ ವತಿಯಿಂದ ಸಲ್ಲಿಸಿದ ಪ್ರೀತಿಯ ಗೌರವ ಸನ್ಮಾನ ಸ್ವಿಕರಿಸಿ ಮಾತನಾಡಿ ರಾಜ್ಯದ ಸಮಸ್ತ ಕ್ಷೌರಿಕರ ಮನೆಗೆ ಬರುವ ಸಮೀಕ್ಷಕರಿಗೆ ಜಾತಿ ಕಾಲಂನಲ್ಲಿ ನಮ್ಮ ಜಾತಿಯನ್ನು ‘ಸವಿತಾ ಸಮಾಜ’ ಉಪಜಾತಿಯನ್ನು “ಕ್ಷೌರಿಕ” ದರ್ಮ “ಹಿಂದು” ಎಂದು ನಮೂದಿಸಲು ಮುಲಾಜಿಲ್ಲದೆ ತಿಳಿಸಬೇಕು ಇದು ಸವಿತಾ ಸಮಾಜದ ಒಗ್ಗಟ್ಟನ್ನು ತೋರಿಸುವುದಲ್ಲದೆ, ಸಮುದಾಯದ ಸರಿಯಾದ ಪ್ರತಿನಿಧಿಸುವಿಕೆಗೆ ಸಹಕಾರಿಯಾಗುತ್ತದೆ ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಅವರು ಸವಿತಾ ಸಮಾಜದ ಕ್ಷೌರಿಕ ಬಾಂಧವರಲ್ಲಿ ಮನವಿ ಮಾಡಿದರು

ಕರ್ನಾಟಕ ರಾಜ್ಯ ಸವಿತಾ ಸಮಾಜದ ರಾಜ್ಯ ನಿರ್ದೇಶಕರು ಮತ್ತು ಗ್ಲಾಮರ್ ಕೇರ್ ಸಂಸ್ಥೆಯ ಮಾಲೀಕರಾದ ಕಡೂರ ರವಿಕುಮಾರ ಮಾತನಾಡಿ ಗದಗ ಕೃಷ್ಣಾ ಎಚ್ ಹಡಪದ ಅವರು 26 ವರ್ಷಗಳಿಂದ ಸವಿತಾ ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಸಂಘಟನೆ ಮಾಡುತ್ತಾ ಸರ್ಕಾರದ ಮಟ್ಟದಲ್ಲಿ ಹಲವಾರು ಬೇಡಿಕೆಗಳನ್ನು ಸಲ್ಲಿಸಿ ಪಟ್ಟು ಹಿಡಿದು ಅದನ್ನು ಸಾಕಾರ ಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ, ನಿರ್ಗತಿಕ ಬಡ ಕ್ಷೌರಿಕರಿಗಾಗಿ ಸರಕಾರದಿಂದ ಕ್ಷೌರಕುಟೀರ ಮಾಡಬೇಕೆಂಬ ಪ್ರಸ್ತಾಪವನ್ನು

ಮುಖ್ಯಮಂತ್ರಿಗಳಿಗೆ ಸಲ್ಲಿಸಿ ಸರ್ಕಾರದ ಗಮನ ಸೆಳೆಯುವಲ್ಲಿ ಬಹು ಮುಖ್ಯ ಪಾತ್ರಗೈದ ಅವರು ಕರ್ನಾಟಕ ರಾಜ್ಯ ಇತಿಹಾಸದಲ್ಲೇ ರಾಜ್ಯದ ಪ್ರಥಮವಾದ ಗದಗನಲ್ಲಿ ಒಂದು ಪ್ರಮುಖ ವೃತ್ತಕ್ಕೆ ಶ್ರೀ ಸವಿತಾ ಮಹರ್ಷಿ ಗುರುಗಳ ನಾಮಕರಣ ಮಾಡಿಸಿದ್ದು ಹೀಗೆ ಸಮಾಜದ ಮುಖ್ಯವಾಗಿ ಸಾವಿರಾರು ಕೆಲಸಗಳನ್ನು ನಿರಂತರವಾಗಿ ಮಾಡುತ್ತಾ ಬಂದಿರುವ ಗದಗ ಕೃಷ್ಣಾ ಎಚ್ ಹಡಪದ ಅವರನ್ನು ವಿಶ್ವ ಕ್ಷೌರಿಕ ದಿನಾಚರಣೆ ಪ್ರಯುಕ್ತ ಗ್ಲಾಮರ್ ಕೇ‌ರ್ ಅರಸೀಕೆರೆ ಸಂಸ್ಥೆಯಿಂದ ಗೌರವ ಸನ್ಮಾನ ಸಲ್ಲಿಸಿ ಗೌರವಿಸಿದ್ದು ಹೆಮ್ಮೆ ಅನಿಸುತ್ತದೆ. ಎಂದು ಹೇಳಿದರು

ಈ ಸಂದರ್ಭದಲ್ಲಿ ಗದಗ ಜಿಲ್ಲಾ ಸವಿತಾ ಸಮಾಜದ ಯುವ ನಾಯಕರಾದ ವಿನಾಯಕ ರಾಯಚೂರ. ಬೆಳಗಾವಿನ ಸಮಾಜದ ಯುವ ಮುಖಂಡರಾದ ಪ್ರಮೋದ್ ಚಿಂಚಲಿ, ಗ್ಲಾಮರ್ ಕೇರ್ ನ ವ್ಯವಸ್ಥಾಪಕರಲ್ಲೊಬ್ಬರಾದ ಜೈವಿತ್ ಕೆ ಆರ್, ಸಿಬ್ಬಂದಿಗಳಾದ ವಿನಾಯಕ್ , ಸಂತೋಷ್ ಇತರರು ಇದ್ದರು.

Editor

Leave a comment