ಕರುನಾಡು ಘರ್ಜನೆ ಸುದ್ದಿ : ಬೀದರ ಇಂದು ವೆಲ್ಫೇರ್ ಪಾರ್ಟಿಯ ಸಭೆಯಲ್ಲಿ ಪಕ್ಷದ ಚಟುವಟಿಕೆಗಳ ಅವಲೋಕನದ ಜೊತೆಗೆ ಅಕ್ಟೋಬರ್ ತಿಂಗಳಲ್ಲಿ ಬೀದರ್ ಜಿಲ್ಲೆಗೆ ಆಗಮಿಸುವ ಕಲ್ಯಾಣ ಕರ್ನಾಟಕ ಜಾಥಾ ಯಶಸ್ವಿಯಾಗಲು ಕಾರ್ಯತಂತ್ರ ರೂಪಿಸಲಾಯಿತು.
ವೆಲ್ಫೇರ್ ಪಾರ್ಟಿ ರಾಜ್ಯದ್ಯಕ್ಷರು ಅಡ್ವೊಕೇಟ್ ತಾಹೇರ್ ಹುಸೇನ್, ರಾಜ್ಯ ಉಪಾಧ್ಯಕ್ಷ ಮುಜಾಹಿದ್ ಪಾಷಾ ಕುರೈಷಿ ಹಾಗೂ ಜಿಲ್ಲಾ ಅಧ್ಯಕ್ಷ ಮುಬಶೀರ್ ಶಿಂಡೆ ಪ್ರಮುಖವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಬಗ್ದಲ್ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಝಮೀರ್ ಅಹ್ಮದ್, ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಸೇರಿದಂತೆ ಜಿಲ್ಲೆಯ ಇತರೆ ಮುಖಂಡರು ಉಪಸ್ಥಿತರಿದ್ದರು.ಇದೆ ಸಂಧರ್ಭ ದಲ್ಲಿ ಔರಾದ್ ದಿಂದ ಬಂದ ಕೆಲ ಯುವಕರು ಪಕ್ಷ ಸೇರ್ಪಡೆ ಯಾದರು.