ಕರುನಾಡು ಘರ್ಜನೆ ಸುದ್ದಿ ಗದಗ 22: ದಿನಾಂಕ 22/09/2025 ರಿಂದ 07/10/2025 ವರೆಗೆ ನಡೆಯಲಿರುವ ಜಾತಿ ಸಮೀಕ್ಷೆಯಲ್ಲಿ ಗಣತಿದಾರರಾದ
ತಾವುಗಳು ನಮ್ಮ ಕ್ಷೌರಿಕ ಸವಿತಾ ಸಮಾಜದ ಕುಲ ಬಾಂಧವರ ಮನೆಗಳಿಗೆ ಸಮೀಕ್ಷೆಗೆ ಹೋದಾಗ ಧರ್ಮ: ಹಿಂದೂ. ಜಾತಿ: ಸವಿತಾ ಸಮಾಜ ಉಪ ಜಾತಿ: ಕ್ಷೌರಿಕ. ವೃತ್ತಿ: ಕ್ಷೌರಿಕ/ ಮಂಗಳವಾದ್ಯ 59.ನೇ ಪ್ರಶ್ನೆಯಲ್ಲಿ ಜಾತಿ ಆಧಾರದ ಮೇಲೆ ತುಂಬಾ ಬೇಧ ಭಾವ ಅನುಭವಿಸುತ್ತಿದ್ದೀರಾ ಎಂಬ
ಪ್ರಶ್ನೆಗೆ ಹೌದು ಎಂದು ನಮೂದಿಸಿ ಅನಕೂಲ ಮಾಡಿಕೊಡಬೆಕೇಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಅವರು ಜಾತಿ ಸಮೀಕ್ಷೆ ನಡೆಸುವ ಗಣತಿದಾರರಲ್ಲಿ ಮನವಿ ಮಾಡಿದರು ಮತ್ತು ಗಣತಿದಾರರು ತಮ್ಮ ಸಿಬ್ಬಂದಿಗಳಿಗೂ ಸಹೋದ್ಯೋಗಿಗಳಿಗೂ ಕೂಡಾ ತಿಳಿಸಿ ಸಹಕರಿಸಲು ವಿನಂತಿಸಿದರು
ಕರ್ನಾಟಕ ರಾಜ್ಯ ಸವಿತಾ ಸಮಾಜದ ರಾಜ್ಯ ನಾಯಕರಾದ ಬೈಲಪ್ಪ ನಾರಾಯಣಸ್ವಾಮಿ ಅವರು ಮಾತನಾಡಿ ಜಾತಿ ಗಣತಿಯಲ್ಲಿ ಒಗ್ಗಟ್ಟು ಪ್ರದರ್ಶಿಸಿ ಒಂದೇ ಮಾದರಿಯಲ್ಲಿ ಮೇಲೆ ಹೇಳಿರುವ ಜಾತಿ -ಉಪಜಾತಿ ಮತ್ತು ಇನ್ನೂಳಿದ ವಿಷಯಗಳ ಬಗ್ಗೆ ಮಾಹಿತಿಯನ್ನು ಹೇಳಿದಾಗ ಮಾತ್ರ ನಾವು ಸಮಾಜಿಕವಾಗಿ, ಶೈಕ್ಷಣಿಕ ವಾಗಿ, ಉದ್ಯೋಗ, ರಾಜಕೀಯವಾಗಿ ಹಿಂದುಳಿದವರು ಎಂದು ಸರಕಾರಕ್ಕೆ ಮನವರಿಕೆಯಾಗುತ್ತದೆ. ಹಾಗಾಗಿ ದಯವಿಟ್ಟು ಜಾತಿ ಕಲಾಂನಲ್ಲಿ ಸವಿತಾ ಸಮಾಜ ಎಂದು ಬರೆಯಿಸಿ. ಬೇರೆ ಯಾವುದೇ ಜಾತಿಯ ಹೆಸರು ಬರೆಯಿಸಬೇಡಿ. ಉಪಜಾತಿಯಲ್ಲಿ ಮತ್ತು ಇನ್ನಿತರೆ ಜಾತಿಯಲ್ಲಿ ಕ್ಷೌರಿಕ ಎಂದು ಬರೆಯಿಸಿ ಎಂದು ಕ್ಷೌರಿಕ ಸವಿತಾ ಸಮಾಜ ಬಾಂಧವರಲ್ಲಿ ಮನವಿ ಮಾಡಿ ಮಾತನಾಡಿ ಇದೆ ಮಾದರಿಯಲ್ಲಿ ನಮ್ಮ ಸವಿತಾ ಸಮಾಜದ ಮೂಲ ದರ್ಮ ಹಿಂದು. ಜಾತಿ: ಸವಿತಾ ಸಮಾಜ. ಉಪಜಾತಿ ಕಾಲಂನಲ್ಲಿ ಕ್ಷೌರಿಕ. ಸೇರಿದಂತೆ ಸವಿತಾ ಸಮಾಜದಲ್ಲಿ ಗುರುತಿಸಿಕೊಂಡ 26 ಉಪ ಪಂಗಡದ ತಂತಮ್ಮ ಉಪಜಾತಿ ಹೆಸರು ಬರೆಯಿಸಬೇಕು ಮತ್ತು ವೃತ್ತಿ ಕ್ಷೌರಿಕ. ಎಂದು ನಮೂದಿಸುವುದರಿಂದ ಸಮೂದಯದ ಜನಸಂಖ್ಯೆ ನಿಖರವಾಗಿ ಸರಕಾರಕ್ಕೆ ತಿಳಿಯುತ್ತದೆ ಎಂದು ಸಮಾಜ ಬಾಂಧವರಲ್ಲಿ ಪ್ರಕಟಣೆ ಮೂಲಕ ಮನವರಿಕೆ ಮಾಡಿ ಹೇಳಿದ್ದಾರೆ.