ಕರುನಾಡು ಘರ್ಜನೆ ಸುದ್ದಿ : ಗದಗ ದಿನಾಂಕ : 10-10-2025 ರಂದು ಗದಗ -ಬೆಟಗೇರಿ ನಗರದಲ್ಲಿ ಸಂಚಾರ ಪೊಲೀಸ್ ಠಾಣೆಯ ವತಿಯಿಂದ ನಡೆಸಲಾದ ವಿಶೇಷ ಕಾರ್ಯಾಚರಣೆಯಲ್ಲಿ, ದೋಷಪೂರಿತ ಹಾಗೂ ಕರ್ಕಶ ಶಬ್ದ ಉಂಟುಮಾಡುವ ‘ಸೈಲೆನ್ಸರ್’ಗಳನ್ನು ಅಳವಡಿಸಿಕೊಂಡು ಸಾರ್ವಜನಿಕರಿಗೆ ಅನಾನೂಕೂಲತೆ ಉಂಟುಮಾಡುತ್ತಿದ್ದ ಬೈಕ್‌ಗಳನ್ನು ವಶಪಡಿಸಿಕೊಂಡು ಪ್ರಕರಣಗಳನ್ನು ದಾಖಲಿಸಿರುತ್ತದೆ.
ಈ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡ ಒಟ್ಟು 104 ದೋಷಪೂರಿತ ಸೈಲೆನ್ಸರ್‌ಗಳನ್ನು ಈ ದಿನ ನಾಶಪಡಿಸಿದ್ದು ಇರುತ್ತದೆ.
ಮುಂದೆ ದ್ವಿ ಚಕ್ರ ವಾಹನ ಸವಾರರು ತಮ್ಮ ದೋಷಪೂರಿತ ಕರ್ಕಶ ಶಬ್ದ ಉಂಟುಮಾಡುವ ಸೈಲೆನ್ಸರಗಳನ್ನು ಅಳವಡಿಸಿದ್ದು ಕಂಡು ಬಂದಲ್ಲಿ ಅಂತವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಕೊಳ್ಳುತ್ತೇನೆ ಅಂತಾ ತಿಳಸಲಾಗಿರುತ್ತದೆ.
ಈ ಕಾರ್ಯಾಚರಣೆಯಲ್ಲಿ ಮಾನ್ಯ ಶ್ರೀ ರೋಹನ್ ಜಗದೀಶ , ಐಪಿಎಸ್ ಪೊಲೀಸ್ ಅಧೀಕ್ಷಕರು , ಗದಗ ಜಿಲ್ಲೆ ಗದಗ , ಮಾನ್ಯ ಶ್ರೀ ಮುರ್ತುಜಾ ಖಾದ್ರಿ ಡಿ.ಎಸ್.ಪಿ ಗದಗ ಉಪವಿಭಾಗ ಗದಗರವರ ನೇತೃತ್ವದಲ್ಲಿ , ಶ್ರೀ ಧೀರಜ್ ಶಿಂಧೆ ಸಿಪಿಐ ಬೆಟಗೇರಿ ರವರ ಮಾರ್ಗದರ್ಶನದಲ್ಲಿ , ಶ್ರೀ ಕಿರಣಕುಮಾರ ಪಿ ಎಸ್ ಐ ಹಾಗೂ ಶ್ರೀಮತಿ ಬಿ ಎಸ್ ತಳವಾರ ಪಿ ಎಸ್ ಐ ಗದಗ ಸಂಚಾರ ಪೊಲೀಸ್ ಠಾಣೆ ಹಾಗೂ ಸಂಚಾರ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಸೇರಿ ಈ ಕಾರ್ಯಚರಣಿ ಮಾಡಿದರು.