ಕರುನಾಡು ಘರ್ಜನೆ ಸುದ್ದಿ : ಗದಗ ಮಾನವ ಹಕ್ಕುಗಳ ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ-ದೆಹಲಿ ಗದಗ ಘಟಕ್ ವತಿಯಿಂದ ಗದಗ ಜಿಲ್ಲೆಯಾದ್ಯಂತ ದೀಪಾವಳಿಯ ಹಬ್ಬದ ನೆಪದಲ್ಲಿ ಎಲ್ಲ ಅಂಗಡಿ ಮನೆ ಹಾಗೂ ಪುಟ್ ಪಾತ್ ನಲ್ಲಿ ಪೆಂಡಾಲ್ ಹಾಕಿ, ಸುತ್ತಲೂ ಪರದೆ ಕಟ್ಟಿ ರಾಜಾರೋಷವಾಗಿ ಇಸ್ಪೇಟ್ ಮತ್ತು ಜೂಜಾಟವು ಯಾರ ಭಯವಿಲ್ಲದೇ ಲೀಲಾಜಾಲವಾಗಿ ನಡೆಯುತ್ತಿದೆ.
ಬರಗಾಲದ ಪರಿಸ್ಥಿತಿಯಿಂದ ಸಾವಿರಾರು ಕುಟುಂಬಗಳು ಸಂಕಷ್ಟದಲ್ಲಿರುವಾಗ ಈ ಇಸ್ಟೇಟ್ ಹಾಗೂ ಜೂಜಾಟದಿಂದ ಬಹಳಷ್ಟು ಕುಟುಂಬಗಳು ಹಣ ಕಳೆದು ಕೊಳ್ಳುವುದರೊಂದಿಗೆ ಸಾಲ ಮಾಡಿ ಸಮಸ್ಯೆಗಳ ಸುಳಿಗೆ ಸಿಲುಕಿ, ಮನೆಯಲ್ಲಿರುವ ಬೆಲೆಬಾಳುವ ವಸ್ತುಗಳನ್ನು, ಮಹಿಳೆಯರ ತಾಳಿಯನ್ನು ಕೂಡಾ ಅಡುವಿಟ್ಟು ಜೂಜಾಟವಾಡುತ್ತಿರುವುದರಿಂದ ತಾಯಂದಿರು ಹಾಗೂ ಮಹಿಳೆಯರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ.
ಎಲ್ಲರ ಬಾಳಿನಲ್ಲಿ ಬೆಳಕು ಚಲ್ಲುವ ದೀಪಾವಳಿ ಹಬ್ಬದ ದಿನವೇ ಸಾವಿರಾರು ಕುಟುಂಬಗಳು ಕಂಗಾಲಾಗಿ ಬೀದಿಗೆ ಬಿಳುತ್ತಿರುವುದು ವಿಷಾದನೀಯ.
ತಾವುಗಳು ತಮ್ಮ ಇಲಾಖೆಯಿಂದ ಇಸ್ಪೀಟ್ ಜೂಜಾಟ ನಿಷೇಧಿಸಿದ ಬಗ್ಗೆ ಪ್ರತಿ ಬೀದಿಗಳಲ್ಲಿ ಹಾಗೂ ಓಣಿಗಳಲ್ಲಿ ಪ್ರಚಾರ ಮಾಡಿಸುವುದರೊಂದಿಗೆ ಎಲ್ಲಿಯಾದರೂ ಯಾರಾದರೂ ಇಸ್ಟೇಟ್ ಆಡುತ್ತಿದ್ದರೆ ತಿಳಿಸಲು ಸಹಾಯವಾಣಿ ವ್ಯವಸ್ಥೆ ಮಾಡಬೇಕು. ಆ ಸಹಾಯವಾಣಿಯನ್ನು ಎಲ್ಲಾ ಕಡೆ ಪ್ರಚಾರದ ವ್ಯವಸ್ಥೆಯನ್ನು ಮಾಡಿಸುವುದು.
ಸದರಿ ತಾವುಗಳು ಕಾನೂನಾತ್ಮಕ ಕ್ರಮ ಕೈಗೊಂಡು ಇಸ್ಪೀಟ್ ಜೂಜಾಟ ರಹಿತ ದೀಪಾವಳಿ ಹಬ್ಬ ಆಚರಿಸುವಲ್ಲಿ ಕ್ರಮಕೈಗೊಳ್ಳುವುದರ ಮೂಲಕ ಸಾವಿರಾರು ಕುಟುಂಬಗಳಿಗೆ ದೀಪಾವಳಿ ಹಬ್ಬದಂದು ಬೆಳಕು ನೀಡುವ ಕಾರ್ಯವಾಗಬೇಕು.
ದೀಪಾವಳಿ ನಿಮತ್ಯ ಇಸ್ಪೀಟ್ ಜೂಜಾಟ ನಿಷೇಧಿಸಬೇಕು ಹಾಗೂ ಕ್ರಮ ಕೈಗೊಂಡ ಬಗ್ಗೆ ಹಿಂಬರಹ ನೀಡಬೇಕಾಗಿ ಎಂದು ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ವಿನಂತಿಮಾಡಿದರು ಈ ಸಂದರ್ಭದಲ್ಲಿ
ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ ದೆಹಲಿ ರಾಜ್ಯ ಸಂಸ್ಥೆಯ ಜಿಲ್ಲಾ ಅಧ್ಯಕ್ಷರಾದ ಪ್ರಕಾಶ ಬನ್ನಿಗಿಡದ. ಹನಮಂತ ಪಲದೊಡ್ಡಿ ಗದಗ ಜಿಲ್ಲಾ ಉಪಾಧ್ಯಕ್ಷರು
ಮಂಜುನಾಥ .ದು. ಪದ್ದಣ್ಣವರ ಗದಗ ಜಿಲ್ಲಾ ಕಾರ್ಯದರ್ಶಿಗಳು ಹಿಂದುಳಿದ ವಿಭಾಗದ ಕಾರ್ಯದರ್ಶಿ ಶ್ರೀ ಶೈಲೇಂದ್ರ ಶೆಂಬೇಕರ, ಗದಗ ಜಿಲ್ಲಾ ಸಹಕಾರ್ಯದರ್ಶಿ ಶೇಖಸಾಬ ಕಾತರಕಿ, ಮೀಡಿಯಾ ಕಾರ್ಯದರ್ಶಿ ಯಾಸೀನಸಾಬ್ ಬೊದ್ಲೇಖನ್ ಸಂಘಟನಾ ರ್ಯದರ್ಶಿ ಮಂಜುನಾಥ ಆಸಂಗಿ, ಶಂಕರಗೌಡ ಪಾಟೀಲ, ಕಿರಣ ಶೆಂಬೇಕರ, ಸುರಜ ತೆಂಬೇಕರ, ಈರಣ್ಣಾ ಮಲ್ಲಾಡದ. ಮನ್ಸೂರ್ ಅಹಮದ್ ಶಿರಟ್ಟಿ , ಹಜರತಸಾಬ್ ಬಾಗಲಿ ಉಪಸ್ಥಿತಇದ್ದರು.