Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
Uncategorized

ಕುಕನೂರು | ದೂರು ನೀಡಲು ಬಂದ ವ್ಯಕ್ತಿಯ ಮೇಲೆ ಪೋಲಿಸಪ್ಪನ್ ದರ್ಪ; PSI ಗುರುರಾಜ ಅಮಾನತು..!

ಕರುನಾಡು ಘರ್ಜನೆ ಸುದ್ದಿ ಕುಕನೂರು (ಕೊಪ್ಪಳ ಜಿಲ್ಲೆ): ದಂಪತಿ ಕಲಹದ ಕುರಿತು ದೂರು ನೀಡಲು ಬಂದಾಗ ದೂರುದಾರನ ಮೇಲೆಯೇ ಹಲ್ಲೆ ಮಾಡಿದ ಕಾರಣಕ್ಕಾಗಿ ಜಿಲ್ಲೆಯ ಕುಕನೂರು ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಗುರುರಾಜ್ ಟಿ. ಅವರನ್ನು ಅಮಾನತು ಮಾಡಲಾಗಿದೆ.ಕೊಪ್ಪಳ ತಾಲ್ಲೂಕಿನ ಯಲಮಗೇರಿಯ…

ಕರುನಾಡು ಘರ್ಜನೆ ಸುದ್ದಿ ಕುಕನೂರು (ಕೊಪ್ಪಳ ಜಿಲ್ಲೆ): ದಂಪತಿ ಕಲಹದ ಕುರಿತು ದೂರು ನೀಡಲು ಬಂದಾಗ ದೂರುದಾರನ ಮೇಲೆಯೇ ಹಲ್ಲೆ ಮಾಡಿದ ಕಾರಣಕ್ಕಾಗಿ ಜಿಲ್ಲೆಯ ಕುಕನೂರು ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಗುರುರಾಜ್ ಟಿ. ಅವರನ್ನು ಅಮಾನತು ಮಾಡಲಾಗಿದೆ.ಕೊಪ್ಪಳ ತಾಲ್ಲೂಕಿನ ಯಲಮಗೇರಿಯ ಗಾಳೆಪ್ಪ ಹಿರೇಮನಿ ಎಂಬುವವರು ದೂರು ನೀಡಿ ‘ಜಗಳ ಪರಿಹರಿಸಲು ಬಂದ ನನ್ನ ಮೇಲೆ ಹಲ್ಲೆ ಮಾಡಿ ಕುಕನೂರು ಪಿಎಸ್‌ಐ ದೌರ್ಜನ್ಯ ಎಸಗಿದ್ದಾರೆ’ ಎಂದು ಆರೋಪಿಸಿದ್ದರು.

 

ಇದಕ್ಕಾಗಿ ದಲಿತ ಸಮುದಾಯದ ಮುಖಂಡರು ಠಾಣೆ ಎದುರು ತಡರಾತ್ರಿ ತನಕ ಪ್ರತಿಭಟನೆ ನಡೆಸಿ ಅಮಾನತು ಮಾಡುವ ತನಕ ಹೋರಾಟ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.

 

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಹಾಗೂ ದೂರುದಾರನ ಜೊತೆ ಬಳ್ಳಾರಿ ಐಜಿಪಿ ವರ್ತಿಕಾ ಕಟಿಯಾರ್ ದೂರವಾಣಿಯಲ್ಲಿ ಮಾತನಾಡಿ ಪಿಎಸ್‌ಐ ವಿರುದ್ಧ ಕ್ರಮದ ಭರವಸೆ ನೀಡಿದ್ದರು.ತಡರಾತ್ರಿ ಆದೇಶ ಹೊರಡಿಸಿರುವ ಎಸ್.ಪಿ. ಅರಸಿದ್ದಿ ‘ಸಾರ್ವಜನಿಕರು ದೂರು ನೀಡಲು ಬಂದಾಗ ಅವರೊಂದಿಗೆ ಸೌಜನ್ಯದೊಂದಿಗೆ ವರ್ತಿಸಬೇಕಿತ್ತು. ಸಿಟ್ಟಿನ ಭರದಲ್ಲಿ ದೂರುದಾರ ಗಾಳೆಪ್ಪ ಅವರನ್ನು ತಳ್ಳಾಡಿ ಹೊಡೆದು ಅನುಚಿತವಾಗಿ ನಡೆದುಕೊಂಡಿದ್ದು ಸರಿಯಲ್ಲ. ಆದ್ದರಿಂದ ಸೇವೆಯಿಂದ ಅಮಾನತು ಮಾಡಲಾಗಿದೆ’ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

Editor

Leave a comment