ಕರುನಾಡು ಘರ್ಜನೆ ಸುದ್ದಿ ದಿನಾಂಕ : 14-10-2025 ರಂದು 13-00 ಗಂಟೆಗೆ ಆಪಾದಿತ ಸೇನಾಪತಿ ಅಣ್ಣಿಗೇರಿ ಸಾ:ಲಕ್ಕುಂಡಿ. ಇವನು ಲಕ್ಕುಂಡಿ ಗ್ರಾಮದ ಮಾರುತಿ ನಗರದಲ್ಲಿರುವ ತನ್ನ ಮನೆ ಮುಂದೆ ಸಾರ್ವಜನಿಕ ರಸ್ತೆಯಲ್ಲಿ ಸರ್ಕಾರದಿಂದ ಯಾವುದೇ ಪಾಸ್ ವ, ಪರ್ಮಿಟ್ ಪಡೆಯದೇ ಅನಧೀಕೃತವಾಗಿ 1000/- ರೂ ಕಿಮ್ಮತ್ತಿನ 90
ಎಮ್.ಎಲ್ ದ ಡಿ ಓರಿಜಿನಲ್ ಚಾಯಿಸ ಡಿಲಕ್ಷ ವಿಸ್ಕಿ ಕಂಪನಿಯ 20 ಮಧ್ಯದ ಟೆಟ್ರಾ ಪಾಕೇಟಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತ್ತಿದ್ದಾಗ ಠಾಣೆಯ ಸಿಬ್ಬಂದಿಯವರು ಶ್ರೀ ವಿ.ಜಿ.ಪವಾರ ಪಿ.ಎಸ್.ಐ [ಕಾ&ಸು] ರವರ ನೇತೃತ್ವದಲ್ಲಿ ರೇಡ್ ಮಾಡಿ ಸದರಿಯವನ ಮೇಲೆ
ಕಾನೂನು ಕ್ರಮ ಜರುಗಿಸಲು ಸರ್ಕಾರಿ ತರ್ಪಿ ಪಿರ್ಯಾದಿಯನ್ನು ನೀಡಿದ್ದು ಆರೋಪಿತನ ವಿರುದ್ಧ ಗುನ್ನಾ ನಂ: 232/2025, ಕಲ: 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.