ಕರುನಾಡು ಘರ್ಜನೆ ಸುದ್ದಿ ಗದಗ : 2025 ನೇ ಸಾಲಿನ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ನಿಮಿತ್ತ ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ನೊಂದಾಯಿಸಿಕೊಳ್ಳುವಂತೆ ಸಮಸ್ತ ಪದವೀಧರ ಬಂಧುಗಳಿಗೆ ಉತ್ತರ ಕರ್ನಾಟಕ ಪದವೀಧರ ಒಕ್ಕೂಟದ ರಾಜ್ಯಾಧ್ಯಕ್ಷರಾದ ಎಂ ಎಸ್ ನಾಗರಕಟ್ಟಿ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಎಂ ಎಸ್ ನಾಗರಕಟ್ಟಿ ಸಮಸ್ತ ಪದವೀಧರರು ಚುನಾವಣೆ ಇಲಾಖೆ ನೀಡಿದಂತಹ ಕಾಲಾವಕಾಶದಲ್ಲಿ ತಮ್ಮ ಹೆಸರುಗಳನ್ನು ಮತದಾರ ಪಟ್ಟಿಯಲ್ಲಿ ನೊಂದಾಯಿಸಿಕೊಳ್ಳಬೇಕು. ಪ್ರಸ್ತುತ ಇಲ್ಲಿಯವರೆಗೂ ಕಡಿಮೆ ಸಂಖ್ಯೆಯಲ್ಲಿ ಪದವೀಧರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ. ಇದಕ್ಕೆ ಹಲವಾರು ಕಾರಣಗಳಿವೆ. ಸರಿಯಾಗಿ ಜಾಗೃತಿ ಮೂಡಿದಿರುವುದು ಮತ್ತು ಚುನಾವಣೆ ಇಲಾಖೆಯ ಕಠಿಣ ನಿಯಮಗಳು ಹಾಗೂ ಜನಪ್ರತಿನಿಧಿಗಳ ತಾತ್ಸರ ಭಾವನೆ ಪ್ರಮುಖ ಕಾರಣವಾಗಿದೆ. ಪದವೀಧರರ ಹತ್ತಿರ ಮತದಾರರ ಪಟ್ಟಿಯಲ್ಲಿ ನೊಂದಾಯಿಸಿಕೊಳ್ಳಿ ಅಂತ ಹೇಳಲು ಹೋದಾಗ ಯಾವ ಕಾರಣಕ್ಕಾಗಿ ನಾವು ನೋಂದಾಯಿಸಿಕೊಳ್ಳಬೇಕು ಈ ಹಿಂದೆ ನಾವು ನೋಂದಾಯಿಸಿಕೊಂಡಿದ್ದೇವೆ ಮತ್ತೆ ಯಾಕೆ ನೋಂದಾಯಿಸಿಕೊಳ್ಳಬೇಕೆಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಮತ್ತು ಎಲ್ಲ ದಾಖಲೆಗಳನ್ನು ಗೆಜಿಟೆಡ್ ಅಧಿಕಾರಿಗಳಿಂದ ದೃಢೀಕರಣ ಗಳಿಸಬೇಕು ಅಥವಾ ನೋಟರಿಗಳಿಂದ ದೃಢೀಕರಣಗೊಳಿಸಿಕೊಳ್ಳಬೇಕು ಮತ್ತು ಬಿಳಿ ಬಣ್ಣ ಹಿನ್ನೆಲೆ ಇರುವ ಭಾವಚಿತ್ರವೇ ಬೇಕೆಂಬ ಚುನಾವಣೆ ಇಲಾಖೆಯ ನಿಯಮವನ್ನು ಪ್ರಶ್ನಿಸುತಿದ್ದಾರೆ. ಒಟ್ಟಿನಲ್ಲಿ ಪದವೀಧರರು ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ನೊಂದಾಯಿಸಿಕೊಳ್ಳಲು ನಿರಾಶಕ್ತಿ ತೋರಿಸುತ್ತಿದ್ದಾರೆ.
ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಸಮಸ್ತ ಪದವೀಧರರಿಗೆ ಸಂವಿಧಾನವು ಮತದಾನದ ಹಕ್ಕು ನೀಡಿ ಗೌರವಿಸಿದೆ ಇಂತಹ ಮತದಾನ ಹಕ್ಕನ್ನು ನಾವು ಯಾವುದೇ ಕಾರಣಕ್ಕೂ ಮುಟುಕುಗಳಿಸಿಕೊಳ್ಳಬಾರದು. ಪದವೀಧರರು ಸ್ವಲ್ಪ ಸಮಯವನ್ನು ಮೀಸಲಿಟ್ಟು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಗಳನ್ನು ನೋಂದಾಯಿಸಿಕೊಳ್ಳಬೇಕು. ದೇಶದಲ್ಲಿ ಕೆಲವೇ ರಾಜ್ಯಗಳಲ್ಲಿ ವಿಧಾನ ಪರಿಷತ್ ಇದೆ ಅದರಲ್ಲಿ ಕರ್ನಾಟಕ ಸಹ ಒಂದಾಗಿದೆ. ವಿಧಾನಪರಿಷತ್ತು ಚಿಂತಕರ ಚಾವಣಿ ಎಂದು ಕರೆಯಲ್ಪಡುತ್ತದೆ. ಇಂತಹ ಚಿಂತಕರ ಚಾವಣಿಯಾದ ವಿಧಾನ ಪರಿಷತ್ತಿಗೆ ಒಬ್ಬ ಒಳ್ಳೆಯ ಜನಪ್ರತಿನಿಧಿಯನ್ನು ಆರಿಸಿ ಕಳಿಸುವ ಜವಾಬ್ದಾರಿ ಸಮಸ್ತ ಪದವೀಧರರಿಗೆಯಿದೆ. ವಿದ್ಯಾವಂತರದ ನಾವೇ ಮತದಾನದಿಂದ ಹಿಂದೆ ಸೆರೆದರೆ ಒಂದು ಒಳ್ಳೆಯ ಸಮಾಜ ನಿರ್ಮಾಣ ಮಾಡುವುದು ಹೇಗೆ ಎಂಬ ಪ್ರಶ್ನೆ ಮೂಡುತ್ತದೆ. ಆದಕಾರಣ ಸಮಸ್ತ ಪದವೀಧರ ಬಂಧುಗಳು ಆದಷ್ಟು ಬೇಗನೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಬೇಕೆಂದು ಉತ್ತರ ಕರ್ನಾಟಕ ಪದವೀಧರ ಒಕ್ಕೂಟದ ಪರವಾಗಿ ಮನವಿಯನ್ನು ಮಾಡಿಕೊಂಡರು.