ಕರುನಾಡು ಘರ್ಜನೆ ಸುದ್ದಿ ಧಾರವಾಡ : ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಧಾರವಾಡ ಕರೋಕೆ ವಿದ್ಯಾಗಿರಿ ಧಾರವಾಡ ಇವರ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಗೀತೆಗಳ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಇದು ಸತತ ೭ ನೆಯ ವರ್ಷದ ಯಶಸ್ವಿ ಸ್ಪರ್ಧೆಯಾಗಿದ್ದು ಧಾರವಾಡ ನಗರಕ್ಕೆ ಹೆಮ್ಮೆಯ ವಿಷಯ.
ಕರೋಕೆ ಗೀತೆಗಳ ಆಡಿಷನ್ ಇದೆ ದಿನಾಂಕ 8/11/2025 ಹಾಗು 9/11/2025 ರಂದು NTTF ಎದುರುಗಡೆ ಇರುವ ಶ್ರೀ ಸಾಯಿ ಕಾಲೇಜ್ ಧಾರವಾಡದಲ್ಲಿ ನಡೆಸಲಾಗುವುದು. ಮೂರು ಸುತ್ತುಗಳ ಸ್ಪರ್ಧೆ ನಡೆಸಿ ಪ್ರತಿಭಾವಂತ ಹಾಡಿಗಾರರಿಗೆ ಆಯ್ಕೆ ಮಾಡಿ ಅಂತಿಮ ಸುತ್ತಿನ ಕಾರ್ಯಕ್ರಮವನ್ನು ನವೆಂಬರ್ ತಿಂಗಳ ಕೊನೆಯ ವಾರದಲ್ಲಿ ನಡೆಸಲಾಗುವುದು. ನೋಂದಣಿಗಾಗಿ 8123727214/ 7975277992 ಈ ಸಂಖ್ಯೆಗೆ ಸಂಪರ್ಕಿಸಿ.
ಇದರಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಕೊಡುವುದರ ಜೊತೆಗೆ ಪ್ರಥಮ ಸ್ಥಾನ ಪಡೆದ ಸ್ಪರ್ಧಾಳುವಿಗೆ *”ಕನ್ನಡ ಗಾನ ಕೌಸ್ತುಭ” ೨೦೨೫ (೭ನೆಯ ಆವೃತ್ತಿ)* ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆಯ ಮುಖ್ಯಸ್ಥ ಶ್ರೀ ಮೈನುದ್ದೀನ್ ಕಿರವಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಅದೃಶ್ ಸಲಕಿನಕೊಪ್ಪ, ಶ್ರೀ ಮೌನೇಶ್ ಪತ್ತಾರ್ ಹಾಗು ಪ್ರೀತಿ ದೊಡ್ಡಮನಿ ಭಾಗವಹಿಸಿದ್ದರು. ಶ್ರೀ ಮೈನುದ್ದೀನ್ ಕಿರವಾಡಿ
ಧಾರವಾಡ ಕರೋಕೆ
ಧಾರವಾಡ ಕರೋಕೆ ಅರ್ಪಿಸುವ ಕನ್ನಡ ಗೀತೆಗಳ ಸ್ಪರ್ಧೆ
ಕರುನಾಡು ಘರ್ಜನೆ ಸುದ್ದಿ ಧಾರವಾಡ : ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಧಾರವಾಡ ಕರೋಕೆ ವಿದ್ಯಾಗಿರಿ ಧಾರವಾಡ ಇವರ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಗೀತೆಗಳ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಇದು ಸತತ ೭ ನೆಯ ವರ್ಷದ ಯಶಸ್ವಿ ಸ್ಪರ್ಧೆಯಾಗಿದ್ದು…