ಕರುನಾಡು ಘರ್ಜನೆ ಸುದ್ದಿ ಬೆಳಗಾವಿ : ಕರ್ನಾಟಕದಲ್ಲಿ ಕಬ್ಬು ಬೆಳೆಗಾರರ ಹೋರಾಟ ತೀವ್ರಗೊಳ್ಳುತ್ತಿದೆ. ರೈತರು ಯಾವುದೇ ಮಾತುಕತೆಗೆ ಜಗ್ಗುತ್ತಿಲ್ಲ, ತಮ್ಮ ನಿರ್ಧಾರದಿಂದ ಹಿಂದೆ ಸರಿಯುತ್ತಿಲ್ಲ. ಪ್ರತಿಭಟನೆ ಕಾವು ಸರ್ಕಾರದ ಮೇಲೆ ಪರಿಣಾಮ ಬೀರುತ್ತಿದ್ದಂತೆ ಇಂದು ಸರ್ಕಾರದ ಪ್ರತಿನಿಧಿಯಾಗಿ ಸಚಿವ ಎಚ್. ಕೆ .ಪಾಟೀಲ್ ರೈತರ ಭೇಟಿ ಮಾಡಿ ಸಂಧಾನ ಸಭೆ ನಡೆಸಿದ್ದಾರೆ. ಆದರೆ ಸಂಧಾನ ಸಭೆ ವಿಫಲಗೊಂಡಿದೆ. 8 ಬೇಡಿಕೆಗೆ ಚರ್ಚಿಸಲು ಸಮಯ ಬೇಕಿದೆ ಎಂದ ಎಚ್ .ಕೆ. ಪಾಟೀಲರ ಕಬ್ಬು ಬೆಳೆಗಾರರು ಖಡಕ್ ವಾರ್ನಿಂಗ್ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಸಭೆಗೆ ನಾವು ಬರುವುದಿಲ್ಲ. ನೀವು ಮಾತನಾಡಿ ಸರ್ಕಾರದ ನಿರ್ಧಾರ ಪ್ರಕಟಿಸಿ,
ನಾಳೆ (ನ.06) ಸಂಜೆ ವರೆಗೆ ಸಮಯ ನೀಡುತ್ತೇವೆ. ಅದರೊಳಗೆ ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟದ ಎಚ್ಚರಿಕೆಯನ್ನು ರೈತರು ನೀಡಿದ್ದಾರೆ. ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್ ಬಳಿ ಸಂಧಾನ ಸಭೆ ನಡೆದಿತ್ತು. ರೈತರ ಬೇಡಿಕೆಗೆ ಈಡೇರಿಸಲು ಸಮಯಾವಕಾಶ ಬೇಕು ಎಂದು ಹೆಚ್ಕೆ ಪಾಟೀಲ್ ಹೇಳಿದ್ದರು. ಆದರೆ ರೈತರು ಹೆಚ್ಚಿನ ಸಮಯ ನೀಡಲು ಸಾಧ್ಯವಿಲ್ಲ. ನಾಳೆ ಸಂಜೆ ವರೆಗೆ ಕಾಯುತ್ತೇವೆ. ಸಚಿವರಾಗಿ ನೀವೆ ಸಿಎಂ ಜೊತೆಗೆ ಮಾತುಕತೆ ನಡೆಸಿ ಸರ್ಕಾರದ ನಿರ್ಧಾರ ಪ್ರಕಟಿಸಿ, ನಾಳೆ ಸಂಜೆಯವರೆಗೆ ನಾವು ನಿಮ್ಮ ಪ್ರಕಟಣೆ, ಸರ್ಕಾರದ ನಿಲುವಿಗೆ ಕಾಯುತ್ತೇವೆ ಎಂದು ರೈತರು ವಾರ್ನಿಂಗ್ ನೀಡಿದ್ದಾರೆ.
ಬೆಳಗಾವಿ | ಕಬ್ಬು ಬೆಳೆಗಾರರ ಜೊತೆಗೆ ಸಚಿವ ಎಚ್.ಕೆ. ಪಾಟೀಲರ ಸಂಧಾನ ವಿಫಲ, ನಾಳೆ ಸಂಜೆವರೆಗೆ ಸರ್ಕಾರಕ್ಕೆ ಗಡುವು ಕೊಟ್ಟ ರೈತರು
ಕರುನಾಡು ಘರ್ಜನೆ ಸುದ್ದಿ ಬೆಳಗಾವಿ : ಕರ್ನಾಟಕದಲ್ಲಿ ಕಬ್ಬು ಬೆಳೆಗಾರರ ಹೋರಾಟ ತೀವ್ರಗೊಳ್ಳುತ್ತಿದೆ. ರೈತರು ಯಾವುದೇ ಮಾತುಕತೆಗೆ ಜಗ್ಗುತ್ತಿಲ್ಲ, ತಮ್ಮ ನಿರ್ಧಾರದಿಂದ ಹಿಂದೆ ಸರಿಯುತ್ತಿಲ್ಲ. ಪ್ರತಿಭಟನೆ ಕಾವು ಸರ್ಕಾರದ ಮೇಲೆ ಪರಿಣಾಮ ಬೀರುತ್ತಿದ್ದಂತೆ ಇಂದು ಸರ್ಕಾರದ ಪ್ರತಿನಿಧಿಯಾಗಿ ಸಚಿವ ಎಚ್. ಕೆ…