ಕರುನಾಡು ಘರ್ಜನೆ ಸುದ್ದಿ ಗದಗ 19: ಗದಗ ಜಿಲ್ಲೆಯಲ್ಲಿ ಸವಿತಾ ಸಮಾಜ ಬಾಂಧವರ ಆರ್ಥಿಕ ಸ್ಥಿತಿ ಸುಧಾರಿಸಲು ಹಾಗೂ ಆರ್ಥಿಕವಾಗಿ ಬಲಾಡ್ಯರಾಗಲು ಹಿರಿಯರ ಆಶೆಯದಂತೆ ರಾಜಕೀಯ ಸ್ಥಾನ ಮಾನ ಕಲ್ಪಿಸಲು ಮತ್ತು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಕೃಷ್ಣಾ ಹಡಪದ ನೆತೃತ್ವದ ನಿಯೋಗದ ಸಂಕಲ್ಪದಂತೆ ಸಮಾಜದ ಬಹುದಿನಗಳ ಬೇಡಿಕೆಗಳ ಕುರಿತು ಇನ್ನು ಹೆಚ್ಚು ಕಾಲ ಪಡೆಯದೆ ಕೂಡಲೆ ನಮ್ಮ ಪೂಜ್ಯ ತಂದೆಯವರು ಹಿರಿಯ ಸಚೀವರಾದ ಸನ್ಮಾನ್ಯ ಎಚ್ ಕೆ ಪಾಟೀವರವರ ಗಮನಕ್ಕೆ ತಂದು ಚರ್ಚಿಸಿ ತಮ್ಮ ಸಮಾಜದ ಎಲ್ಲ ಬೇಡಿಕೆಗಳು ಆದಸ್ಟು ಬೇಗ ಈಡೇರಿಸಲಾಗುವದು ಎಂದು
ಗದಗ ಜಿಲ್ಲಾ ಕಾಂಗ್ರೇಸ್ ಪಕ್ಷದ ಯುವ ಘಟಕದ ಚುನಾಯತ ಅಧ್ಯಕ್ಷರಾದ ಕೃಷ್ಣಗೌಡ್ರ ಎಚ್ ಪಾಟೀಲ ಅವರು ಭರವಸೆ ನೀಡಿ ಮಾತನಾಡಿದರು
ಅವರು ಗದಗ ಜಿಲ್ಲಾ ಸವಿತಾ ಸಮಾಜದಿಂದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ನೇತ್ರೂತ್ವದ ನಿಯೋಗದಿಂದ ಸಲ್ಲಿಸಿದ ಸಮಾಜದ ಮನವಿ ಸ್ವಿಕರಿಸಿ ಮಾತನಾಡಿ
ಸವಿತಾ ಸಮಾಜವು ರಾಜಕೀಯ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಬೆಳೆಯಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ವ ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುವ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರು ಉತ್ಸಾಹಿ ಯುವ ಸೇವಕರಾದ ಕೃಷ್ಣಾ ಎಚ್ ಹಡಪದ ಅವರು ಮಾಡುತ್ತಿರುವ ಅನೇಕ ರೀತಿಯಲ್ಲಿ ಸಮಾಜ ಪರ ರಚನಾತ್ಮಕ ಸೇವಾ ಕಾರ್ಯಕ್ಕೆ ಸಮಸ್ತ ಸವಿತಾ ಸಮಾಜದ ಕ್ಷೌರಿಕ ಬಾಂಧವರು ಕೈಜೋಡಿಸುವ ಮೂಲಕ ಅವರ ಶಕ್ತಿ ತುಂಬಲು ಮಾಂದಾಗಬೇಕು ಎಂದು ಕರೆ ನೀಡಿದರಲ್ಲದೆ ಗಂಗಿಮಡಿಯಲ್ಲಿ ಗದಗ ಸವಿತಾ ಸಮಾಜ ಸುಧಾರಣಾ ಸಂಘದ ಶ್ರೀ ನಾಗದೇವರ ದೇವಸ್ಥಾನಕ್ಕೆ 15. ಲಕ್ಷ ರೂ ಹಾಗೂ ಮರಾಠ ಕ್ಷೌರಿಕ ಸಮಾಜದ ಸಮುಧಾಯ ಭವನ ನಿರ್ಮಾಣಕ್ಕೆ 5. ಲಕ್ಷ ರೂ ಅನೂಧಾನವು ಸೇರಿದಂತೆ ಸಮಾಜ ಬಡ ಕುಟುಂಭಗಳಿಗೆ ಆಶ್ರಯ ಮನೆಗಳು ಮತ್ತು 29 ನೇ ವಾರ್ಡಿನಲ್ಲಿ ಇಗಾಗಲೇ ಗುರುತಿಸಿದ 4 ವೃತ್ತದಲ್ಲಿ ಒಂದಕ್ಕೆ ಮರಾಠ ಕ್ಷೌರಿಕರ ಆರಾಧ್ಯ ದೈವ ಶ್ರೀ ಸಂತಸೇನಾ ಮಹಾರಾಜ ಗುರುಗಳ ಹೆಸರು ನಾಮಕರಣದ ಜತೆಗೆ ಸವಿತಾ ಸಮಾಜದ ಕ್ಷೌರಿಕ ವೃತ್ತಿ ಕಾರ್ಮಿಕರಿಗೆ ಸಲೂನ ಕುರ್ಚಿಗಳು ಹಾಗೂ ಸಲಕರಣೆಗಳು ಮಂಜೂರು ಮಾಡುವುದು ಸೇರಿದಂತೆ ಗದಗ ಜಿಲ್ಲಾ ಸವಿತಾ ಸಮಾಜದ ಹಲವು ಜ್ವಲಂತ ಸಮಸ್ಯೆಗಳ ನಿವಾರಣೆಗಾಗಿ ಮತ್ತು ಗದಗ ಜಿಲ್ಲಾ ಸವಿತಾ ಸಮಾಜದ ಕ್ಷೌರಿಕ ಬಾಂಧವರ ಸಮಘ್ರ ಅಭಿವೃದ್ಧಿಗೆ ಸದಾ ದ್ವನಿಯಾಗಿ ನಿಲ್ಲುತ್ತೆನೆ ಎಂದು ಕೃಷ್ಣಗೌಡ್ರ ಎಚ್ ಪಾಟೀಲರು ಭರವಸೆ ನೀಡಿ ಮಾತನಾಡಿದರು
ಗದಗ ಬೆಟಗೇರಿ ಸವಿತಾ ಸಮಾಜ ಶ್ರೀ ಗದ್ವಾಲ್ ಜಮಲಮ್ಮದೇವಿ ದೇವಸ್ಥಾನ ಟ್ರಸ್ಟ ಕಮಿಟಿಯ ಗೌರವ ಅಧ್ಯಕ್ಷರು ಹಾಗೂ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರು ಹಾಗೂ ಸವಿತಾ ಸಮಾಜ (ಹಿಂದುಳಿದ ವರ್ಗ) ಪತ್ತಿನ ಸಹಕಾರ ಸಂಘದ ಸಂಸ್ಥಾಪಕರಾದ ಕೃಷ್ಣಾ ಎಚ್ ಹಡಪದ ಅವರು ಮಾತನಾಡಿ ನಮ್ಮ ಸವಿತಾ ಸಮಾಜದ ಬಹುದಿನಗಳ ಬೇಡಿಕೆಗಳು ಈಡೇರಿಸಲು ಪಣತೋಟ್ಟ ಕಾಂಗ್ರೇಸ್ ಯುವ ನಾಯಕರಾದ ಕೃಷ್ಣಗೌಡ್ರ ಪಾಟೀಲ ಅವರ ದೀಟ್ಟತನದ ಕ್ರಮಕ್ಕೆ ಅವರು ತಲೆ ಭಾಗಿ ಕೃತಜ್ಞತೆಗಳು ಸಲ್ಲಿಸಿ ಮಾತನಾಡಿ ಗದಗ ಬೆಟಗೇರಿ ಹಾಗೂ ಜಿಲ್ಲೆಯ ಸವಿತಾ ಸಮಾಜದ ಸಮಸ್ತ ಅಭಿವೃದ್ಧಿಗೆ ನಗರಸಭೆ. ಜಿಲ್ಲಾಡಳಿತ. ಮತ್ತು ಶಾಸಕರು/ಸಚೀವರಿಂದ ವಿವಿಧ ಸೌಲಭ್ಯ ಹಾಗೂ ಹೆಚ್ಚೀನ ಅನೂಧಾನಗಳನ್ನು ಹೆಚ್ಚು ಹೆಚ್ಚು ಬೆಡುಗಡೆ ಮಾಡಿಸಿಕೊಡಬೆಕೇಂದು ಕಾಂಗ್ರೇಸ್ ಯುವ ನಾಯಕರಾದ ಕೃಷ್ಣಗೌಡ್ರ ಪಾಟೀಲರಲ್ಲಿ ಗದಗ ಜಿಲ್ಲಾ ಸವಿತಾ ಸಮಾಜದಿಂದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಅವರು ವಿನಂತಿಸಿ ಮನವಿ ಮಾಡಿ ಅವರ ಮೂಲಕ ಸಚಿವರಾದ ಎಚ್ ಕೆ ಪಾಟೀಲಜಿ ಅವರಗೆ ಮನವಿ ಮಾಡಿ ವಿನಂತಿಸಿ ಮಾತನಾಡಿದರು
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸವಿತಾ ಸಮಾಜದ ಉತ್ತರ ಕರ್ನಾಟಕ ವಿಭಾಗೀಯ ಕಾರ್ಯದರ್ಶಿಗಳು ಹಾಗೂ ಹಿರಿಯರಾದ ಹನಮಂತಪ್ಪ ರಾಂಪೂರ ಗದಗ ಸವಿತಾ ಸಮಾಜ ಸುಧಾರಣಾ ಸಂಘದ ಅಧ್ಯಕ್ಷರಾದ ಪರಶುರಾಮ ಕೊಟೇಕಲ್ಲ.
ಪ್ರಧಾನ ಕಾರ್ಯದರ್ಶಿಗಳಾದ ರವಿಕುಮಾರ ಹಡಪದ. ಶ್ರೀ ಸಂತಸೇನಾ ಮಹಾರಾಜ ನಾಭೀಕ್ ಮರಾಠ (ಸವಿತಾ) ಸಮಾಜದ ಜಿಲ್ಲಾ ಉಪಾಧ್ಯಕ್ಷರಾದ ದೀಪಕ ಮಾನೆ. ಗ.ಬೆ ಅವಳಿ ನಗರದ ಅಧ್ಯಕ್ಷರಾದ ವಿಕಾಸ್ ಕ್ಷೀರಸಾಗರ. ಜಿಲ್ಲಾ ಸವಿತಾ ಸಮಾಜದ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ ಮಾನೆ. ಜಿಲ್ಲಾ ಕಜಾಂಚಿಗಳಾದ ಅರೂಣ ರಾಂಪೂರ. ಹಿರಿಯ ಪದಾಧಿಕಾರಿಗಳಾದ ತುಕಾರಾಮ ಮಾನೆ. ಶ್ರೀನಿವಾಸ ಕೊಟೇಕಲ್ಲ. ವಿಶಾಲ ಮಾನೆ. ವಿನಾಯಕ ರಾಯಚೂರ. ಯಲ್ಲಪ್ಪ ರಾಂಪೂರ. ಹಾಗೂ ಸಮಾಜದ ಹಲವರು ನಾಯಕರು ಉಪಸ್ತಿತರಿದ್ದರು.
ಕ್ಷೌರಿಕ ಬಾಂಧವರ ಅಭಿವೃದ್ಧಿಗೆ ಸದಾ ದ್ವನಿಯಾಗಿ ನಿಲ್ಲುತ್ತೆನೆ : ಕೃಷ್ಣಗೌಡ್ರ ಪಾಟೀಲ
ಕರುನಾಡು ಘರ್ಜನೆ ಸುದ್ದಿ ಗದಗ 19: ಗದಗ ಜಿಲ್ಲೆಯಲ್ಲಿ ಸವಿತಾ ಸಮಾಜ ಬಾಂಧವರ ಆರ್ಥಿಕ ಸ್ಥಿತಿ ಸುಧಾರಿಸಲು ಹಾಗೂ ಆರ್ಥಿಕವಾಗಿ ಬಲಾಡ್ಯರಾಗಲು ಹಿರಿಯರ ಆಶೆಯದಂತೆ ರಾಜಕೀಯ ಸ್ಥಾನ ಮಾನ ಕಲ್ಪಿಸಲು ಮತ್ತು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಕೃಷ್ಣಾ ಹಡಪದ…