ಕರುನಾಡು ಘರ್ಜನೆ ಸುದ್ದಿ ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಡಹಗಲೇ ಬಹುದೊಡ್ಡ ದರೋಡೆ ಪ್ರಕರಣ ನಡೆದಿದೆ. ಸಿಎಂಎಸ್ ಕಂಪನಿಯ ವ್ಯಾನ್ ಅಡ್ಡಗಟ್ಟಿ ಹಣ ದರೋಡೆ ನಡೆದಿದ್ದು, ಈ ದರೋಡೆಯಿಂದ ನಗರದಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿದೆ. ಸುಮಾರು 7 ಕೋಟಿ 11 ಲಕ್ಷ ರೂಪಾಯಿ ಹಣವನ್ನು ದೋಚಿಕೊಂಡು ದರೋಡೆಕೋರರು ಪರಾರಿಯಾಗಿರುವ ಘಟನೆ ಜಯನಗರದ ಅಶೋಕ ಪಿಲ್ಲರ್ ಬಳಿ ನಡೆದಿದೆ.
ಇನ್ನೋವಾ ಕಾರಿನಲ್ಲಿ ಬಂದ ದರೋಡೆಕೋರರ ತಂಡ
ಮಾಹಿತಿಯ ಪ್ರಕಾರ, ಜೆಪಿ ನಗರದ ಎಚ್‌ಡಿಎಫ್‌ಸಿ ಬ್ಯಾಂಕಿನಿಂದ ಹಣವನ್ನು ತರಲಾಗುತ್ತಿದ್ದ ಸಿಎಂಎಸ್ ಕಂಪನಿಯ ಎಟಿಎಂ ಕ್ಯಾಷ್ ರಿಫಿಲ್ ವ್ಯಾನ್ ಅನ್ನು ದರೋಡೆಕೋರರು ಟಾರ್ಗೆಟ್ ಮಾಡಿಕೊಂಡಿದ್ದರು. ಶುಭ್ರ ಬಣ್ಣದ ನಕಲಿ ನಂಬರ್ ಪ್ಲೇಟ್ ಅಳವಡಿಸಿದ ಇನ್ನೋವಾ ಕಾರಿನಲ್ಲಿ ಬಂದಿದ್ದ ದರೋಡೆಕೋರರ ತಂಡ ಮಾರ್ಗದಲ್ಲೇ ಸಿಎಂಎಸ್ ವಾಹನವನ್ನು ಅಡ್ಡಗಟ್ಟಿ ನಿಲ್ಲಿಸಿದರು.
ದಾಖಲೆ ಪರಿಶೀಲಿಸಬೇಕೆಂದು ನಾಟಕ
ದರೋಡೆಕೋರರು ತಮ್ಮನ್ನು ಸೆಂಟ್ರಲ್ ಗೌರ್ನಮೆಂಟ್ ಟ್ಯಾಕ್ಸ್ ಅಧಿಕಾರಿಗಳು ಎಂದು ಪರಿಚಯಿಸಿಕೊಂಡು, ವಾಹನ ಸಾಗಾಟಕ್ಕೆ ಸಂಬಂಧಿಸಿದ ಸೆಂಟ್ರಲ್ ಗೋವೆರ್ಮೆಂಟ್ ಟ್ಯಾಕ್ಸ್ ಆಫೀಸರ್ಸ್, ಡಾಕ್ಯುಮೆಂಟ್ ಪರಿಶೀಲನೆ ಮಾಡಬೇಕು ಎಂದು ಸಿಬ್ಬಂದಿಯನ್ನು ನಂಬಿಸಿದರು. ದರೋಡೆಕೋರರ ಮೇಲೆ ಶಂಕೆ ಬಾರದ ಹಿನ್ನೆಲೆಯಲ್ಲಿ ಸಿಎಂಎಸ್ ಸಿಬ್ಬಂದಿ ವಾಹನವನ್ನು ನಿಲ್ಲಿಸಿದರು.
ಸಾಂದರ್ಭಿಕ ಚಿತ್ರವನ್ನು CMS ಬಳಿಸಲಾಗದೆ.