ಕರುನಾಡು ಘರ್ಜನೆ ಸುದ್ದಿ ಹುಬ್ಬಳ್ಳಿ : ರಾಜ್ಯದಲ್ಲಿ ದರೋಡೆ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಬೆಂಗಳೂರಿನಲ್ಲಿ ಆರ್ ಬಿಐ ಹೆಸರಿನಲ್ಲಿ ದರೋಡೆ ನಡೆದರೆ.
ಈಕಡೆ ಹುಬ್ಬಳ್ಳಿಯಲ್ಲಿ ಇಡಿ ಹೆಸರಿನಲ್ಲಿ ದರೋಡೆ ನಡೆದಿದೆ.
ಹೌದು, ಹುಬ್ಬಳ್ಳಿಯಲ್ಲಿ ಇಡಿ ಅಧಿಕಾರಿಗಳು ಎಂದು ಬೆದರಿಸಿ ಚಿನ್ನಾಭರಣ ದೋಚಲಾಗಿದೆ.
ವಿಚಾರಣೆ ನೆಪದಲ್ಲಿ 2 ಕೆಜಿ 942 ಗ್ರಾಂ ಚಿನ್ನಾಭರಣ ಲೂಟಿ ಮಾಡಲಾಗಿದೆ.
ಹುಬ್ಬಳ್ಳಿಯ ನೀಲಿಜನ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, 3 ಕೋಟಿಗೂ ಹೆಚ್ಚು ಚಿನ್ನಾಭರಣ ಲೂಟಿ ಮಾಡಲಾಗಿದೆ. 
ಕೇರಳದ ವ್ಯಾಪಾರಿ ಎಂ.ಆರ್. ಸುಧೀನ್ ಎಂಬುವರಿಗೆ ವಂಚಿಸಲಾಗಿದೆ. 
ನವೆಂಬರ್ 20 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.