ಕರುನಾಡು ಘರ್ಜನೆ ಸುದ್ದಿ ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿ ದಿನಾಂಕ: 24/11/2025 ರಂದು ಮಧ್ಯಾಹ್ನ 2-00 ಗಂಟೆಯ ಸುಮಾರಿಗೆ ಆರೋಪಿತನಾದ ಸೋಮನಾಥ ಪಾಟೀಲ ಸಾ: ಗುಳಗುಂದಿ. ಇವನು ಗುಳಗುಂದಿ ಗ್ರಾಮದ ಶುದ್ಧ ನೀರಿನ ಘಟಕದ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ತನ್ನ ಸ್ವಂತ ಪಾಯ್ದೆಗೋಸ್ಕರ ರಸ್ತೆಯಲ್ಲಿ ಬರ ಹೋಗುವ ಜನರಿಗೆಕರೆದು 1/-ರೂ ಕ್ಕೆ 80/- ರೂ ಕೊಡುವದಾಗಿ ಹೇಳಿ ಅಕ್ರಮವಾಗಿ ಕಲ್ಯಾಣಿ ಓ.ಸಿ ಮಟಕಾ ಜೂಜಾಟವನ್ನು ಆಡಿಸುತ್ತಿದ್ದ ಬಗ್ಗೆ ಮಾಹಿತಿ ಬಂದಂತೆ ಹೊಳೆಆಲೂರ ಬಸ್ ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದ ಶ್ರೀ ಬಿ.ಜಿ ಹೊರಕೇರಿ ಎಎಸ್‌ಐ ರವರು ದಾಳಿ ಮಾಡಿ ಆರೋಪಿತರಿಂದ.
1) ಒಂದು ಓಸಿ ಅಂಕಿ ಸಂಖ್ಯೆ ಬರೆದ ಚೀಟಿ.
2) ಒಂದು ಬಾಲ್ ಪೆನ್ ಹಾಗೂ
3) 430/- ರೂ.ಗಳನ್ನು ಜಪ್ತ ಮಾಡಿ ಸರ್ಕಾರಿ ತರ್ಫಿ ಪಿರ್ಯಾದಿ ನೀಡಿದ್ದನ್ನು ಸ್ವೀಕರಿಸಿಕೊಂಡು.
ಆರೋಪಿತನ ವಿರುದ್ಧ ಗುನ್ನಾ ನಂ: 213/2025, ಕಲಂ: 78(3) ಕೆ.ಪಿ.ಯಾಕ್ಟ್ &112 ಬಿಎನ್‌ಎಸ್-2023 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.