ಕರುನಾಡು ಘರ್ಜನೆ ಸುದ್ದಿ ಗದಗ: ಡಿ 20 ಸ್ಥಳೀಯ ಕೆ ಎಲ್ ಇ ಸಂಸ್ಥೆಯ ಸಿ ಬಿ ಎಸ್ ಇ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ಬ್ಯಾಕ್ ಟು ಬೆಂಚಸ್’ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರಸ್ತುತ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ವಿಧಾನ ಪರಿಷತ್ತ ಸದಸ್ಯರಾದ ಶ್ರೀಯುತ ಎಸ್ ವಿ ಸಂಕನೂರ ಮಾತನಾಡುತ್ತಾ ಶಾಲೆಯು ಪ್ರಾರಂಭವಾಗಿ 25 ವರ್ಷಗಳು ಪೂರ್ಣಗೊಂಡ ಪ್ರಯುಕ್ತ ರಜತ ಮಹೋತ್ಸವದ ಅಂಗವಾಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ ಹಳೆಯ ವಿದ್ಯಾರ್ಥಿಗಳ ಒಕ್ಕೂಟ ರಚನೆಯಾಗಿದ್ದು ನನಗೆ ಸಂತೋಷ ತಂದಿದೆ.
ವಿದ್ಯಾರ್ಥಿಗಳು ಸದಾ ಶಾಲೆಯೊಂದಿಗೆ ಉತ್ತಮವಾದ ಸಂಬಂಧ ಹೊಂದಿರುವುದು ಒಳ್ಳೆಯದು ಎಂದರು.
ಇದೇ ಸಂದರ್ಭದಲ್ಲಿ ಇನ್ನೋರ್ವ ಅತಿಥಿಗಳಾಗಿ ಆಗಮಿಸಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಶಾಲೆಯ ಮೊಟ್ಟಮೊದಲ ಮುಖ್ಯೋಪಾಧ್ಯಾಯರಾದ ಶ್ರೀಯುತ ಎಸ್ ಟಿ ಪಾಟೀಲ ಮಾತನಾಡುತ್ತ ಶಾಲೆಯ ಆರಂಭಿಕ ದಿನಗಳ ನೆನಪುಗಳನ್ನು ಮೆಲುಕು ಹಾಕಿದರು.
ಇನ್ನೋರ್ವ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಶ್ರೀಯುತ ಚೆನ್ನಯ್ಯ ಹಿರೇಮಠ ಮಾತನಾಡುತ್ತಾ ಸಪ್ತ ಋಷಿಗಳು ಶ್ರಮದ ಫಲವಾಗಿ ತಲೆಯೆತ್ತಿದ ಕೆ ಎಲ್ ಇ ಸಂಸ್ಥೆಯ ಅಂಗ ಸಂಸ್ಥೆಯಾಗಿ ಬೆಳೆದು ಹೆಮ್ಮರವಾಗಿ ರಜತ ಮಹೋತ್ಸವದ ಪ್ರಯುಕ್ತ ಹಳೆಯ ವಿದ್ಯಾರ್ಥಿಗಳ ಒಕ್ಕೂಟ ರಚನೆಯಾಗಿದ್ದು ವಿದ್ಯಾರ್ಥಿಗಳ ಸಂಘಟನೆಯ ಸಹಕಾರದಿಂದ ಶಾಲೆಯು ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಕ್ರೀಡೆಯಲ್ಲಿ ಅಪಾರ ಸಾಧನೆ ಗೈದಿರುವುದು ನಿಜಕ್ಕೂ ಶ್ಲಾಘನೀಯ. ಶಾಲೆಯ ಸಾಧನೆ ಇನ್ನೂ ಉತ್ತರೊತ್ತರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಘನ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಕಲ್ಪನಾ ಚಚಡಿ ಶಾಲೆಯ ಬೆಳವಣಿಗೆಗೆ ಸಹಾಯ ಸಹಕಾರ ನೀಡಿದ ಸರ್ವ ಮಹನೀಯರನ್ನು ಪತ್ರಿಕಾ ಮಾಧ್ಯಮದ ಸನ್ಮಿತ್ರರ ಉಪಕಾರವನ್ನು ಸ್ಮರಿಸಿದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಹಾಗೂ ಸರ್ಕಾರಿ ಸೇವೆಗೆ ಆಯ್ಕೆಯಾದ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಒಕ್ಕೂಟದ ಕಾರ್ಯದರ್ಶಿ ಶ್ರೀ ಶಶಾಂಕ ಗಜಕೋಶ ಸಹ ಕಾರ್ಯದರ್ಶಿ ಶ್ರೀ ಜಾಫರ್ ಸಾಧಿಕ್ ಹೊಂಬಳ ವೇದಿಕೆಯಲ್ಲಿ ಉಪಸ್ಥಿತರಿದ್ದರು
ಕೆ ಎಲ್ ಇ ಸಂಸ್ಥೆಯ ಸಿ ಬಿ ಎಸ್ ಇ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ಆಯೋಜಿಸಲಾಗಿತ್ತು
ಕರುನಾಡು ಘರ್ಜನೆ ಸುದ್ದಿ ಗದಗ: ಡಿ 20 ಸ್ಥಳೀಯ ಕೆ ಎಲ್ ಇ ಸಂಸ್ಥೆಯ ಸಿ ಬಿ ಎಸ್ ಇ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ಬ್ಯಾಕ್ ಟು ಬೆಂಚಸ್’ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರಸ್ತುತ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ವಿಧಾನ…