ಕರುನಾಡು ಘರ್ಜನೆ ಸುದ್ದಿ ಗದಗ,12: ಸರ್ಕಾರದ ಆದೇಶದನ್ವಯ ಪ್ರತಿ ವರ್ಷದಂತೆ ಈ ವರ್ಷವು ದಿ:25.01.2026 ರಂದು ಆಚರಿಸಲಾಗುವ ಸವಿತಾ ಮಹರ್ಷಿ ಜಯಂತಿ ನಿಮಿತ್ಯ ದಿ:12.01.2026 ರಂದು ಸೋಮವಾರ ಮಧ್ಯಾಹ್ನ :12:30. ಗಂಟೆಗೆ ಮಾನ್ಯ ಅಪರ ಜಿಲ್ಲಾಧಿಕಾರಿಗಳು, ಗದಗ ಇವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಜರುಗಿತು
ಸಭೆಯಲ್ಲಿ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಅವರು ಮಾತನಾಡಿ ಅಂದು ದಿ. 25 ರವಿವಾರ( ಬಾನುವಾರ ) ಇರುವುದರಿಂದ ನಮ್ಮ ಸವಿತಾ ಸಮಾಜದ ಕ್ಷೌರದ ಅಂಗಡಿಗಳಲ್ಲಿ ಸರ್ಕಾರಿ ನೌಕರರು ಕೂಲಿ ಕಾರ್ಮಿಕರು ಮತ್ತು ಕಡ್ಡಾಯವಾಗಿ ಭಾನುವಾರ ದಿನದಂದೇ ರಜೆ ಪಡೆಯುವಂತಹ ಜನಸಾಮಾನ್ಯರು ಗ್ರಾಹಕರು ಹೆಚ್ಚಾಗಿ ಇರುತ್ತಾರೆ, ಅವರಿಗೆ ಕ್ಷೌರ ಸೇವೆ ಸಲ್ಲಿಸುವುದು ಅಗತ್ಯವಾಗಿದೆ
ಒಂದು ವೇಳೆ ಅವರಿಗೆ ಅಂದಿನ ದಿನ ಕ್ಷೌರ ಸೇವೆ ದೊರಕದಿದ್ದರೆ ಮುಂದಿನ ವಾರದವರೆಗೂ ಕಾಯುವ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗುತ್ತದೆ
ಹಾಗಾಗಿ ನಮ್ಮ ಸಮಾಜದ ಬಾಂಧವರು ಸದರಿ ಕಾರ್ಯಕ್ರಮದ ಸರಿಯಾದ ಸಮಯದಲ್ಲಿ ಭಾಗವಹಿಸಲು ತೊಂದರೆಯಾಗುತ್ತದೆ.
ಕಾರ್ಯಕ್ರಮ ಯಶಸ್ವಿಯಾಗಲೂ ಜನರು ಸೇರಿದರೆ ಮಾತ್ರ ಅದು ಸಾದ್ಯ?. ಇಲ್ಲದಿದ್ದರೆ ಕಾರ್ಯಕ್ರಮ ಯಶಸ್ವಿಯಾಗುವುದಿಲ್ಲ. ಹಾಗಾಗಿ ಗ್ರಾಹಕರ ಮತ್ತು ಜನಸಾಮಾನ್ಯರ ಹಿತದೃಷ್ಟಿಯಿಂದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮವನ್ನು ದಿನಾಂಕ 25-01-2026 ರ ಭಾನುವಾರ ಬದಲಾಗಿ 27-01-2026 ರ ಮಂಗಳವಾರ ಕಾರ್ಯಕ್ರಮ ಮಾಡುವಂತೆ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಅವರು ಗದಗ ಜಿಲ್ಲಾಧಿಕಾರಿಗಳಿಗೆ ಮನಪೂರ್ವಕವಾಗಿ ವಿನಂತಿಸಿ ಒತ್ತಾಯಿಸಿದರು ಮತ್ತು ಸಮಾಜ ಬಾಂಧವರನ್ನು ಜೊತೆಗೂಡಿಸಿಕೊಂಡು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಹ ಸಲ್ಲಿಸಿ ಒತ್ತಾಯಿಸಿದರು
ಸವಿತಾ ಸಮಾಜದ ಕ್ಷೌರಸೇವಾ ಕರ್ತರ ಹಾಗೂ ಗ್ರಾಹಕರ ಮತ್ತು ಜನಸಾಮಾನ್ಯರ ಹಿತದೃಷ್ಟಿಯಿಂದ ಮಾನ್ಯ ಜಿಲ್ಲಾಧಿಕಾರಿಗಳು ಗದಗ ಜಿಲ್ಲಾ ಸವಿತಾ ಸಮಾಜದ ಮಹತ್ವದ ಬೇಡಿಕೆಯಂತೆ ಸವಿತಾ ಮಹರ್ಷಿ ಜಯಂತಿ ಆಚರಣೆಯನ್ನು ಜನವರಿ 25ರ ಭಾನುವಾರ ಬದಲಾಗಿ 27ರ ಮಂಗಳವಾರ ಮಾಡಲು ತೀರ್ಮಾನ ಮಾಡಿದರು
“ಜಿಲ್ಲಾಧಿಕಾರಿಗಳ ಈ ನಿರ್ಧಾರವು ನಮ್ಮ ಸಮಾಜದ ಜನರಿಗೆ ಮತ್ತು ಜನಸಾಮಾನ್ಯರಿಗೆ ಅನುಕೂಲವಾಗಲಿದೆ. ಇದರಿಂದ ನಮ್ಮ ಸಮಾಜದ ಜನರು ಸವಿತಾ ಮಹರ್ಷಿ ಜಯಂತಿ ಆಚರಣೆಯಲ್ಲಿ ಹೆಚ್ಚು ಹೆಚ್ಚಾಗಿ ಭಾಗವಹಿಸಲು ಅನುಕೂಲವಾಗುತ್ತದೆ” ಎಂದು ರಾಜ್ಯ ನಾಯಕರಾದ ಹನುಮಂತಪ್ಪ ರಾಂಪೂರ ಹರ್ಷ ವ್ಯಕ್ತಪಡಿಸಿದರು.
ಸಭೆಯ ಕೊನೆಯಲ್ಲಿ ಗದಗ ಜಿಲ್ಲೆಯ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಸೇರಿದಂತೆ ಸಭೆಯಲ್ಲಿ ಭಾಗವಹಿಸಿದ ಸಮಾಜ ಬಾಂಧವರೆಲ್ಲರೂ ಸೇರಿ ಜಿಲ್ಲಾಧಿಕಾರಿಗಳ ಕ್ರಮಕ್ಕೆ ಸಂತೋಷ ವ್ಯಕ್ತಪಡಿಸಿ ಕೃತಜ್ಞತೆಗಳು ಸಲ್ಲಿಸಿದರು.
ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ವಿಭಾಗೀಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಹನಮಂತಪ್ಪ ರಾಂಪೂರ, ಗದಗ ಸವಿತಾ ಸಮಾಜ ಸುಧಾರಣಾ ಸಂಘದ ಅಧ್ಯಕ್ಷರಾದ ಪರಶುರಾಮ ಕೋಟೆಕಲ್ಲ. ಪ್ರ.ಕಾರ್ಯದರ್ಶಿಗಳಾದ ರವಿಕುಮಾರ ಹಡಪದ(ಬುದೂರ). ಶ್ರೀ ಸಂತ ಸೇನಾ ಮಹಾರಾಜ ನಾಭಿಕ್ ಮರಾಠ (ಸವಿತಾ) ಸಮಾಜದ ಜಿಲ್ಲಾಧ್ಯಕ್ಷರುಗಳಾದ ರಾಜು ಮಾನೆ ಮತ್ತು ವಿಕಾಸ ಕ್ಷೀರಸಾಗರ. ಕೇಶಾಲಂಕಾರ ಸೇವಾ ಪರ್ಷತ್ ಅಧ್ಯಕ್ಷರಾದ ಯಲ್ಲಪ್ಪ ರಾಂಪುರ. ಜಿಲ್ಲಾ ಖಜಾಂಚಿ ಅರೂಣ ರಾಂಪೂರ. ಜಿಲ್ಲಾ ಸಾಮಾಜಿಕ ಜಾಲತಾಣ ಕಾರ್ಯದರ್ಶಿಗಳಾದ ವಿನಾಯಕ ರಾಯಚೂರ. ಹಿರಿಯರಾದ ಪರಶುರಾಮ (ಬಜ್ಜು) ರಾಂಪುರ. ಬಾಲರಾಜ ಕೋಟೆಕಲ್ಲ. ಪಾಂಡು ಕಾಳೆ. ದೀಪಕ ಮಾನೆ. ಹೇಮಂತ ವಡ್ಡೆಪಲ್ಲಿ. ತುಕಾರಾಮ ಮಾನೆ. ಕಿರಣ ರಾಂಪುರ. ಮಾದು ಮಾನೆ. ಶ್ರೀನಿವಾಸ ಕೊಟೇಕಲ್ಲ. ಯುವ ನಾಯಕರಾದ ಸುನಿಲ ರಾಯಚೂರ. ಕೃಷ್ಣಾ ಬೂದೂರ. ಪ್ರಕಾಶ ಬೂದೂರ. ಗಣೇಶ ಕಡಮೂರ. ಪ್ರೇಮ ಬದೂರ. ಪಾಂಡುರಂಗ ರಾಂಪುರ. ಪ್ರೇಮ ರಾಂಪುರ. ಪರಶುರಾಮ ಗೊಡ್ಡಟ್ಟಿ. ಹಾಗೂ ಸಮಾಜದ ಗುರು ಹಿರಿಯರು ಬಂಧು ಬಾಂಧವರ ಉಪಸ್ತಿತರಿದ್ದರು.
1) ಸವಿತಾ ಮಹರ್ಷಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಸಮಾಜದ ಆಶಯದಂತೆ ಸರ್ಕಾರದ ಆದೇಶವನ್ನು ಗದಗ ಜಿಲ್ಲೆಯ ಯಲ್ಲಾ ತಾಲ್ಲೂಕಾ ಮಟ್ಟದ ಯಾವದೇ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುವಂತಿಲ್ಲ. ನಿರ್ಲಕ್ಷ್ಯ ವಹಿಸಿದರೆ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು
2) ಸವಿತಾ ಮಹರ್ಷಿಗಳ ಇತಿಹಾಸವನ್ನು ಎಲ್ಲಾ ಶಾಲಾ ಕಾಲೇಜುಗಳಲ್ಲಿ ಪ್ರತಿ ಇಲಾಖೆ ಅಂಗನವಾಡಿಗಳಲ್ಲಿ ಜಯಂತಿ ಆಚರಣೆಯಷ್ಟೆ ಅಲ್ಲ ಮಕ್ಕಳಿಗೆ ಸವಿತಾ ಮಹರ್ಷಿಗಳ ತತ್ವ ಸಿದ್ಧಾಂತ ಮತ್ತು ಇತಿಹಾಸವನ್ನು ತಿಳಿಸಲು ಶಿಕ್ಷಣ ಇಲಾಖೆ ಸಹ ಆದೇಶಿಸಬೇಕು
3) ಸವಿತಾ ಮಹರ್ಷಿಗಳ ಜಯಂತಿಯನ್ನು ಕಡ್ಡಾಯವಾಗಿ ಆಚರಿಸಲು ಸರ್ಕಾರದ ಆದೇಶವನ್ನು ಪಾಲಿಸದ ಅಧಿಕಾರಿಗಳಂತವರ ವಿರುದ್ದ ಸೂಕ್ತ ಕ್ರಮಕ್ಕಾಗಿ ಗದಗ ಜಿಲ್ಲಾ ಸವಿತಾ ಸಮಾಜವು ಅನಿವಾರ್ಯವಾಗಿ ಹೋರಾಟ ಮಾಡಲಾಗುವದು ಎಂದು ಸಭೆ ಮೂಲಕ ಎಚ್ಚರಿಕೆ ನೀಡಿದ್ದಾರೆ.