ಕರುನಾಡು ಘರ್ಜನೆ ಸುದ್ದಿ ಗದಗ, ಜನವರಿ 12: ಮಿಥುನ ಪಾಟೀಲ ಅವರು ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಸ್ಥಾಪಿಸಿಕೊಂಡಿದ್ದಾರೆ, ಅವರು ಶಾಸಕರ ಮಗನಾಗಿದ್ದರೂ ಸಹ ಅವರಿಗೆ ಯಾವುದೇ ಅಹಂ ಇಲ್ಲದೆ ಬಡವರ, ರೈತರ, ಶ್ರಮಿಕರ ಮತ್ತು ನೊಂದ ಸಮುದಾಯಗಳ ಪರ ಧ್ವನಿಯಾಗಿರುವ ಬಡವರ ಬಂಧು, ಅದ್ಭುತ ಜನಮೆಚ್ಚಿದ ನಾಯಕರಾಗಿದ್ದಾರೆ. ಎಂದು ಗದಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಯುವ ಘಟಕದ ಮಾಜಿ ಅಧ್ಯಕ್ಷರಾದ ರವಿಕುಮಾರ್ ರೆಡ್ಡಿ ಅವರು ಹೇಳಿದರು
ಅವರು ಮಿಥುನ್ ಪಾಟೀಲ್ ಅವರ ಜನ್ಮದಿನಾಚರಣೆ ನಿಮಿತ್ತವಾಗಿ ಅವರಿಗೆ ಗೌರವ ಸನ್ಮಾನ ಸಲ್ಲಿಸಿ ಶುಭ ಕೋರಿ ಮಾತನಾಡಿ ಮಿಥುನ ಪಾಟೀಲ ಅವರು ಸಮಾಜದ ಹಿತಕ್ಕಾಗಿ ಹೋರಾಡುವ ಧೀರ. ಅವರು ಜನಸಾಮಾನ್ಯರ ನಾಯಕ, ಸಮಾಜದ ಪ್ರತಿಯೊಬ್ಬರ ಸಮಸ್ಯೆಗಳನ್ನು ಕೇಳುವ ಮತ್ತು ಪರಿಹರಿಸುವ ಕಾಳಜಿ ಅವರಿಗಿದೆ. ಅವರ ನಾಯಕತ್ವದಲ್ಲಿ ರೋಣ ಮತಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಎಂದ ಅವರು ಮಿಥುನ್ ಪಾಟೀಲ್ ಅವರ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸುವ ಜತೆಗೆ
ಅವರಿಗೆ ಉತ್ತಮ ಆರೋಗ್ಯ, ಸುದೀರ್ಘ ಜೀವನ ಮತ್ತು ಸಮಾಜ ಸೇವೆಯಲ್ಲಿ ಮುಂದುವರಿಯುವ ಶಕ್ತಿಯನ್ನು ದೇವರಲ್ಲಿ ಕೋರುತ್ತೇನೆ. ಎಂದು ಗದಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಯುವ ಘಟಕದ ಮಾಜಿ ಅಧ್ಯಕ್ಷರಾದ ರವಿಕುಮಾರ್ ರೆಡ್ಡಿ ಅವರು ಹೇಳಿದರು
ಈ ಸಂದರ್ಭದಲ್ಲಿ ಹಿರಿಯರಾದ ತಾಯೇಬ ಕುನ್ನಿಭಾವಿ. ರೋಣ ಪುರಸಭೆಯ ಮಾಜಿ ಸದಸ್ಯರಾದ ಬಸವರಾಜ ನಾಯಕ್. ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಯುವ ನಾಯಕರಾದ ರಾಘವೇಂದ್ರ ಸುರೇಬಾನ್. ಹಾಗೂ ಇತರರು ಉಪಸ್ಥಿತರಿದ್ದರು
ಮಿಥುನ್ ಪಾಟೀಲ್ ಅವರು ಬಡವರ ಬಂಧು, ಜನಮೆಚ್ಚಿದ ನಾಯಕ : ರವಿಕುಮಾರ್ ರೆಡ್ಡಿ
ಕರುನಾಡು ಘರ್ಜನೆ ಸುದ್ದಿ ಗದಗ, ಜನವರಿ 12: ಮಿಥುನ ಪಾಟೀಲ ಅವರು ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಸ್ಥಾಪಿಸಿಕೊಂಡಿದ್ದಾರೆ, ಅವರು ಶಾಸಕರ ಮಗನಾಗಿದ್ದರೂ ಸಹ ಅವರಿಗೆ ಯಾವುದೇ ಅಹಂ ಇಲ್ಲದೆ ಬಡವರ, ರೈತರ, ಶ್ರಮಿಕರ ಮತ್ತು ನೊಂದ ಸಮುದಾಯಗಳ ಪರ…