ಕರುನಾಡು ಘರ್ಜನೆ ಸುದ್ದಿ ಗದಗ : ಧಾರವಾಡ ಜಿಲ್ಲೆಯ ಹುಬ್ಬಳ್ಳಿಯ ತಾಲೂಕಿನ ಇನಾಮ ವೀರಾಪುರ ಗ್ರಾಮದ ಮಾನ್ಯಳ ಎಂಬ ಲಿಂಗಾಯತ ಸಮುದಾಯಕ್ಕೆ ಸೇರಿದ ಯುವತಿ, ಅದೇ ಗ್ರಾಮದ ವಿವೇಕಾನಂದ. ದೊಡ್ಡಮನಿ ಎಂಬ ಮಾದಿಗ ಸಮಾಜಕ್ಕೆ ಸೇರಿದ ಯುವಕನ ಜೋತೆ ಪ್ರೇಮ ವಿವಾಹವಾಗಿದ್ದರು.
ಮೂರು ವರ್ಷದಿಂದ ಒಬ್ಬರಿಗೊಬ್ಬರು ಪ್ರೀತಿಸಿ, ಕಾನೂನು ಪ್ರಕಾರ ಉಪ-ನೋಂದಣಿ ಇಲಾಖೆಯಲ್ಲಿ ಮದುವೆ ಆಗಿ ಜೀವನ ನಡೆಸುತ್ತಿದ್ದರು. ಪ್ರಾಣ ಭಯದಿಂದ ಹಾವೇರಿಯಲ್ಲಿ ಸತಿ-ಪತಿಗಳು ತಮ್ಮ ಜೀವನ ನಡೆಸುತ್ತಿದ್ದರು. ಮಾನ್ಯ ಎಂಬ ಯುವತಿಯು ಏಳು ತಿಂಗಳ ತುಂಬು ಗರ್ಭಿಣಿಯಾಗಿದ್ದಳು. ಹುಬ್ಬಳ್ಳಿಯ ಆಸ್ಪತ್ರೆಗೆಂದು ಬಂದಿದ್ದಳು. ಸುದ್ದಿ ತಿಳಿದ ರವಿವಾರ 21-12-2025 ರಂದು ಮಾನ್ಯಳ ಕುಟುಂಬಸ್ಥರು ಹುಡುಗನ ಮನೆಗೆ ನುಗ್ಗಿ ಕೊಡಲಿ, ಬಡಿಗೆ, ಮಚ್ಚಿನಿಂದ ಕೊಚ್ಚಿ ಮಾನ್ಯಳ ಎಂಬ ಯುವತಿಗೆ ಪ್ರಕಾಶಗೌಡ ಪಾಟೀಲ್ ಮತ್ತು ವೀರನಗೌಡ ಪಾಟೀಲ್, ಅರುಣಗೌಡ ಪಾಟೀಲ್ ಅನೇಕರು ಗುಂಪು ಕಟ್ಟಿಕೊಂಡು ಬಂದು ಸಿಕ್ಕವರ ಮೇಲೆ ಕಬ್ಬಿಣದ ಸಲಾಕೆ ಮಚ್ಚಿನಿಂದ ಕೊಚ್ಚಿ, ಕೊಲೆ ಮಾಡಿದ್ದು ಅಮಾನವಿಯ ಘಟನೆ ನಡೆದಿದೆ.
ಆ ಹುಡುಗನ ತಂದೆ-ತಾಯಿಗೆ ಇನ್ನೂ ಅನೇಕರಿಗೆ ಜೀವ ಹೋಗುವ ರೀತಿ ಶಸ್ತ್ರಾಸ್ತ್ರ ಬಳಸಿ ಮಾರಣಾಂತಿಕ ಹಲ್ಲೆ ಮಾಡಿದ್ದು ಇಡೀ ಮಾನವ ಕುಲವೇ ತಲೆ ತಗ್ಗಿಸುವಂತಾಗಿದೆ. ಈಗಾಗಲೇ ಇದರ ಬಗ್ಗೆ CR NO 0318/2025 ಹುಬ್ಬಳ್ಳಿಯ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಆಟ್ರಾಸಿಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧನವಾಗಿರು ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ತಮ್ಮಲ್ಲಿ ಕಳಕಳಿಯ ವಿನಂತಿ, ನೊಂದ ಕುಟುಂಬಸ್ಥರಾದ ವಿವೇಕಾನಂದ ದೊಡ್ಡಮನಿಯವರಿಗೆ ಸರ್ಕಾರ ಪೊಲೀಸ ರಕ್ಷಣೆ ನೀಡಬೇಕು ಮತ್ತು ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿ ನೀಡಬೇಕೆಂದು ವಿನಂತಿಸಿಕೊಳ್ಳುತ್ತೇವೆ.
ಕರ್ನಾಟಕ ರಾಜ್ಯದಲ್ಲಿ ಜಾತಿ ವಿಚಾರಕ್ಕೆ ತಂದೆ ತನ್ನ ಮಗಳನ್ನ ಕೊಚ್ಚಿ ಕೊಲೆ ಮಾಡಿದ್ದು ನೋಡಿ ಇನ್ನೂ, ಅಸ್ಪೃಶ್ಯತೆ, ಅಸಮಾನತೆ, ಕೆಳ ಜಾತಿ, ಮೇಲ್ವಾತಿ ಅಂತ ಬೇದ ಭಾವವಿರುವುದು ಮನುಷ್ಯನಲ್ಲಿದಿದ್ದು ಈ ಘಟನೆಗೆ ಮುಖ್ಯ ಕಾರಣವಾಗಿದೆ.
ದಯಾಳುಗಳಾದ ತಾವು ಇತ ಕಡೆ ಗಮನಹರಿಸಿ ಇಂತಹ ಗೋಮುಖ ವ್ಯಾಘ್ರ ಮಾನ್ಯಳ ತಂದೆಯನ್ನು ಹಾಗೂ ಸಹಚರರಿಗೆ ಗಲ್ಲುಶಿಕ್ಷೆ ನೀಡಬೇಕೆಂದು ನಮ್ಮ ಯುವ ಕರ್ನಾಟಕ ಭೀಮ್ ಸೇನೆ ಸಂಘಟನೆಯಿಂದ ಒತ್ತಾಯಿಸುತ್ತೇವೆ. ಈ ಸಂದರ್ಭದಲ್ಲಿ ರಾಮು, ಬಾಗಲಕೋಟೆ ಖಾಜಿಸಾಬ ಎಂಬುದು ಶಬ್ಬೀರ್ ತಹಶೀಲ್ದಾರ್ ಎಕಪ್ಪಾ ತಾಳದವರ ಯಾಕುಬುಸಾಬ ಅತುರ ಇದ್ರಿಸ ಮುಲ್ಲಾ ಸಾದೀಕ ಧಾರವಾಡ ರಫೀಕ ಕರೆಕಾಯಿ ರಶಿದ ನಾಗರದಿನ್ನಿ ಇರ್ಫಾನ್ ಶಿರಟ್ಟಿ ಶಾಬುದಿನ ಧಾರವಾಡಖಾದಾರ ನವಲಗುಂದ ಫೈಯಾಜ ಕಬಾಡಿ ನಜೀರ್ ಬಳ್ಳಾರಿ ಮುಸ್ತಾಕ್ ಹಣಿಗಿ