ಕರುನಾಡು ಘರ್ಜನೆ ಸುದ್ದಿ ಗದಗ-೦೪ : ಗದಗ-ಬೆಟಗೇರಿ ನಗರಸಭೆಯು ಈಗಾಗಲೇ ಭ್ರಷ್ಟಾಚಾರದ ಅಡ್ಡೆಯಾಗಿದ್ದು, ಗದಗ ಜನತೆಗೆ ತಿಳಿದಿರುವ ವಿಷಯ. ಈಗಾಗಲೇ ಇಲ್ಲಿ ಕೆಲವು ಸಿಬ್ಬಂದಿ ತಮ್ಮ ಕೆಲಸವನ್ನು ತಾವು ಮಾಡದೇ ತಮ್ಮ ಅಸಿಸ್ಟಂಟ್‌ಗಳನ್ನಾಗಿ ತಾವೇ ಅನಧಿಕೃತವಾಗಿ ನೇಮಕ ಮಾಡಿಕೊಂಡು ರಾಜಕೀಯ ವ್ಯಕ್ತಿಗಳು ಮತ್ತು ಪ್ರಭಾವಿಗಳ ಕೆಲಸ ಕಾರ್ಯಗಳನ್ನು ಮಾಡಿಕೊಡಲು ತಂದು ನಗರಸಭೆಯಲ್ಲಿ ಭ್ರಷ್ಟಾಚಾರದ ಕೆಲಸವನ್ನು ಮಾಡಿಸುತ್ತಿದ್ದರು. ಅನಧಿಕೃತ ಸಿಬ್ಬಂದಿಗಳಿಗೆ ಕಛೇರಿಯ ಎಲ್ಲ ಡಾಟಾ ಕೊಟ್ಟು ಲಂಚ ಪಡೆದು ಸಾರ್ವಜನಿಕರ ಕೆಲಸಗಳನ್ನು ಮಾಡದೇ ಯಾರು ದುಡ್ಡು ಕೊಡುತ್ತಾರೆ ಅವರ ಕೆಲಸಗಳನ್ನು ಮಾತ್ರ ಮಾಡುತ್ತಿದ್ದಾರೆ ಹಾಗೂ ಗದಗ-ಬೆಟಗೇರಿ ನಗರಸಭೆಗೆ ಬರುವ ಸಾರ್ವಜನಿಕರಿಗೆ ಸರಿಯಾದ ಕೆಲಸಗಳಾಗುತ್ತಿಲ್ಲ, ಅದರಲ್ಲೂ ಕಂದಾಯ ವಿಭಾಗದಲ್ಲಿ ಅತಿ ಹೆಚ್ಚು ಅನಧಿಕೃತ ಸಿಬ್ಬಂದಿಗಳಿಗೆ ದ್ದು, ಖಾತಾ ಬದಲಾವಣೆ, ಫಾರಂ ನಂ. ೩ ಕೊಡುವುದರಲ್ಲಿ ನಿಸ್ಸೀಮರು. ಲಂಚ ಕೊಟ್ಟರೆ ಏನು ಬೇಕಾದರೂ ಕಾನೂನುಬಾಹಿರ ಕೆಲಸಗಳಿದ್ದರೂ ಮಾಡಲು ಹಿಂಜರಿಯುವುದಿಲ್ಲ. ಯಾಕೆಂದರೆ ಇವರಿಗೆ ನಗರಸಭೆ ಸಂಬಳ ಕೊಡುವುದಿಲ್ಲ, ಇವರ ದುಡಿಮೆ ಇವರೇ ನೋಡಿಕೊಳ್ಳಬೇಕು. ಇಂತಹ ಅನಧಿಕೃತ ಸಿಬ್ಬಂದಿಗಳನ್ನು ಕಛೇರಿಯ ಒಳಗಡೆ ಬಿಟ್ಟವರು ಯಾರು ಅಂಥವರನ್ನು ವಿಚಾರಣೆ ನಡೆಸಿ ಅವರನ್ನು ಸೇವೆಯಿಂದ ವಜಾ ಮಾಡಬೇಕು. ಈಗಾಗಲೇ ಡಾ. ಬಿ.ಆರ್. ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ ಗದಗ ಜಿಲ್ಲಾ ಘಟಕದ ವತಿಯಿಂದ ದಿನಾಂಕ ೬-೨-೨೦೨೪ ರಂದು ನಡೆದ ಗದಗ-ಬೆಟಗೇರಿ ನಗರಸಭೆ ಆಯವ್ಯಯ ಮೇಲಿನ ದ್ವಿತೀಯ ಸಮಾಲೋಚನಾ ಸಭೆಯಲ್ಲಿ ಮಾನ್ಯ ಅಧ್ಯP್ಷÀರ ಹಾಗೂ ಪೌರಾಯುಕ್ತರ ಗಮನಕ್ಕೆ ತಂದರು ಸಹ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ. ಏಕೆಂದರೆ ಇವರಿಗೂ ಈ ಅನಧಿಕೃತ ಸಿಬ್ಬಂದಿಗಳಿಂದ ಪ್ರತಿ ತಿಂಗಳು ಮಾಮೂಲು ಹೋಗುತ್ತಿರಬೇಕೆಂಬ ಅನುಮಾನಗಳು ಮೂಡುತ್ತವೆ.
ಈ ಕುರಿತು ಮಾನ್ಯ ಜಿಲ್ಲಾಧಿಕಾರಿಗಳಿಗೆ ದಿನಾಂಕ ೨೮-೦೨-೨೦೨೪ ರಂದು ಮನವಿ ಮಾಡಿದ್ದರೂ ಮಾನ್ಯ ಜಿಲ್ಲಾಧಿಕಾರಿಗಳು ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ. ಈ ಕೂಡಲೇ ಗದಗ-ಬೆಟಗೇರಿ ನಗರಸಭೆಗೆ ಮಾನ್ಯ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಅನಧಿಕೃತ ಸಿಬ್ಬಂದಿಗಳು ಕಾನೂನುಬಾಹಿರವಾಗಿ ಸೇವೆ ಸಲ್ಲಿಸುತ್ತಿರುವ ಬಗ್ಗೆ ತನಿಖೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ತು ಮಾಡಬೇಕು ಇಲ್ಲವಾದಲ್ಲಿ ದಿನಾಂಕ ೦೭-೦೫-೨೦೨೪ ರಂದು ನಡೆಯುವ ಚುನಾವಣೆಯ ಮತದಾನ ಬಹಿಷ್ಕರಿಸಿ ಜಿಲ್ಲಾಡಳಿತ ಹಾಗೂ ನಗರಸಭೆ ವಿರುದ್ಧ ಡಾ. ಬಿ. ಆರ್. ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ ಗದಗ ಜಿಲ್ಲಾ ಘಟಕದ ವತಿಯಿಂದ ದಿನಾಂಕ ೦೬-೦೫-೨೦೨೪ ರಂದು ಜೀಲಾಧಿಕಾರಿಗಳ ಕಛೇರಿ ಎದುರಿಗೆ ಪ್ರತಿಭೆಟನೆ ನಡೆಸಲಾಗುವುದು.