Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಗದಗ

ಗದಗ ಜಿಲ್ಲೆಯಲ್ಲಿ ಅಟೋ ಗ್ಯಾಸ್ ದರ ಏರಿಕೆ ಮತ್ತು ಕೃತಕ ಅಭಾವದ ಹೆಸರಲ್ಲಿ ಬಂಕ್ ಮಾಲೀಕರಿಂದ ‘ಗಗನಚುಂಬಿ’ ಸುಲಿಗೆ – ಸಾಮಾಜಿಕ ಕಾರ್ಯಕರ್ತ ಕೃಷ್ಣಾ ಎಚ್. ಹಡಪದ ಆಕ್ರೋಶ.

ಕರುನಾಡು ಘರ್ಜನೆ ಸುದ್ದಿ ಗದಗ 02: “ಯುದ್ಧದ ನೆಪವೊಡ್ಡಿ ತೈಲ ಕಂಪನಿಗಳು ದರ ಏರಿಸುತ್ತಿದ್ದರೆ, ಇತ್ತ ಗದಗ ಜಿಲ್ಲೆಯ ಕೆಲವು ಬಂಕ್ ಮಾಲೀಕರು ‘ಕೃತಕ ಅಭಾವ’ ಸೃಷ್ಟಿಸಿ ಆಟೋ ಚಾಲಕರ ರಕ್ತ ಹೀರುತ್ತಿದ್ದಾರೆ,” ಎಂದು ಸಾಮಾಜಿಕ ಕಾರ್ಯಕರ್ತರಾದ ಕೃಷ್ಣಾ ಎಚ್. ಹಡಪದ…

ಕರುನಾಡು ಘರ್ಜನೆ ಸುದ್ದಿ ಗದಗ 02: “ಯುದ್ಧದ ನೆಪವೊಡ್ಡಿ ತೈಲ ಕಂಪನಿಗಳು ದರ ಏರಿಸುತ್ತಿದ್ದರೆ, ಇತ್ತ ಗದಗ ಜಿಲ್ಲೆಯ ಕೆಲವು ಬಂಕ್ ಮಾಲೀಕರು ‘ಕೃತಕ ಅಭಾವ’ ಸೃಷ್ಟಿಸಿ ಆಟೋ ಚಾಲಕರ ರಕ್ತ ಹೀರುತ್ತಿದ್ದಾರೆ,” ಎಂದು ಸಾಮಾಜಿಕ ಕಾರ್ಯಕರ್ತರಾದ ಕೃಷ್ಣಾ ಎಚ್. ಹಡಪದ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಗದಗ ಜಿಲ್ಲೆಯ ಆಟೋ ಚಾಲಕರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ
*ದರ ಏರಿಕೆಯ ಬಿಸಿ:* ಮಾರ್ಚ್ 1 ರಂದು ಪ್ರತಿ ಲೀಟರ್‌ಗೆ ₹60 ಇದ್ದ ಎಲ್‌ಪಿಜಿ ದರವನ್ನು ಕೇವಲ ಒಂದು ತಿಂಗಳ ಅವಧಿಯಲ್ಲಿ ಹಂತ ಹಂತವಾಗಿ ₹97 ಕ್ಕೆ ಏರಿಸಲಾಗಿದೆ. ಈ ₹37 ಗಳ ಭಾರಿ ಏರಿಕೆಯು ಬಡ ಮತ್ತು ಮಧ್ಯಮ ವರ್ಗದ ಆಟೋ ಚಾಲಕರ ಬೆನ್ನೆಲುಬು ಮುರಿಯುವಂತೆ ಮಾಡಿದೆ.
*ಬಂಕ್ ಮಾಲೀಕರ ಅಕ್ರಮ ದಂಧೆ* ಗ್ಯಾಸ್ ಲಭ್ಯವಿದ್ದರೂ ‘No Stock’ ಫಲಕ ಹಾಕಿ ಚಾಲಕರನ್ನು ಸತಾಯಿಸಲಾಗುತ್ತಿದೆ. ತುರ್ತು ಸಂದರ್ಭದಲ್ಲಿ ಗ್ಯಾಸ್ ಕೇಳುವ ಚಾಲಕರಿಂದ ಲೀಟರ್‌ಗೆ ₹5 ರಿಂದ ₹20 ರವರೆಗೆ ‘ಹೆಚ್ಚುವರಿ ಕಮಿಷನ್’ ಎಂಬ ಹೆಸರಿನಲ್ಲಿ ಲೂಟಿ ಮಾಡಲಾಗುತ್ತಿದೆ. ಇದು ಜಿಲ್ಲಾಡಳಿತದ ಕಣ್ಣೆದುರೇ ನಡೆಯುತ್ತಿರುವ ಬಹಿರಂಗ ಸುಲಿಗೆಯಾಗಿದೆ.
*ಚಾಲಕರ ಮಾನವೀಯತೆ – ಸರ್ಕಾರದ ಮೌನ* “ಲೀಟರ್‌ಗೆ ₹37 ಹೆಚ್ಚಾದರೂ, ಗದಗ ಜಿಲ್ಲೆಯ ಆಟೋ ಚಾಲಕರು ಪ್ರಯಾಣಿಕರಿಂದ ಒಂದು ರೂಪಾಯಿ ಕೂಡ ಅಧಿಕ ಹಣ ಪಡೆಯದೆ ತಮ್ಮ ಹಳೆಯ ದರದಲ್ಲೇ ಸೇವೆ ನೀಡುತ್ತಿದ್ದಾರೆ. ಇದು ಅವರ ದೊಡ್ಡ ಮನಸ್ಸನ್ನು ತೋರಿಸುತ್ತದೆ. ಆದರೆ ಸರ್ಕಾರ ಮತ್ತು ಜಿಲ್ಲಾಡಳಿತ ಈ ಚಾಲಕರ ಹೊಟ್ಟೆಯ ಮೇಲೇಕೆ ಹೊಡೆಯುತ್ತಿದೆ?” ಎಂದು ಅವರು ಪ್ರಶ್ನಿಸಿದ್ದಾರೆ.
*ಕುಟುಂಬಗಳ ಕಣ್ಣೀರು* ದಿನವಿಡೀ ದುಡಿದರೂ ಮನೆಗೆ ಕೇವಲ ₹100-₹200 ತೆಗೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮಕ್ಕಳ ಶಾಲಾ ಶುಲ್ಕ, ರೇಷನ್ ಮತ್ತು ಔಷಧಿಗಳಿಗೂ ಪರದಾಡುವಂತಾಗಿದೆ. ಜಿಲ್ಲಾ ಆಟೋ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷರಾದ ವಿಜಯ ಕಲ್ಮನಿ ಹಾಗೂ ಮಂಜುನಾಥ ಆಗಸಿಮನಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ಕೇವಲ 4 ದಿನಗಳ ಕಾಲ ಬೆಲೆ ಇಳಿಸಿ, ಈಗ ಮತ್ತೆ ₹97 ಮಾಡಿರುವುದು ಕಣ್ಣೊರೆಸುವ ತಂತ್ರವಾಗಿದೆ.
*ಜಿಲ್ಲಾಡಳಿತಕ್ಕೆ ಆಗ್ರಹ*
ತಕ್ಷಣವೇ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಬಂಕ್‌ಗಳ ಮೇಲೆ ದಾಳಿ ನಡೆಸಿ, ಸ್ಟಾಕ್ ರಿಜಿಸ್ಟರ್ ತಪಾಸಣೆ ಮಾಡಬೇಕು.
ಕೃತಕ ಅಭಾವ ಸೃಷ್ಟಿಸಿ ಸುಲಿಗೆ ಮಾಡುತ್ತಿರುವ ಬಂಕ್‌ಗಳ ಪರವಾನಗಿಯನ್ನು ರದ್ದುಪಡಿಸಬೇಕು.
ಆಟೋ ಚಾಲಕರಿಗೆ ರಿಯಾಯಿತಿ ದರದಲ್ಲಿ ಗ್ಯಾಸ್ ಒದಗಿಸಲು ಕ್ರಮ ಕೈಗೊಳ್ಳಬೇಕು.
ಈ ಅನ್ಯಾಯಕ್ಕೆ ತಕ್ಷಣವೇ ಮುಕ್ತಿ ಸಿಗದಿದ್ದರೆ, ಗದಗ ಜಿಲ್ಲೆಯ ಸಾವಿರಾರು ಆಟೋ ಚಾಲಕರು ಹಾಗೂ ಅವರ ಕುಟುಂಬದವರೊಂದಿಗೆ ರಸ್ತೆಗಿಳಿದು ಉಗ್ರ ಹೋರಾಟ ಮಾಡಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತರಾದ ಕೃಷ್ಣಾ ಎಚ್. ಹಡಪದ ಎಚ್ಚರಿಸಿದ್ದಾರೆ.ಕೃಷ್ಣಾ ಎಚ್. ಹಡಪದ
9845650612

Editor

Leave a comment