ಕರುನಾಡು ಘರ್ಜನೆ ಸುದ್ದಿ ಗದಗ ಇದೇ ಏಪ್ರಿಲ್ 10 ರಿಂದ ವಿಜಯಪುರದಲ್ಲಿ ಮೇ ಸಾಹಿತ್ಯ ಮೇಳ ಬಳಗ, ವಿಜಯಪುರ ಹಾಗೂ ದಲಿತ, ಅಲ್ಪಸಂಖ್ಯಾತ ಸಂಘಟನೆಗಳ ಒಕ್ಕೂಟ ಸಹಯೋಗದೊಂದಿಗೆ ಡಾ.ಬಾಬಾ ಸಾಹೇಬ ಅಂಬೇಡ್ಕರ ಅವರ ಜಯಂತಿಯ ಅಂಗವಾಗಿ ಐದು ದಿನಗಳ ಕಾಲ ಪುಸ್ತಕ ಮೇಳವನ್ನು ಆಯೋಜಿಸಲಾಗಿದೆ.
ಇದರ ಅಂಗವಾಗಿ ನಗರದ ಗದಗ ಬೆಟಗೇರಿ ನಗರಸಭೆಯ ಆವರಣದಲ್ಲಿರುವ ಡಾ.ಬಾಬಾ ಸಾಹೇಬ ಅಂಬೇಡ್ಕರ ಅವರ ಪುತ್ಥಳಿ ಮುಂದೆ ಪುಸ್ತಕ ಮೇಳದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.
ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಸಾಹಿತಿ ಡಾ.ರಾಮಚಂದ್ರ ಹಂಸನೂರ ಅವರುಬಿಜಾಪುರ ದಲ್ಲಿ ನಡೆಯುತ್ತಿರುವ ಬುದ್ಧ ಬಸವ ಅಂಬೇಡ್ಕರ್ ಪುಸ್ತಕ ಮೇಳವು ಅಭಿನಂದನೀಯ.ನಮ್ಮ ರಾಜ್ಯ ಹಾಗೂ ದೇಶದಲ್ಲಿ ದೇವರ ಹೆಸರಿನಲ್ಲಿ ಜಾತ್ರೆಯ ಹೆಸರಿನಲ್ಲಿ ಉತ್ಸವದ ಹೆಸರಿನಲ್ಲಿ ಅನೇಕ ಮೌಡ್ಯಾ ಚರಣೆಗಳು ನಡೆಯುತ್ತವೆ.ಸಾವಿರಾರು ವರ್ಷಗಳಿಂದ ಇವು ನಡೆಯುತ್ತಾ ಬಂದಿವೆ ಆದರೂ ಏನೂ ಉದ್ದಾರ ಆಗಿಲ್ಲ ಡಾ.ಬಾಬಾಸಾಹೇಬರು ದೇವರ ಗುಡಿ ಗಂಟೆಗಳ ಸದ್ದಿಗಿಂತ ಶಾಲೆಗಳ ಗಂಟೆ ಸದ್ದು ದೇಶವನ್ನು ಉದ್ದಾರ ಮಾಡಬಲ್ಲದು ಎಂದಿದ್ದರು.
ಈ ದೇಶದಲ್ಲಿ ಸಮಾನತೆ ಬರಬೇಕಾದರೆ ಅಂಬೇಡ್ಕರ ಸಂವಿದಾನವೆ ಬರಬೇಕಾಯಿತು ಯಾವ ದೇವರೂ ಸಮಾನತೆ ತರಲಿಲ್ಲ.
ಪುಸ್ತಕಗಳು ಬದಲಾವಣೆ ತರುತ್ತವೆ ಜನರಿಗೆ ಜ್ಞಾನ ತುಂಬುತ್ತವೆ ಇದರಿಂದ ಜನ ಪ್ರಗತಿಪತದತ್ತ ಸಾಗುತ್ತಾರೆ.
ಅದಕ್ಕೆ ಹೇಳುತ್ತಾರೆ ಪುಸ್ತಕಗಳು ಜ್ಞಾನದ ಮಸ್ತಕಗಳು ಅವು ಜಗತ್ತನ್ನು ಆಳುತ್ತವೆ ಎನ್ನುತ್ತಾರೆ.ಮೈಮೇಲೆ ಬಟ್ಟೆ ಅರಿದರೂ ಚಿಂತೆಯಿಲ್ಲ ಕಯ್ಯಲ್ಲಿ ಒಂದು ಪುಸ್ತಕ ವಿರಲಿ ಎನ್ನುತ್ತಾರೆ ತಿಳಿದವರು.ವಿಜಯಪುರದಲ್ಲಿ ನಡೆಯುತ್ತಿರುವ ಸಮಾನತೆಯ ಹರಿಕಾರರಾದ ಬುದ್ಧ ಬಸವ ಅಂಬೇಡ್ಕರರ ಹೆಸರಿನಲ್ಲಿ ಇದು ನಡೆಯುತ್ತಿರುವುದು ತುಂಬಾ ಔಚಿತ್ಯ ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಆನಂದ ಶಿಂಗಾಡಿ.ಶರೀಫ ಬಿಳೆಯಲಿ.ಮುತ್ತು ಬಿಳೆಯಲಿ.ಮಂಜುನಾಥ ಗೊಂದಿಯವರ.ಅನಿಲ ಕಾಳೆ.ರವಿ ಚಲವಾದಿ.ಪರಶು ಕಾಳೆ.ಶಿವಾನಂದ ತಮ್ಮಣ್ಣವರ.ಸುರೇಶ ಕಡ್ಲಿಮಟ್ಟಿ.ಕುಮಾರ ಕಳಸಾಪುರ.ರವಿ ಕಾಳೆ ಉಪಸ್ಥಿತರಿದ್ದರು.ರಮೇಶ ಕೋಳೂರು ಮಾತನಾಡಿ ವಂದಿಸಿದರು.