Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಗದಗ

ಗದಗ | ಬದುಕು ಕಷ್ಟವಿದ್ದರೂ ಪ್ರಾಮಾಣಿಕತೆ ಬೆಲೆಕಟ್ಟಲಾಗದ್ದು: ಗದಗದ ಬಲರಾಮ ಪರಾಪುರ ಇಡೀ ರಾಜ್ಯಕ್ಕೆ ಮಾದರಿ : ಕೃಷ್ಣಾ ಎಚ್ ಹಡಪದ

ಕರುನಾಡು ಘರ್ಜನೆ ಸುದ್ದಿ ಗದಗ 23: ಇಂದಿನ ಧಾವಂತದ ಬದುಕಿನಲ್ಲಿ ನಂಬಿಕೆ ಎಂಬುದು ಮರೀಚಿಕೆಯಾಗುತ್ತಿದೆ. ಆದರೆ, ಬೆವರಿನ ಹನಿಗಳಲ್ಲಿ ಪ್ರಾಮಾಣಿಕತೆಯನ್ನು ಅರಸುವ ಜೀವಗಳು ಇಂದಿಗೂ ನಮ್ಮ ನಡುವೆ ಇವೆ ಎನ್ನುವುದಕ್ಕೆ ಗದಗ ಜಿಲ್ಲೆಯ ಆಟೋ ಚಾಲಕ ಬಲರಾಮ ಪರಾಪುರ ಅವರೇ ಸಾಕ್ಷಿ.…

ಕರುನಾಡು ಘರ್ಜನೆ ಸುದ್ದಿ ಗದಗ 23: ಇಂದಿನ ಧಾವಂತದ ಬದುಕಿನಲ್ಲಿ ನಂಬಿಕೆ ಎಂಬುದು ಮರೀಚಿಕೆಯಾಗುತ್ತಿದೆ. ಆದರೆ, ಬೆವರಿನ ಹನಿಗಳಲ್ಲಿ ಪ್ರಾಮಾಣಿಕತೆಯನ್ನು ಅರಸುವ ಜೀವಗಳು ಇಂದಿಗೂ ನಮ್ಮ ನಡುವೆ ಇವೆ ಎನ್ನುವುದಕ್ಕೆ ಗದಗ ಜಿಲ್ಲೆಯ ಆಟೋ ಚಾಲಕ ಬಲರಾಮ ಪರಾಪುರ ಅವರೇ ಸಾಕ್ಷಿ.
ಗ್ಯಾಸ್ ಬೆಲೆ ಏರಿಕೆ, ಬಾಡಿಗೆ ಕೊರತೆ ಮತ್ತು ಜೀವನೋಪಾಯಕ್ಕಾಗಿ ಹಗಲಿರುಳು ಹೋರಾಡುತ್ತಿರುವ ಇಂದಿನ ದಿನಗಳಲ್ಲಿ, ಆಟೋದಲ್ಲಿ ಬಿಟ್ಟು ಹೋದ 5 ತೊಲೆ ಚಿನ್ನದ ಸರವಿದ್ದ ಬ್ಯಾಗನ್ನು ದಿ.22-4-2026 ರಂದು ವಾರಸುದಾರರಿಗೆ ಮರಳಿಸುವ ಮೂಲಕ ಬಲರಾಮ ಪರಾಪೂರ ಅವರು ಕೇವಲ ಒಬ್ಬ ಚಾಲಕರಾಗಿ ಉಳಿಯದೆ, ಮಾನವೀಯತೆಯ ರಾಯಭಾರಿಯಾಗಿ ಹೊರಹೊಮ್ಮಿದ್ದಾರೆ.
*ಆಟೋ ಚಾಲಕರೆಂದರೆ ಕೇವಲ ಸಾರಿಗೆಯವರಲ್ಲ;* ಜನರ ಆಪತ್ಬಾಂಧವರು
ಸಾಮಾನ್ಯವಾಗಿ ಸಮಾಜವು ಆಟೋ ಚಾಲಕರನ್ನು ಕೇವಲ ಒಬ್ಬ ಕಾರ್ಮಿಕರಂತೆ ನೋಡುತ್ತದೆ. ಆದರೆ, ಮಳೆ-ಬಿಸಿಲು ಎನ್ನದೆ, ಮಧ್ಯರಾತ್ರಿಯ ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಸೇರಿಸುವುದರಿಂದ ಹಿಡಿದು, ಅಪರಿಚಿತ ಪ್ರಯಾಣಿಕರನ್ನು ಸುರಕ್ಷಿತವಾಗಿ ಗುರಿ ಮುಟ್ಟಿಸುವವರೆಗೆ ಅವರು ಮಾಡುವ ಸೇವೆ ಅನನ್ಯ. ಸದ್ಯ ರಾಜ್ಯಾದ್ಯಂತ ಗ್ಯಾಸ್ ಅಭಾವ ಮತ್ತು ಆರ್ಥಿಕ ಸಂಕಷ್ಟದ ನಡುವೆಯೂ ಆಟೋ ಚಾಲಕರು ತಮ್ಮ ಧರ್ಮವನ್ನು ಬಿಟ್ಟಿಲ್ಲ. ಬಲರಾಮ ಪರಾಪುರ ಅವರ ಈ ಪ್ರಾಮಾಣಿಕತೆ ಇಡೀ ರಾಜ್ಯದ ಆಟೋ ಚಾಲಕರ ಘನತೆಯನ್ನು ಎತ್ತಿ ಹಿಡಿದಿದೆ.
*ಕಷ್ಟದ ಹೊತ್ತಿನಲ್ಲೂ ಮರೆಯದ ಮನುಷ್ಯತ್ವ:*
ಲಾವಣ್ಯ ಮಹೇಶ್ ಸಲ್ಗರ್ ಎಂಬ ಪ್ರಯಾಣಿಕರು ಆಟೋದಲ್ಲಿ ಮರೆತು ಹೋದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನದ ಮಾಂಗಲ್ಯ ಸರವನ್ನು ನೋಡಿದಾಗ ಬಲರಾಮ ಪರಾಪೂರ ಅವರಿಗೆ ನೆನಪಾಗಿದ್ದು ತನ್ನ ಕಷ್ಟವಲ್ಲ, ಬದಲಾಗಿ ಆ ಬ್ಯಾಗ್ ಕಳೆದುಕೊಂಡವರ ಸಂಕಟ. *”ಪರರ ಸ್ವತ್ತು ನಮಗೆ ಬೇಡ”* ಎಂಬ ದೃಢ ನಿಲುವು ತಾಳಿ, ತಕ್ಷಣವೇ ಅದನ್ನು ಮರಳಿಸಿರುವುದು ಅವರ ಶ್ರೀಮಂತ ಮನಸ್ಸಿಗೆ ಹಿಡಿದ ಕನ್ನಡಿ.
*ಸಮಾಜಕ್ಕೆ ಸಂದೇಶ*
ಗದಗ ಜಿಲ್ಲೆಯ ಆಟೋ ಚಾಲಕರ ಮತ್ತು ಮಾಲಕರ ಸಂಘದ ಸದಸ್ಯರಾದ ಬಲರಾಮ ಪರಾಪೂರ ಅವರ ಈ ಕಾರ್ಯ ಕೇವಲ ಒಂದು ಘಟನೆಯಲ್ಲ; ಇದು ಇಡೀ ಸಮಾಜಕ್ಕೆ ಒಂದು ಪಾಠ. ನಮ್ಮ ನಡುವೆ ಇಂತಹ ನೂರಾರು ಪ್ರಾಮಾಣಿಕ ಚಾಲಕರಿದ್ದಾರೆ. ಅವರ ಬಗ್ಗೆ ನಾವು ಗೌರವ ಹೊಂದಿರಬೇಕು. ಇಂತಹ ಕಷ್ಟಜೀವಿಗಳ ಬೆವರಿನ ಬೆಲೆ ಮತ್ತು ಪ್ರಾಮಾಣಿಕತೆಯನ್ನು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಎಚ್ ಕೆ ಪಾಟೀಲ ಸಾಹೇಬರು. ಮತ್ತು ಗದಗ ಜಿಲ್ಲಾಧಿಕಾರಿಗಳು. ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು. ಹಾಗೂ ಘನ ಸರ್ಕಾರ ಮತ್ತು ಸಾರ್ವಜನಿಕರು ಗುರುತಿಸಬೇಕಿದೆ.
*ನಮ್ಮ ಗದಗ ಜಿಲ್ಲೆಯ ಆಟೋ ಚಾಲಕರು ನಮ್ಮ ಹೆಮ್ಮೆ.* ಬಲರಾಮ ಪರಾಪುರ ಅವರ ಈ ನಿಸ್ವಾರ್ಥ ಸೇವೆ ಸಮಾಜಕ್ಕೆ ಪ್ರೇರಣೆಯಾಗಲಿ. ಪ್ರಾಮಾಣಿಕತೆಗೆ ಎಂದಿಗೂ ಸೋಲಿಲ್ಲ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ. ಅವರಿಗೆ ಮತ್ತು ಅವರ ಕುಟುಂಬಕ್ಕೆ ಆ ದೇವರು ಶ್ರೀ ಗದ್ವಾಲ್ ಜಮಲಮ್ಮದೇವಿ ಸಕಲ ಸುಖ-ಶಾಂತಿ ನೀಡಲಿ ಎಂದು ಗದಗಿನ ಸಾಮಾಜಿಕ ಕಾರ್ಯಕರ್ತರಾದ ಕೃಷ್ಣಾ ಎಚ್ ಹಡಪದ ಈ ಮೂಲಕ ಹಾರೈಸಿದ್ದಾರೆ.

ವರದಿ: ಕೃಷ್ಣಾ ಎಚ್ ಹಡಪದ
ಸಾಮಾಜಿಕ ಕಾರ್ಯಕರ್ತರು ಗದಗ
9845650612

Editor

Leave a comment