ಕರುನಾಡು ಘರ್ಜನೆ ಸುದ್ದಿ ಬ್ಯಾಡಗಿ : ಶಿವಶರಣ ಹರಳಯ್ಯನವರು ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ) ವತಯಾ ಕನ್ನಡ ನಾಡಿನ ಮಹಾನ್ ಸಮಾಜ ಸುಧಾರಕರು ಹಾಗೂ ಬಸವಣ್ಯ ನವರ ಅನುಯಾಯಿಗಳಾಗಿ ತಮ್ಮ ಜೀವನವನ್ನೇ ಸಮರ್ಪಿಸಿದ ಮಹಾನ್ ವ್ಯಕ್ತಿ. ಅವರು ಸಮಾನತೆ, ಶ್ರಮದ ಗೌರವ ಮತ್ತು ಜಾತಿ ಭೇದ ವಿರೋಧದ ಸಂದೇಶವನ್ನು ಸಮಾಜಕ್ಕೆ ನೀಡಿದವರು. ಇಂತಹ ಮಹನೀಯರ ಜಯಂತಿಯನ್ನು ರಾಜ್ಯ ಮಟ್ಟದಲ್ಲಿ ಆಚರಿಸುವುದು ನಮ್ಮ ರಾಜ್ಯದ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಉಳಿಸುವ ಕಾರ್ಯವಾಗುತ್ತದೆ.
ಈ ಹಿನ್ನೆಲೆಗಳಲ್ಲಿ,., ಶಿವಶರಣ ಹರಳಯ್ಯನವರ ಜಯಂತಿಯನ್ನು: ರಾಜ್ಯ ಮಟ್ಟದಲಿ ಅಧಿಕೃತವಾಗಿ ಆಚರಿಸಬೇಕು, ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳು, ಶಾಲೆಗಳು ಹಾಗೂ ಕಾಲೇಜುಗಳಲ್ಲಿ ಕಡ್ಡಾಯವಾಗಿ ಆಚರಣೆ ಮಾಡಬೇಕು.ಸರ್ಕಾರದ ವತಿಯಿಂದ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿ ಅವರ ಜೀವನ ಚರಿತ್ರೆ ಮತ್ತು ಆದರ್ಶಗಳನ್ನು ಜನರಿಗೆ ಪರಿಚಯಿಸಬೇಕು, ಇವುಗಳ ಮೂಲಕ ಯುವ ಪೀಳಿಗೆಗೆ ಉತ್ತಮ ಸಂದೇಶವನ್ನು ನೀಡಬಹುದು ಹಾಗೂ ಸಮಾಜದಲ್ಲಿ ಸಮಾನತೆ ಮತ್ತು ಸೌಹಾರ್ದತೆಯನ್ನು ಬಲಪಡಿಸಬಹುದು.
ಆದ್ದರಿಂದ, ಮೇಲ್ಕಂಡ ವಿಷಯವನ್ನು ಪರಿಗಣಿಸಿ ಶಿವಶರಣ ಹರಳಯ್ಯನವರ ಜಯಂತಿಯನ್ನು ರಾಜ್ಯೋತ್ಸವದಂತೆ ಘೋಷಿಸಿ ಸರ್ಕಾರಿ ಮಟ್ಟದಲ್ಲಿ ಆಚರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ವಿನಂತಿಸುತ್ತೇವೆ.ಈ ಸಂದರ್ಭದಲ್ಲಿ ಈಶ್ವರ ಶಾಂತಪ್ಪ ಗದಗಕರ ರಮೇಶ್ ಕೋಟೆರವರು ಹನುಮಂತ ಶಿ ಹಂಜಿಗಿ ಸುಭಾಷ್ ಪರಸಪ್ಪ ಹಂಜಿಗಿಸನ್ಮಾನ್ಯ ಶ್ರೀಯುತ ಶ್ರೀ ಸತೀಶ್ ಜಾರಕಿಹೊಳೆ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು