Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಗದಗ

ಗದಗ ಸವಿತಾ ಸಮಾಜದ ಸ್ವಾಭಿಮಾನದ ಸಂಕೇತವಾಗಿ ತಲೆ ಎತ್ತಲಿದೆ ಶ್ರೀ ನಾಗದೇವರ ಮಂದಿರ: ಕೃಷ್ಣಗೌಡ್ರು ಪಾಟೀಲ್

ಕರುನಾಡು ಘರ್ಜನೆ ಸುದ್ದಿ ಗದಗ 26: “ಸಮಾಜದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಸವಿತಾ ಸಮಾಜ ಸುಧಾರಣಾ ಸಂಘದ 25 ವರ್ಷಗಳ ಕನಸಿನ ನಾಗದೇವರ ಮಂದಿರವು ಕೇವಲ ಕಟ್ಟಡವಾಗದೆ, ಇಡೀ ಸಮಾಜದ ಶಕ್ತಿ ಕೇಂದ್ರವಾಗಿ ಹೊರಹೊಮ್ಮಲಿ,” ಎಂದು ಸಚಿವರ…

ಕರುನಾಡು ಘರ್ಜನೆ ಸುದ್ದಿ ಗದಗ 26: “ಸಮಾಜದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಸವಿತಾ ಸಮಾಜ ಸುಧಾರಣಾ ಸಂಘದ 25 ವರ್ಷಗಳ ಕನಸಿನ ನಾಗದೇವರ ಮಂದಿರವು ಕೇವಲ ಕಟ್ಟಡವಾಗದೆ, ಇಡೀ ಸಮಾಜದ ಶಕ್ತಿ ಕೇಂದ್ರವಾಗಿ ಹೊರಹೊಮ್ಮಲಿ,” ಎಂದು ಸಚಿವರ ಸುಪುತ್ರ ಹಾಗೂ ಯುವ ಕಾಂಗ್ರೆಸ್ ನಾಯಕ ಕೃಷ್ಣಗೌಡ್ರು ಪಾಟೀಲ್ ಆಶಯ ವ್ಯಕ್ತಪಡಿಸಿದರು.
ಗದಗ ನಗರದ ಗಂಗಿಮಡಿ ನಗರದಲ್ಲಿ ಮಂಗಳವಾರ ಸವಿತಾ ಸಮಾಜ ಸುಧಾರಣಾ ಸಂಘದ ವತಿಯಿಂದ ಆಯೋಜಿಸಿದ್ದ ಶ್ರೀ ನಾಗದೇವರ ದೇವಸ್ಥಾನ ನಿರ್ಮಾಣಕ್ಕೆ ಸಚಿವರ ವತಿಯಿಂದ ಬಿಡುಗಡೆಯಾದ 10 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಅಡಿಗಲ್ಲು ಹಾಕಿ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
*ಸಮಾಜದ ಸ್ವಾಭಿಮಾನಕ್ಕೆ ಕೈಜೋಡಿಸಿ:*
“ದೇವಸ್ಥಾನವೆಂಬುದು ಕೇವಲ ಧಾರ್ಮಿಕ ಕೇಂದ್ರವಲ್ಲ, ಅದು ಸವಿತಾ ಸಮಾಜದ ಸ್ವಾಭಿಮಾನದ ಸಂಕೇತ. ಪ್ರತಿಯೊಬ್ಬ ಸಮಾಜದ ಬಾಂಧವನು ‘ನನ್ನ ದೇವಸ್ಥಾನಕ್ಕೆ ನನ್ನಿಂದಲೂ ಅಳಿಲು ಸೇವೆ ಇರಲಿ’ ಎಂಬ ದಾಸೋಹ ಭಾವದಿಂದ ಮುಂದೆ ಬರಬೇಕು. ಯುವಶಕ್ತಿಯು ಈ ಕಾರ್ಯದಲ್ಲಿ ಬೆನ್ನೆಲುಬಾಗಿ ನಿಂತಾಗ ಮಾತ್ರ 25 ವರ್ಷಗಳ ಹಿರಿಯರ ಕನಸು ಭವ್ಯವಾಗಿ ನನಸಾಗಲು ಸಾಧ್ಯ. ಸವಿತಾ ಸಮಾಜದ ದಕ್ಷ ಹಾಗೂ ಪ್ರಾಮಾಣಿಕ ನಾಯಕತ್ವವನ್ನು ಬೆಂಬಲಿಸಿ, ರಾಜಕಾರಣ ರಹಿತವಾಗಿ ಒಗ್ಗಟ್ಟಿನ ಸಂದೇಶ ರವಾನಿಸುವುದು ಇಂದಿನ ತುರ್ತು ಅಗತ್ಯ. ಸಮಾಜದ ಪರವಾಗಿ ಮನವಿ ಮಾಡಿದ ಕೃಷ್ಣಾ ಎಚ್ ಹಡಪದ ಅವರ ಬೇಡಿಕೆಯಂತೆ ಹೆಚ್ಚುವರಿ ಅನುದಾನ ನೀಡಲು ನಾನು ಸದಾ ಸಿದ್ಧನಿದ್ದೇನೆ,” ಎಂದು ಅವರು ಘೋಷಿಸಿದರು.
*ಸಮಾಜದ ನಡೆ-ನುಡಿಯ ಬಗ್ಗೆ ಕೃಷ್ಣಾ ಹಡಪದ ಮನವಿ:*
ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್. ಹಡಪದ ಪ್ರಾಸ್ತಾವಿಕವಾಗಿ ಮಾತನಾಡಿ, “ಸಮಾಜದ ಹಿರಿಯರು ಕಂಡಿದ್ದ ಕಾಲು ಶತಮಾನದ ಕನಸಿಗೆ ಇಂದು ನಮ್ಮ ನೆಚ್ಚಿನ ಯುವ ನಾಯಕರಾದ ಕೃಷ್ಣಗೌಡ್ರು ಪಾಟೀಲರಿಂದ ಚಾಲನೆ ದೊರೆತಿದೆ. ಇದು ಕೇವಲ ದೇವಸ್ಥಾನವಲ್ಲ, ನಮ್ಮ ಸಂಘಟನೆಯ ಶಕ್ತಿ. ಯುವಕರು ದಿನಕ್ಕೆ ಕನಿಷ್ಠ 1. ಒಂದು ಗಂಟೆಗಳ ಕಾಲ ಶ್ರಮದಾನ ಮಾಡುವ ಮೂಲಕ ಈ ದೇವಸ್ಥಾನವನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸಂಕಲ್ಪ ಮಾಡಬೇಕು,” ಎಂದು ಕೈಮುಗಿದು ವಿನಂತಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸವಿತಾ ಸಮಾಜ ಸುಧಾರಣಾ ಸಂಘದ ಅಧ್ಯಕ್ಷರಾದ ಪರಶುರಾಮ್ ಕೋಟೆಕಲ್ಲ ಅವರು ಸಂಘದ ಬಲವರ್ಧನೆಗೆ ಎಲ್ಲರ ಸಹಕಾರ ಕೋರಿದರು.
ಗದಗ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಸಿದ್ದು ಪಾಟೀಲರು ಮಾತನಾಡಿ, ಸಮಾಜದ ಶೈಕ್ಷಣಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಇಂತಹ ಕಾರ್ಯಗಳು ಪೂರಕ ಎಂದರು.
ಕಾಂಗ್ರೆಸ್ ಯುವ ನಾಯಕರುಗಳಾದ ರವಿಕುಮಾರ್ ರೆಡ್ಡಿ ಹಾಗೂ ಅಶೋಕ್ ಮಂದಾಲಿ. ನಗರಸಭೆಯ ಸ್ಥಳೀಯ ಸದಸ್ಯರಾದ ರವಿ ಕಮ್ತರ. ಅವರು ಸಮಾಜದ ಒಗ್ಗಟ್ಟು ಮತ್ತು ಯುವಕರ ಜವಾಬ್ದಾರಿಯ ಬಗ್ಗೆ ಕ್ರಾಂತಿಕಾರಿ ವಿಚಾರಗಳನ್ನು ಹಂಚಿಕೊಂಡರು.
ವೇದಿಕೆಯಲ್ಲಿ ಹಿರಿಯರಾದ ಎಸ್.ಎನ್. ಬಳ್ಳಾರಿ ಗುರುಗಳು ಮತ್ತು ಮಾರ್ತಂಡಪ್ಪ ಹಾದಿಮನಿ ಅವರು ಆಶೀರ್ವಚನ ನೀಡಿದರು.
ಸಾಮಾಜಿಕ ಕಾರ್ಯಕರ್ತರಾದ ಕುಮಾರ ಮಾರನಬಸರಿ. ಅಬ್ದುಲಮುನಾಫ್ ಮುಲ್ಲಾ. ಸಂತ ಸೇನಾ ಮಹಾರಾಜ್ ನಾಭಿಕ ಮರಾಠ ಕ್ಷೌರಿಕ ಸಮಾಜದ ಅಧ್ಯಕ್ಷರಾದ ವಿಕಾಸ್, ಕ್ಷೀರಸಾಗರ್. ಸವಿತಾ ಸಮಾಜದ ಹಿರಿಯರಾದ ಹನುಮಂತಪ್ಪ ರಾಂಪೂರ. ಪರಶುರಾಮ (ಬಜ್ಜು) ರಾಂಪೂರ. ಜಂಬಣ್ಣ ಕಡಮೂರ. ಪಂಪಣ್ಣ ರಾಯಚೂರ. ರಾಜು ಗೋಡರ ವೆಂಕಟೇಶ ರಾಂಪೂರ. ವೇದಿಕೆ ಮೇಲೆ ಹಾಸಿನರಾಗಿದ್ದರು.
ಸಂಘದ ಕಾರ್ಯದರ್ಶಿ ರವಿಕುಮಾರ್ ಹಡಪದ ನಿರೂಪಿಸಿದರು. ಗೌರವ ಅಧ್ಯಕ್ಷರಾದ ಕೃಷ್ಣಾ ಬಾಯಲಗುಡ್ಡ. ಸ್ವಾಗತಿಸಿದರು ಹಿರಿಯರಾದ ಆಂಜನೇಯ ಆದೋನಿ ವಂದನಾರ್ಪಣೆಗೆದರು
ಕಾರ್ಯಕ್ರಮದಲ್ಲಿ ಸವಿತಾ ಸಮಾಜ ಸುಧಾರಣಾ ಸಂಘದ ನೂರಾರು ಯುವಕರು, ಹಿರಿಯರು ಮತ್ತು ಗಂಗಿಮಡಿ ನಗರದ ಗುರು ಹಿರಿಯರು ಪಾಲ್ಗೊಂಡು ದೇವಸ್ಥಾನ ನಿರ್ಮಾಣಕ್ಕೆ ತಮ್ಮ ಪೂರ್ಣ ಬೆಂಬಲ ಘೋಷಿಸಿದರು.

ವರದಿ : ಕೃಷ್ಣಾ ಎಚ್ ಹಡಪದ
9845650612

Editor

Leave a comment