Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಗದಗ

ಗದಗ l ಲಕ್ಕುಂಡಿ ದೇಶದ ಅಗ್ರ ಪುರಾತತ್ವ ಕೇಂದ್ರವಾಗಿಸಲು ಯೋಜನೆಗೆ ಸಿದ್ಧತೆ: ಸಚಿವ ಎಚ್.ಕೆ. ಪಾಟೀಲ.

ಕರುನಾಡು ಘರ್ಜುನೆ ಸುದ್ದಿ ಗದಗ : ಐತಿಹಾಸಿಕ ಲಕ್ಕುಂಡಿಯನ್ನು ರಾಷ್ಟ್ರ ಮಟ್ಟದಲ್ಲಿ ಅಗ್ರ ಪುರಾತತ್ವ ಕೇಂದ್ರವನ್ನಾಗಿ ರೂಪಿಸಲು ರಾಜ್ಯ ಸರ್ಕಾರ ಸಮಗ್ರ ಯೋಜನೆ ರೂಪಿಸುತ್ತಿದೆ. ಮುಂದಿನ ಒಂದು ವರ್ಷದಲ್ಲಿ 100ಕ್ಕೂ ಹೆಚ್ಚು ದೇವಾಲಯಗಳು ಮತ್ತು ಬಾವಿಗಳನ್ನು ಅನಾವರಣಗೊಳಿಸುವ ಗುರಿ ಹೊಂದಲಾಗಿದೆ ಎಂದು…

ಕರುನಾಡು ಘರ್ಜುನೆ ಸುದ್ದಿ ಗದಗ : ಐತಿಹಾಸಿಕ ಲಕ್ಕುಂಡಿಯನ್ನು ರಾಷ್ಟ್ರ ಮಟ್ಟದಲ್ಲಿ ಅಗ್ರ ಪುರಾತತ್ವ ಕೇಂದ್ರವನ್ನಾಗಿ ರೂಪಿಸಲು ರಾಜ್ಯ ಸರ್ಕಾರ ಸಮಗ್ರ ಯೋಜನೆ ರೂಪಿಸುತ್ತಿದೆ. ಮುಂದಿನ ಒಂದು ವರ್ಷದಲ್ಲಿ 100ಕ್ಕೂ ಹೆಚ್ಚು ದೇವಾಲಯಗಳು ಮತ್ತು ಬಾವಿಗಳನ್ನು ಅನಾವರಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಜಿಲ್ಲೆಯ ಲಕ್ಕುಂಡಿಯಲ್ಲಿ ಶನಿವಾರ ಏರ್ಪಡಿಸಿದ್ದ 6 ಸ್ಮಾರಕಗಳ ಸಂರಕ್ಷಣೆ, ಅಭಿವೃದ್ಧಿ ಕಾಮಗಾರಿ ಶಿಲಾನ್ಯಾಸ, ದಶ ಬಾವಿ, ದಶ ದೇವಾಲಯ ಅನಾವರಣ, ಪ್ರಾಚ್ಯವಶೇಷಗಳ‌ ಅನ್ವೇಷಣಾ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈಗಾಗಲೇ ಪಂಚ ದೇವಾಲಯ ಮತ್ತು ಪಂಚಬಾವಿಗಳ ಅನಾವರಣ ಯಶಸ್ವಿಯಾಗಿ ನಡೆದಿದೆ, ಇದೀಗ 10 ಭಾವಿ, ದೇವಾಲಯಗಳನ್ನು ಸಾರ್ವಜನಿಕರಿಗೆ ಪರಿಚಯಿಸಲಾಗಿದೆ. ಈ ಮೂಲಕ ಪುರಾತತ್ವ ಸ್ಮಾರಕಗಳ ಸಂಖ್ಯೆ 70ರ ಗಡಿ ದಾಟಿದೆ ಎಂದು ಹೇಳಿದರು.

ಲಕ್ಕುಂಡಿಯ ಅನೇಕ ದೇವಾಲಯಗಳು ಮತ್ತು ಬಾವಿಗಳು ಕಾಲಕ್ರಮೇಣ ನಿರ್ಲಕ್ಷ್ಯದಿಂದ ತಮ್ಮ ಗುರುತನ್ನು ಕಳೆದುಕೊಂಡಿದ್ದವು. ಅವುಗಳನ್ನು ಪತ್ತೆಹಚ್ಚಿ ಪುನರುಜ್ಜೀವನಗೊಳಿಸುವ ಕಾರ್ಯವನ್ನು ಸರ್ಕಾರ ಮತ್ತು ಸ್ಥಳೀಯರ ಸಹಕಾರದಿಂದ ಯಶಸ್ವಿಯಾಗಿ ಕೈಗೊಳ್ಳಲಾಗಿದೆ. 2026ರೊಳಗೆ ಕನಿಷ್ಠ 50 ಬಾವಿ ಮತ್ತು 50 ದೇವಾಲಯಗಳನ್ನು ಅನಾವರಣಗೊಳಿಸಿ 100ರ ಗಡಿಯನ್ನು ದಾಟುವ ಗುರಿ ಹೊಂದಲಾಗಿದೆ. ಇದಕ್ಕೆ ಲಕ್ಕುಂಡಿ ಜನರ ಸಹಕಾರ ಅತ್ಯಗತ್ಯ ಎಂದು ಮನವಿ ಮಾಡಿದರು.

10.16 ಕೋಟಿ ಬಿಡುಗಡೆ:

ಸ್ಮಾರಕಗಳ ಅಭಿವೃದ್ಧಿಗೆ ಪ್ರಸ್ತುತ 10.16 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಹಾಲಗುಂಡಿಯಲ್ಲಿ ಬಸವೇಶ್ವರ ದೇವಾಲಯಕ್ಕೆ 1.58 ಕೋಟಿ, ಕನ್ನೇರ ಬಾವಿಗೆ 1.70 ಕೋಟಿ, ಮಲ್ಲಿಕಾರ್ಜುನ ದೇವಾಲಯಕ್ಕೆ 1.67 ಕೋಟಿ, ವಿರೂಪಾಕ್ಷೇಶ್ವರ ದೇವಾಲಯಕ್ಕೆ 1.81 ಕೋಟಿ, ಚಂದ್ರಮೌಳೇಶ್ವರ ದೇವಾಲಯಕ್ಕೆ 1.80 ಕೋಟಿ, ಕಲ್ಮಠ ದ್ವಾರಬಾಗಿಲು ಮತ್ತು ಬಾವಿಗೆ 1.50 ಕೋಟಿ ಮಂಜೂರಾಗಿದೆ. ಲಕ್ಕುಂಡಿಯಲ್ಲಿ ದೇಶದಲ್ಲೇ ಅತ್ಯುತ್ತಮ ಬಯಲು ವಸ್ತು ಸಂಗ್ರಹಾಲಯ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ ಈಗಾಗಲೇ 1200ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳಿಗೆ ಸಂಖ್ಯೆ ನೀಡಲಾಗಿದೆ. ಶೀಘ್ರದಲ್ಲೇ ಈ ಸಂಖ್ಯೆ 2000 ದಾಟುವ ನಿರೀಕ್ಷೆಯಿದೆ ಎಂದು ಹೇಳಿದರು.

ಗ್ರಾಮಸ್ಥರ ಪ್ರಾಮಾಣಿಕತೆ ಶ್ಲಾಘನೆ

ಬಂಗಾರದ ನಾಣ್ಯಗಳಂತಹ ಅಮೂಲ್ಯ ವಸ್ತುಗಳನ್ನು ಸಹ ಸರ್ಕಾರಕ್ಕೆ ಒಪ್ಪಿಸುತ್ತಿರುವ ಲಕ್ಕುಂಡಿ ಜನರ ಪ್ರಾಮಾಣಿಕತೆ ಅಪರೂಪ. ಇತ್ತೀಚೆಗೆ ಲಕ್ಕುಂಡಿಯಲ್ಲಿ ಪತ್ತೆಯಾದ ಬಂಗಾರದ ಮೌಲ್ಯವನ್ನು ತಜ್ಞರು 8 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಲಕ್ಕುಂಡಿ–ಗದಗ–ಕಪ್ಪತಗುಡ್ಡ ಪ್ರವಾಸಿ ವಲಯಗಳಾಗಿ ರೂಪುಗೊಂಡಿದೆ. ಮುಖ್ಯಮಂತ್ರಿಗಳ ಬೆಂಬಲದೊಂದಿಗೆ ಲಕ್ಕುಂಡಿಯ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲಾ ಪ್ರಸ್ತಾವನೆಗಳನ್ನು ಮಂಜೂರು ಮಾಡಲಾಗುವುದು. ಲಕ್ಕುಂಡಿಯನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಬಹುದಾದ ಪುರಾತತ್ವ ಕೇಂದ್ರವನ್ನಾಗಿ ರೂಪಿಸಲು ಸರ್ಕಾರ ಬದ್ಧವಾಗಿದೆ ಎಂದು ಸಚಿವ ಎಚ್ ಕೆ ಪಾಟೀಲರು ಹೇಳಿದರು.

Editor

Leave a comment