ಕರುನಾಡು ಘರ್ಜುನೆ ಸುದ್ದಿ ಗದಗ ಜಿಲ್ಲಾಮಟ್ಟದ ಯುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಜಿಲ್ಲಾಧ್ಯಕ್ಷ ಕೃಷ್ಣಗೌಡ ಪಾಟೀಲ ತಾಲ್ಲೂಕು ಯುವ ಮುಖಡರಿದ ಕಾರ್ಯಕಾರಿಣಿ ಸಭೆಯನ್ನು ಆಚರಿಸಲಾಯಿತು.
ದಿನಾಂಕ 2/5/2026 ರಂದು ರೋಣ ಪಟ್ಟಣದ ಆರ್ ಎಸ್ ಪಾಟೀಲ್ ಜಿನ್ನಿಂಗ್ ಫ್ಯಾಕ್ಟರಿಯಲ್ಲಿರುವ ಪಕ್ಷದ ಕಾರ್ಯಾಲಯದಲ್ಲಿ ಸಭೆ ಕರೆಯಲಾಗಿದ್ದು ಮುಂಬರುವ ಎಂ ಎಲ್ ಸಿ ಹಾಗೂ ಸ್ಥಳೀಯ ಎಲೆಕ್ಷನ್ ನಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಯುವಕರು ನಮ್ಮ ಪಕ್ಷದ ಬೆನ್ನೆಲುಬು ಆಗಿ ಇರುತ್ತಾರೆ.
ಹಾಗೂ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ತಯಾರಿ ಮಾಡಿಕೊಳ್ಳಬೇಕು ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೃಷ್ಣೇಗೌಡ ಪಾಟೀಲ್ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಯಾವುದೇ ಅಪಸ್ಥರ ಇಲ್ಲದಂತೆ ಪಕ್ಷವನ್ನು ಸದೃಢವಾಗಿ ಬೆಳೆಸೋಣ. ಇಡೀ ರಾಜ್ಯದಲ್ಲಿಯೇ ಗದಗ ಯೂಥ್ ಕಾಂಗ್ರೆಸ್ ಕಮಿಟಿ ಹೆಚ್ಚು ಉತ್ಸಾಹದಿಂದ ಇರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಗೆ ನಮ್ಮ ಪಕ್ಷದ ಅಭ್ಯರ್ಥಿಯನ್ನು ಈಗಾಗಲೇ ಹೈಕಮಾಂಡ್ ಘೋಷಿಸಿದೆ.
ಹೀಗಾಗಿ ಮೋಹನ ಲಿಂಬಿಕಾಯಿ ಅವರನ್ನು ಗೆಲ್ಲಿಸುವ ಹೊಣೆಗಾರಿಕೆ ನಮ್ಮ. ನಿಮ್ಮೆಲ್ಲರ ಮೇಲಿದೆ ಎಂದರು.
ಹಾಗೂ ಯೂಥ್ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿವೇಕ ಯಾವಗಲ್ಲ ಮಾತನಾಡಿ, ಎಂಎಲ್‌ಸಿ ಚುನಾವಣೆ ಶೀಘ್ರ ದಿನಾಂಕ ಘೋಷಣೆಯಾಗಲಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೋಹನ ಅಂಬಿಕಾಯಿ ಅವರಿಗೆ ದೊಡ್ಡಮಟ್ಟದ ಬೆಂಬಲ ಸೂಚಿಸಬೇಕಿದೆ. ಯುವ ಮಿತ್ಹೊರರು ಸ ಪದವೀಧರರನ್ನು ನೋಂದಣಿ ಮಾಡಿಕೊಳ್ಳಲು ಈಗಲೂ ಅವಕಾಶವಿದ್ದು, ಎಲ್ಲರೂ ಪ್ರಯತ್ನಪಡಬೇಕು. ಯುವ ಕಾಂಗ್ರೆಸ್ ನೇತೃತ್ವದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗುವುದು. ಅದರೊಟ್ಟಿಗೆ ಕೆರಿಯರ್ ಕೌನ್ಸೆಲಿಂಗ್ ಆಯೋಜಿಸಲು ಚಿಂತನೆ ನಡೆಸಲಾಗುತ್ತಿದೆ ಎಂದರು.
ಯೂಥ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಕ್ಷರಮ್ ಪಾಟೀಲ್ ಮಾತನಾಡಿ, ಯೂಥ್ ಕಾಂಗ್ರೆಸ್ ಕಾರ್ಯಕಾರಣಿಯಲ್ಲಿ ಸಮಾಜೋಪಯೋಗಿ ಕಾರ್ಯ ಮಾಡಬೇಕು ಎಂಬ ಹಂಬಲವಿತ್ತು. ಅದರಂತೆ ಎಸ್‌ಎಸ್ಎಲ್‌ಸಿ ಹಾಗೂ ಪಿಯುಸಿಯಲ್ಲಿ ಟಾಪರ್ ಆದ ಮಕ್ಕಳಿಗೆ ಅಭಿನಂದನೆ ಸಲ್ಲಿಸಿದ್ದೇವೆ. ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ನೋಡಿ ಮುಂಬರುವ ಮಕ್ಕಳೂ ಅದೆ ರೀತಿ
ಇನ್ನು ಹೆಚ್ಚಿನ ಪ್ರಮಾಣದಲ್ಲಿ ನಮ್ಮ ಜಿಲ್ಲೆಯಲ್ಲಿ ಸಾಧನೆ ಮಾಡಲಿ ಎಂದು ಹೇಳಿದರು
ಗದಗ ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳು ಕನಿಷ್ಠ 110 ರಿಂದ105 ಜನರಿದ್ದಾರೆ. ಆದರೆ, ಯಾವ ಸಭೆಗೂ ಪೂರ್ಣ ಹಾಜರಾತಿ ಕಂಡಿಲ್ಲ. ಹೀಗಾಗಿ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರು. ರಾಷ್ಟ್ರಾಧ್ಯಕ್ಷರ ಗಮನಕ್ಕೆ ತಂದು ಗಮನಕ್ಕೆ ತರದೇ ಗೈರಾಗಿರುವವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಗದಗ ಜಿಲ್ಲಾ ಯೂಥ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಎಚ್ಚರಿಕೆ ನೀಡಿದರು.
ಸಾಧನೆ ಮಾಡಲಿ ಎಂದು ಆಶಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಉದಯಗೌಡ ವೀರನಗೌಡ್ರ, ರಾಜ್ಯ ಕಾರ್ಯದರ್ಶಿ ಕೀರ್ತಿರಾಜ್, ರವಿಕಿರಣ, ಮಹಿಳಾ ಉಪಾಧ್ಯಕ್ಷೆ ವಾಣಿ ಹಿರೇಮಠ, ರೋಣ ಅಸೆಂಬ್ಲಿ ಯೂಥ ಕಾಂಗ್ರೆಸ್ ಅಧ್ಯಕ್ಷ ಮುತ್ತುರಾಜ ನವಲಗುಂದ, ವೀರೇಶ ಚುಳಕಿ, ಶರಣಪ್ಪ ಗವಾಯಿ, ಮಹೇಶ ಕಳಸಣ್ಣವರ, ಆನಂದ ರಾಠೋಡ, ತಿರುಮಲೇಶ ಬಂಡಿವಡ್ಡರ, ನದಾಫ್, ಗೋಪಿ ರಾಯನಗೌಡ, ಅಸ್ಲಾಂ ಕೊಪ್ಪಳ, ಸೋಮು ನಾಗರಾಜ, ಯಲ್ಲಪ್ಪ ಕಿರೇಸೂರ, ಬಸವರಾಜ ಹೊಸಳ್ಳಿ, ಬಸಿರ ಕಟ್ಟಿಮನಿ, ಭೀಮವ್ವ ಗುಳಗುಳಿ ಹಾಗೂ ಕಾಂಗ್ರೆಸ್ ಪಕ್ಷದ ಸದಸ್ಯರು ಎಲ್ಲರೂ ಹಾಜರಿದ್ದರು.