ಕರುನಾಡು ಘರ್ಜನೆ ಸುದ್ದಿ ಗದಗ: ಮುಂಡರಗಿ ತಾಲೂಕಿನ ಹೈದರ್ ನಗರ ತಾಂಡಾದ ಮೂವರು ಗೆಳೆಯರು ಊರಿನ ಹೊರವಲಯದಲ್ಲಿ ರಾತ್ರಿ ಪಾರ್ಟಿ ಮಾಡಿ ಮಲಗಿದ್ದಾರೆ. ನಡುರಾತ್ರಿ ಎದ್ದು ನೋಡಿದಾಗ ಸುಭಾಷ್ ಕೊಲೆಯಾಗಿದ್ದಾನೆ. ಗಾಬರಿಗೊಂಡ ಯುವಕರು ತಾಂಡಾಕ್ಕೆ ಹೋಗಿ ವಿಷಯ ತಿಳಿಸಿದ್ದಾರೆ.ಗದಗ: ಮುಂಡರಗಿ ಪಟ್ಟಣದಲ್ಲಿ ಯುವಕನೊಬ್ಬನ ಭೀಕರ ಹತ್ಯೆ (Murder Case) ಆಗಿದೆ. ರಾತ್ರಿ ಮೂವರು ಗೆಳೆಯರು ಭರ್ಜರಿ ಎಣ್ಣೆ ಪಾರ್ಟಿ ಮಾಡಿ ನಿದ್ರೆ ಹೋಗಿದ್ದು, ನಡು ರಾತ್ರಿಯಲ್ಲಿ ಓರ್ವನ ಹತ್ಯೆಯಾಗಿದೆ. ಪಾರ್ಟಿ ಮಾಡಿದ ಗೆಳೆಯರು ಕಂಗಾಲಾಗಿ ಊರಿಗೆ ಬಂದು ವಿಷಯ ತಿಳಿಸಿದ್ದಾರೆ.ಸುಭಾಷ್ ನಾಯಕ್ (23) ಕೊಲೆಯಾದ ಯುವಕ. ಗದಗ (Gadag news) ಜಿಲ್ಲೆಯ ಮುಂಡರಗಿ ಪಟ್ಟಣದ ಹೊಸ ಹುಡ್ಕೋ ಕಾಲೋನಿಯಲ್ಲಿ ಘಟನೆ ನಡೆದಿದೆ. ಕೊಲೆಯಾದ ಯುವಕ ಹೈದರ್ ನಗರ ತಾಂಡಾದ ನಿವಾಸಿ. ಹೈದರ್ ನಗರ ತಾಂಡಾದ ಮೂವರು ಗೆಳೆಯರು ಊರಿನ ಹೊರವಲಯದಲ್ಲಿ ರಾತ್ರಿ ಪಾರ್ಟಿ ಮಾಡಿ ಮಲಗಿದ್ದಾರೆ. ನಡುರಾತ್ರಿ ಎದ್ದು ನೋಡಿದಾಗ ಸುಭಾಷ್ ಕೊಲೆಯಾಗಿದ್ದಾನೆ. ಗಾಬರಿಗೊಂಡ ಯುವಕರು ತಾಂಡಾಕ್ಕೆ ಹೋಗಿ ವಿಷಯ ತಿಳಿಸಿದ್ದಾರೆ.
ಬಿಯರ್ ಬಾಟಲಿಯಿಂದ ತಲೆಗೆ ಹೊಡೆದು ಹತ್ಯೆ ಮಾಡಿರುವ ಶಂಕೆ ಮೂಡಿದೆ. ಜೊತೆಗಿದ್ದ ಗೆಳೆಯರು ನೀಡುತ್ತಿರುವ ಮಾಹಿತಿ ಗೊಂದಲಕಾರಿಯಾಗಿದ್ದು, ಅನುಮಾನ ಮೂಡಿದೆ. ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ, ಫಾರೆನ್ಸಕ್ ತಂಡದಿಂದ ಪರಿಶೀಲನೆ ನಡೆದಿದೆ.