ಕರುನಾಡು ಘರ್ಜುನೆ ಸುದ್ದಿ ಗದಗ 09
: ಜಿಲ್ಲಾ ಜೆಡಿಎಸ್ ಪಕ್ಷದಿಂದ ಮುಳಗುಂದ ಪಟ್ಟಣದಲ್ಲಿ ಮಾಜಿ ಪ್ರದಾನಿ ಹೆಚ್.ಡಿ.ದೇವೆಗೌಡರ ಹುಟ್ಟುಹಬ್ಬ ಆಚರಣೆ ಕುರಿತು ಪೂರ್ವ ಭಾವಿ ಸಭೆ ನಗರದ ಪ್ರವಾಸಿ ಮಂದಿರದಲ್ಲಿ ಜೆ.ಡಿ.ಎಸ್. ಪಕ್ಷ ಹಾಗೂ ಎಚ್. ಡಿ. ಕುಮಾರಸ್ವಾಮಿ ಅಭಿಮಾನಿ ಬಳಗದ ಪೂರ್ವಭಾವಿ ಸಭೆ ಜರುಗಿತು.
ಮಾಜಿ ಪ್ರಧಾನಿ ಮಣ್ಣಿನ ಮಗ, ಹಾಲಿ ರಾಜ್ಯಸಭಾ ಸದಸ್ಯ ಹಾಗೂ ಜೆ.ಡಿ.ಎಸ್. ವರಿಷ್ಠರಾದ ಎಚ್. ಡಿ. ದೇವೆಗೌಡರ ೯೪ನೇ ಹುಟ್ಟಹುಬ್ಬವನ್ನು ಅದ್ದೂರಿಯಾಗಿ ಆಚರಿಸಬೇಕೆಂದು ತೀರ್ಮಾನಿಸಲಾಯಿತು.
ಮಾಜಿ ನಗರಸಭಾ ಸದಸ್ಯ ಜೆ.ಡಿ.ಎಸ್. ಹಿರಿಯ ಮುಖಂಡ ಹಾಗೂ ಶ್ರೀ ಹೆಚ್. ಡಿ. ಕುಮಾರಸ್ವಾಮಿ ಅಭಿಮಾನಿ ಬಳಗದ ಕೋರ ಕಮಿಟಿ ಸದಸ್ಯರಾದ ಎಂ. ಎಸ್. ಪರ್ವತಗೌಡರ ಮಾತನಾಡಿ ಶ್ರೇಷ್ಠ, ನೀರಾವರಿ ತಜ್ಞ ಪ್ರಧಾನಿ ಪಟ್ಟಕ್ಕೆ ಏರಿದ ಏಕೈಕ ಕನ್ನಡಿಗ, ೬೦ ವರ್ಷಗಳ ರಾಜಕಾರಣದಲ್ಲಿ ಕೇವಲ ೪ ರಿಂದ ೫ ವರ್ಷಗಳ ಕಾಲ ಅಧಿಕಾರದಲ್ಲಿದ್ದ ಜನಮಾನಸದಲ್ಲಿ ಅಚ್ಚಳಿಯದೇ ಉಳಿಯುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಜೆ.ಡಿ.ಎಸ್.ನ ಎಸ್. ಸಿ. ಘಟಕದ ಜಿಲ್ಲಾ ಅಧ್ಯಕ್ಷ ಹಾಗೂ ಶ್ರೀ ಹೆಚ್. ಡಿ. ಕುಮಾರಸ್ವಾಮಿ ಅಭಿಮಾನಿ ಬಳಗದ ಕೋರ ಸಮಿತಿ ಸದಸ್ಯರಾದ ಶ್ರೀ ರಮೇಶ ಎಫ್. ಹುಣಸೀಮರದ ಅವರು ಮಾತನಾಡಿ ಮೇ ೧೮, ೨೦೨೬ ರಂದು ಮುಳಗುಂದ ಪಟ್ಟಣದಲ್ಲಿ ರೈತರಿಗೆ ಹಾಗೂ ಮಹಿಳೆಯರಿಗೆ ಸನ್ಮಾನ ಮಾಡುವುದಾಗಿ ಹೇಳಿದರು.
ಜೆ.ಡಿ.ಎಸ್. ಮುಖಂಡರು ಹಾಗೂ ಹೆಚ್. ಡಿ. ಕುಮಾರಸ್ವಾಮಿ ಅಭಿಮಾನಿ ಬಳಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಖುರ್ಷಿದ ಅಹ್ಮದ ಢಾಲಾಯತ ಅವರು ಮಾತನಾಡಿ ದೇವೆಗೌಡರು ರಾಜ್ಯಸಭೆಯಲ್ಲಿ ಕನ್ನಡ ನಾಡು, ನುಡಿ, ನೆಲ, ಜಲದ ಬಗ್ಗೆ ತುಂಬಾ ಸವಿಸ್ತಾರವಾಗಿ ಮಾತನಾಡಿ ಎಲ್ಲರ ಗಮನಸೆಳೆದು ಕರ್ನಾಟಕದಲ್ಲಿ ಜನ ಅನುಭವಿಸುತ್ತಿರುವ ಸಮಸ್ಯೆಗಳನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟರು. ರಾಜ್ಯದಲ್ಲಿ ಬಾಕಿ ಉಳಿದ ಕೆಲಸಗಳನ್ನು ಶೀಘ್ರವಾಗಿ ಮುಗಿಸಬೇಕು ಎಂದು ಮನವಿ ಮಾಡಿದ್ದಾರೆ. ಇದು ಅವರಿಗೆ ರಾಜ್ಯದ ಜನರ ಬಗ್ಗೆ ಇರುವ ಪ್ರಾಮಾಣಿಕ ಕಳಕಳಿ ಎಂದು ಹೇಳಿದರು.
ಹಿರಿಯ ಮುಖಂಡರಾದ ಬಾದಲ್ ನವಲೇಕರ ಅವರು ಮಾತನಾಡಿ ಶ್ರೀ ಹೆಚ್. ಡಿ. ದೇವೆಗೌಡ್ರ ಅಭಿಮಾನಿಗಳು ಎಲ್ಲಾ ಪಕ್ಷದಲ್ಲಿ ಇದ್ದಾರೆ. ಅವರು ಒಬ್ಬ ಅಜಾತ ಶತ್ರು ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿ ಮುಂಬರುವ ಯುವಕರು ಅವರ ತತ್ವ ಆದರ್ಶಗಳನ್ನು ಅನುಸರಿಸಬೇಕು ಎಂದು ಹೇಳಿದರು.
ಜೆ.ಡಿ.ಎಸ್. ಯುವ ಮುಖಂಡ ಹಾಗೂ ಹೆಚ್. ಡಿ. ಕುಮಾರಸ್ವಾಮಿ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷರಾದ ಶ್ರೀ ಮಹ್ಮದನಯೀಮ್ ಢಾಲಾಯತ ಅವರು ಮಾತನಾಡಿ ಮಾಜಿ ಪ್ರಧಾನಿಗಳ ಜೀವನ ನಮ್ಮಂತಹ ಯುವ ರಾಜಕಾರಣಿಗಳಿಗೆ ಸ್ಫೂರ್ತಿ. ಜನರ ಸೇವೆಯನ್ನು ಹೇಗೆ ಮಾಡಬೇಕು ಎಂಬುದನ್ನು ತಿಳಿಯಲು ದೇವೆಗೌಡರ ಚರಿತ್ರೆಯನ್ನು ತಿಳಿದುಕೊಂಡಾಗ ಮಾತ್ರ ಸಾಧ್ಯ. ಅವರಿಗೆ ಭಗವಂತಹ ದೀರ್ಘಾಯುಷ್ಯವನ್ನು ನೀಡಿ ಸಾರ್ವಜನಿಕರಿಗೆ ಇನ್ನೂ ಹೆಚ್ಚಿನ ಸೇವೆ ಸಿಗಲಿ ಅವರು ಕನಸಿನಂತೆ ಕರ್ನಾಟಕ ರಾಜ್ಯದಲ್ಲಿ ಜೆ.ಡಿ.ಎಸ್. ಪಕ್ಷ ಸಂಪೂರ್ಣ ಬಹುಮತ ಪಡೆದು ೫ ವರ್ಷಗಳ ಕಾಲ ಶ್ರೀ ಎಚ್. ಡಿ. ಕುಮಾರಸ್ವಾಮಿ ಅವರು ಒಳ್ಳೆಯ ಆಡಳಿತ ನೀಡುವಂತಾಗಲಿ ಅದಕ್ಕೆ ನಾವೆಲ್ಲರೂ ಸೇರಿ ದುಡಿಯೋಣ ಜೆ.ಡಿ.ಎಸ್. ಪಕ್ಷ ಅಧಿಕಾರಕ್ಕೆ ಬರಲು ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದು ಹೇಳಿದರು.
ಮುಳಗುಂದ ಪಟ್ಟಣದ ಮಹಾಂತೇಶ ಕಣವಿ ಅವರು ಮಾತನಾಡಿ ರೈತರಿಗೆ, ಮಹಿಳೆಯರಿಗೆ ಅನುಕೂಲಕರವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷರಾದ ಶ್ರೀ ಪ್ರಫುಲಕುಮಾರ ಪುಣೇಕರ, ಸಂದೀಪ ನವಲೇಕರ, ಹೂವನಗೌಡ ಗೌಡರ, ಗಿರೀಶ ಕುಲಕರ್ಣಿ, ನಾಗಾರ್ಜುನ, ಮುಖೇಶ ನವಲೇಕರ, ಲಖನ್ ನವಲೇಕರ, ಪೃಥ್ವಿರಾಜ ಮರದ, ನಿಂಗನಗೌಡ, ಪ್ರವೀಣ ತÀಲವಾಯಿ, ವೀರನಗೌಡ ಪಾಟೀಲ, ಅಭಿಷೇಕ ಈಡಿಗ ಉಪಸ್ಥಿತರಿದ್ದರು.
ಈ ಪೂರ್ವಭಾವಿ ಸಭೆಯ ನಿರೂಪಣೆ ಮತ್ತು ವಂದನಾರ್ಪಣೆಯನ್ನು ಗದಗ ತಾಲೂಕ ಪ್ರಧಾನ ಕಾರ್ಯದರ್ಶಿ ಹಾಗೂ ಎಚ್. ಡಿ. ಕುಮಾರಸ್ವಾಮಿ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಶ್ರೀ ಸಂತೋಷ ಟಿ. ಪಾಟೀಲ ನೆರವೇರಿಸಿದರು.
ದಿ. ೦೯-೦೫-೨೦೨೬ ಸಂತೋಷ ಟಿ. ಪಾಟೀಲ
ಮೊ : ೯೮೮೦೩೨೫೦೫೪