ಕರುನಾಡು ಘರ್ಜನೆ ಸುದ್ದಿ ಗದಗ 09: ಗದಗ-ಬೆಟಗೇರಿ ಅವಳಿ ನಗರದ ಜನಪ್ರಿಯ ಯುವ ನಾಯಕ, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಸಂಘಟಕ. ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕದ ಗದಗ ಜಿಲ್ಲಾಧ್ಯಕ್ಷರು ಹಾಗೂ ಬಡವರ ಬಂಧು ಎಂದೇ ಖ್ಯಾತರಾದ ಅನಿಲಕುಮಾರ ಪ. ಸಿದ್ದಮ್ಮನಹಳ್ಳಿ ಅವರ 41ನೇ ವರ್ಷದ ಹುಟ್ಟುಹಬ್ಬವನ್ನು ದಿ. 12.5.2026 ರಂದು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್. ಹಡಪದ ಅವರು, “ಅನಿಲಕುಮಾರ ಅವರು ಕೇವಲ ರಾಜಕೀಯ ನಾಯಕರಲ್ಲ, ಅವರು ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವಿಗೂ ಸ್ಪಂದಿಸುವ ಕರುಣಾಮಯಿ. ನಮ್ಮ ಸವಿತಾ ಸಮಾಜದ ಶ್ರೀ ಗದ್ವಾಲ್ ಜಮಲಮ್ಮ ದೇವಿ ದೇವಸ್ಥಾನದ ವಸತಿಗೃಹ ನಿರ್ಮಾಣಕ್ಕೆ ಅವರು ನೀಡಿದ 15,001 ರೂ. ದೇಣಿಗೆ ಹಾಗೂ ದೋಣಿ ಗ್ರಾಮ ಸೇರಿದಂತೆ ಜಿಲ್ಲೆಯ ಹಲವು ಧಾರ್ಮಿಕ ಕೇಂದ್ರಗಳಿಗೆ ಅವರು ನೀಡುತ್ತಿರುವ ಸಹಕಾರ ಸ್ತುತ್ಯರ್ಹ. ಇಂತಹ ಅದ್ಭುತ ಮನಸ್ಥಿತಿಯ ನಾಯಕನಿಗೆ ಗದಗ-ಬೆಟಗೇರಿ ನಗರಸಭೆಯ ಭವಿಷ್ಯದ ನಾಯಕನಾಗಿ ಜನಸೇವೆ ಮಾಡಲು ಉಜ್ವಲ ಅವಕಾಶ ಸಿಗಲಿ,” ಎಂದು ಶುಭ ಹಾರೈಸಿದ್ದಾರೆ.
ಆಡಂಬರಕ್ಕೆ ಆಸ್ಪದ ನೀಡದೆ, ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ದಿನಾಂಕ 12-05-2026ರಂದು ಬೆಳಿಗ್ಗೆ 9:00 ಗಂಟೆಗೆ ಗದಗಿನ ಎಸ್.ಎಂ. ಕೃಷ್ಣ ನಗರದಲ್ಲಿ ‘ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ’ವನ್ನು ಹಮ್ಮಿಕೊಳ್ಳಲಾಗಿದೆ.
ಈ ಶಿಬಿರದಲ್ಲಿ ನುರಿತ ವೈದ್ಯರಿಂದ ಉಚಿತ ತಪಾಸಣೆ ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರಲಾಗಿದೆ.
ಬಡವರ ಬದುಕಿಗೆ ಆಸರೆಯಾಗಿ, ರೈತರ ಕಣ್ಣೀರಿಗೆ ಸ್ಪಂದಿಸುತ್ತಾ, ಶ್ರಮಿಕ ವರ್ಗದ ಹಿತಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಅನಿಲಕುಮಾರ ಸಿದ್ದಮ್ಮನಹಳ್ಳಿ ಅವರು ಗದಗಿನ ಮಣ್ಣಿನ ಹೆಮ್ಮೆಯ ಪುತ್ರ. ಅನ್ಯಾಯದ ವಿರುದ್ಧ ಸಿಡಿದೆದ್ದು ನಿಲ್ಲುವ ಇವರು, ನ್ಯಾಯಕ್ಕಾಗಿ ಹೋರಾಡುವ ನೊಂದವರ ಪಾಲಿಗೆ ಭರವಸೆಯ ಬೆಳಕಾಗಿದ್ದಾರೆ. ತನ್ನ ಬಳಿಗೆ ಸಹಾಯ ಎಂದು ಬಂದವರನ್ನು ಯಾವತ್ತೂ ಬರಿಗೈಲಿ ಕಳುಹಿಸಿದ ಇತಿಹಾಸವೇ ಇವರಿಗಿಲ್ಲ. ಬಂದವರಿಗೆ ಸಾಂತ್ವನ ಹೇಳಿ, ಅವರ ಕಷ್ಟಕ್ಕೆ ಹೆಗಲಾಗಿ ನಿಂತು, ಬದುಕಿನಲ್ಲಿ ಹೊಸ ಭರವಸೆ ತುಂಬುವ ಇವರ ವ್ಯಕ್ತಿತ್ವವು ಕ್ರಾಂತಿಕಾರಿ ನಾಯಕತ್ವಕ್ಕೆ ಸಾಕ್ಷಿಯಾಗಿದೆ.
ಸದಾ ಜನಸೇವೆಯಲ್ಲೇ ಸುಖ ಕಾಣುವ ಈ ಧೀಮಂತ ನಾಯಕನಿಗೆ ಜಿಲ್ಲಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ, ಗದಗ-ಬೆಟಗೇರಿ ನಗರಸಭೆಯ ಭವಿಷ್ಯದ ದಿಕ್ಸೂಚಿಯಾಗಿ ಇವರು ಹೊರಹೊಮ್ಮಲಿ ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಹಾಗೂ ಸಾರ್ವಜನಿಕರು ಹಾರೈಸುತ್ತಿದ್ದಾರೆ.
ಕೃಷ್ಣಾ ಎಚ್ ಹಡಪದ
9845650612