ಕರುನಾಡು ಘರ್ಜುನೆ ಸುದ್ದಿ 2026ರ ನೀಟ್ ಪರೀಕ್ಷೆಯ ಹಗರಣದಲ್ಲಿ ಬಯಲಾಯಿತು ಭ್ರಷ್ಟ ಬಿಜೆಪಿ ಕೈವಾಡ: ಲಕ್ಷಾಂತರ ವೈದ್ಯಕೀಯ ವಿದ್ಯಾರ್ಥಿಗಳ ಕನಸಿಗೆ ಕೊಳ್ಳಿ: ಗದಗ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಆರೋಪ.
ಗದಗ: 2026ರ ನೀಟ್ ಪರೀಕ್ಷೆಯ ಹಗರಣದಲ್ಲಿ ಬಯಲಾಯಿತು ಭ್ರಷ್ಟ ಬಿಜೆಪಿ ಕೈವಾಡ ನಾಶವಾದ ಲಕ್ಷಾಂತರ ವೈದ್ಯಕೀಯ ವಿದ್ಯಾರ್ಥಿಗಳ ಕನಸಿಗೆ ಕೊಳ್ಳಿ ಇಟ್ಟಿದೆ ಎಂದು ಗದಗ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಆರೋಪ ಮಾಡಿದ್ದಾರೆ.
ಈ ಕುರಿತು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ದೇಶಾದ್ಯಂತ ವೈದ್ಯಕೀಯ ಶಿಕ್ಷಣ ಪ್ರವೇಶಾತಿಗಾಗಿ ನಡೆದಿದ್ದ ನೀಟ್ ಯುಜಿ (ಓಇಇಖಿ Uಉ 2026) ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಓಖಿಂ) ಅಧಿಕೃತವಾಗಿ ರದ್ದುಗೊಳಿಸಿದ್ದು 22.7 ಲಕ್ಷ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಟ್ಟ ಕೇಂದ್ರ ಬಿಜೆಪಿ ಸರ್ಕಾರ.
2026ರ ನೀಟ್ ಹಗರಣವನ್ನು ಅಃI ತನಿಖೆಗೆ ನೀಡಿದ್ದು ಸೋರಿಕೆಯಾದ ಓಇಇಖಿ 2026 ಪ್ರಶ್ನೆಪತ್ರಿಕೆಯನ್ನು ₹30 ಲಕ್ಷಕ್ಕೆ ಖರೀದಿಸಿದ ಆರೋಪದ ಮೇಲೆ ರಾಜಸ್ಥಾನದ ಜಾಮಾ ರಾಮಗಢದ ಬಿಜೆಪಿ ನಾಯಕ ದಿನೇಶ್ ರಾವಲ್ ಮತ್ತು ಅವರ ಸಹೋದರನನ್ನು ಬಂಧಿಸಲಾಗಿದೆ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಓಇಇಖಿ ಪರೀಕ್ಷೆಯನ್ನೇ ಸರಿಯಾಗಿ ಮಾಡದ ಕೇಂದ್ರ ಬಿಜೆಪಿ ಸರ್ಕಾರ 2025-26ರ ಕೇಂದ್ರ ಬಜೆಟ್‌ನಲ್ಲಿ 10,000 ವೈದ್ಯಕೀಯ ಸೀಟುಗಳನ್ನು ಹೆಚ್ಚಳ ಮಾಡಿ ಏನು ಪ್ರಯೋಜನ.
ಕರ್ನಾಟಕದಲ್ಲಿ ನಡೆದ ಅಇಖಿ ಪರೀಕ್ಷೆಯ ಜನವಾರದ ವಿಷಯದ ಬಗ್ಗೆ ಪ್ರಶ್ನೆ ಮಾಡುತ್ತಿದ್ದ ಬಿಜೆಪಿ ನಾಯಕರು ದೇಶಾದ್ಯಂತ 2026 ಮೇ 3ರಂದು ನಡೆದಿದ್ದ ಓಇಇಖಿ ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಪರೀಕ್ಷೆಯೇ ರದ್ದು ಮಾಡಲಾಗಿದ್ದು ಲಕ್ಷಾಂತರ ವಿದ್ಯಾರ್ಥಿಗಳ ನ್ಯಾಯ ಕೊಡಿಸುವುದು ಯಾವಾಗ?
ಕೇಂದ್ರ ಬಿಜೆಪಿ ಸರ್ಕಾರದ ವೈಫಲ್ಯದಿಂದ ವೈದ್ಯಕೀಯ ಶಿಕ್ಷಣ ಪಡೆಯಲು ಇದ್ದ ಓಇಇಖಿ ಪರೀಕ್ಷೆ ಮೇಲೆ ವಿಶ್ವಾಸ ಕಳೆದುಕೊಂಡು ಭಾರತದಿಂದ ಪ್ರತಿ ವರ್ಷ 20-25 ಸಾವಿರ ವಿದ್ಯಾರ್ಥಿಗಳು ಬೇರೆ ದೇಶಗಳಲ್ಲಿ ವೈದ್ಯಕೀಯ ಶಿಕ್ಷಣಕ್ಕಾಗಿ ತೆರಳುತ್ತಿದ್ದಾರೆ.
2025ರಲ್ಲಿ 22.09 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇದರಲ್ಲಿ ಶೇ 55.97% ವಿದ್ಯಾರ್ಥಿಗಳು ಮಾತ್ರ ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ.
2024ರಲ್ಲಿ ನಡೆದ ಓಇಇಖಿ ಹಗರಣವನ್ನು ಅಃI ತನಿಖೆಗೆ ನೀಡಿ ಏನೂ ಪ್ರಯೋಜನ ಕೇವಲ 2 ವರ್ಷದೊಳಗೆ ಮತ್ತೆ 2026ರಲ್ಲಿ ಓಇಇಖಿ ಹಗರಣದಿಂದ ಪರೀಕ್ಷೆಯೇ ರದ್ದಾಗಿದ್ದು ಈಗ ಪುನಃ ಅಃI ತನಿಖೆಗೆ ನೀಡಿ ಕೇಂದ್ರ ಬಿಜೆಪಿ ಸರ್ಕಾರ ಯಾರನ್ನು ರಕ್ಷಣೆ ಮಾಡಲು ಹೊರಟಿದೆ.
ಕಳೆದ 3 ವರ್ಷದಲ್ಲಿ 2 ಬಾರಿ ಓಇಇಖಿ ಪರೀಕ್ಷೆಯಲ್ಲಿ ಹಗರಣ ನಡೆದಿದ್ದು ಕೇವಲ ಒಂದು ಪರೀಕ್ಷೆಯನ್ನು ನಡೆಸಲು ಆಗದ ಕೇಂದ್ರ ಬಿಜೆಪಿ ಸರ್ಕಾರ ಇನ್ನೂ ದೇಶವನ್ನು ಹೇಗೆ ನಡೆಸುತ್ತಾರೆ ಎಂದು ಪ್ರಶ್ನೆ ಮೂಡಿದ್ದು ಓಇಇಖಿ ಪರೀಕ್ಷೆಯೂ ಕೂಡ ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡುವ ಸುಳ್ಳು ಭರವಸೆಯಂತೆ ಹಳ್ಳ ಹಿಡಿಯಲಿದೆ.
ಕೇಂದ್ರ ಬಿಜೆಪಿ ಸರ್ಕಾರ ಕಳೆದೊಂದು ದಶಕದಲ್ಲಿ ವೈದ್ಯಕೀಯ ಕಾಲೇಜು ಸೀಟು ದುಪ್ಪಟ್ಟಾಗಿದೆ ಎಂದು ಹೇಳಿದೆ ಆದರೆ ಭಾರತದಲ್ಲಿ ಪ್ರತಿ 1000 ನಾಗರಿಕರಿಗೆ ಕೇವಲ 1.3 ವೈದ್ಯರು ಮಾತ್ರ ಇದ್ದು ಓಇಇಖಿ ಪರೀಕ್ಷೆಯಲ್ಲಿ ಸಾಲು
ಸಾಲು ಪ್ರಶ್ನೆಪತ್ರಿಕೆ ಸೋರಿಯಿಂದಾಗಿ ವಿದ್ಯಾರ್ಥಿಗಳು ಓಇಇಖಿ ಪರೀಕ್ಷೆ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದು ವೈದ್ಯರ ಕೊರತೆಯನ್ನು ನೀಗಿಸುವುದು ಹೇಗೆ.
ಭಾರತದ ಸಾರ್ವಜನಿಕ ಆರೋಗ್ಯ ವೆಚ್ಚವು ಉಆPಯ ಕೇವಲ 1.94% ರಷ್ಟಿದೆ (ಬಜೆಟ್ 2026), ಇದು ರಾಷ್ಟ್ರೀಯ ಆರೋಗ್ಯ ನೀತಿ (2017)ಯ 2.5% ಗಿಂತ ಬಹಳ ಕಡಿಮೆಯಾಗಿದ್ದು ವೈದ್ಯಾಕೀಯ ಕ್ಷೇತ್ರವನ್ನು ಕಡೆಗಣಿಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರ. ಭಾರತದಲ್ಲಿ ಪ್ರತಿ ವರ್ಷ 20ರಿಂದ 24 ಲಕ್ಷ ವಿದ್ಯಾರ್ಥಿಗಳು ಓಇಇಖಿ ಪರೀಕ್ಷೆ ಬರೆದರೆ ಅದರಲ್ಲಿ ಅರ್ಹತೆ ಪಡೆದು ಶಿಕ್ಷಣ ಮುಗಿಸಿ ವೈದ್ಯರಾಗುವುದು 1 ಲಕ್ಷ ಮಾತ್ರ. 2024ರಲ್ಲಿ 23.33 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇದರಲ್ಲಿ ಶೇ 56.4% ವಿದ್ಯಾರ್ಥಿಗಳು ಮಾತ್ರ ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ.
ಪ್ರಸ್ತುತ ಭಾರತದಲ್ಲಿ 822 ವೈದ್ಯಕೀಯ ಕಾಲೇಜುಗಳಿದ್ದು ವೈದ್ಯಕೀಯ ಕೋರ್ಸ್ಗಳಿಗೆ ಒಟ್ಟು ಒಟ್ಟು 1.29 ಲಕ್ಷ ಸೀಟುಗಳಿವೆ. ಇವುಗಳಲ್ಲಿ 55,648 ಸೀಟುಗಳು ಮಾತ್ರ ಸರ್ಕಾರಿ ಕಾಲೇಜ್‌ಗಳಲ್ಲಿ ಇದ್ದು 50,685 ಸೀಟುಗಳು ಖಾಸಗಿ ಎಂಬಿಬಿಎಸ್ ಕಾಲೇಜುಗಳಿಗೆ ನೀಡಿದೆ.
ದೇಶದಲ್ಲಿ ಒಟ್ಟು ಲಭ್ಯವಿರುವ 1.29 ಲಕ್ಷ ವೈದ್ಯಕೀಯ ಸೀಟುಗಳಿದ್ದು 2026 ಓಇಇಖಿ ಪರೀಕ್ಷೆಯಲ್ಲಿ ಸ್ಪರ್ಧಿಸುತ್ತಿರುವ 23 ಲಕ್ಷ ವಿದ್ಯಾರ್ಥಿಗಳಿಗೆ ಹೋಲಿಸಿದರೆ 94.6% ಜನರಿಗೆ ವೈದ್ಯಾಕೀಯ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಇದರ ಮಧ್ಯೆ ಪರೀಕ್ಷೆ ರದ್ದು ಮಾಡಿ ವೈದ್ಯಾಕೀಯ ಭವಿಷ್ಯವನ್ನು ಅತಂತ್ರಕ್ಕೆ ದೂಡಿದೆ.
ಪ್ರಸ್ತುತ ಗೋರ್ಜಿಯಾ, ಕಿರ್ಗಿಸ್ತಾನ್ ಮತ್ತು ಉಜೈಕಿಸ್ತಾನ್‌ನಂತಹ ದೇಶಗಳಲ್ಲಿ ಅಗ್ಗದ ದರದಲ್ಲಿ ವೈದ್ಯಕೀಯ ಶಿಕ್ಷಣ ಲಭ್ಯವಿರುವುದರಿಂದ, ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಅಲ್ಲಿ ಕಲಿಯುತ್ತಿದ್ದಾರೆ. 2024ರ ವೇಳೆಗೆ ವಿದೇಶದಲ್ಲಿ ಕಲಿಯುತ್ತಿರುವ ಭಾರತೀಯ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ 1.3 ಮಿಲಿಯನ್ ದಾಟಿದೆ.
ಓಇಇಖಿ ಪರೀಕ್ಷೆಯ ಇತಿಹಾಸ ಮತ್ತು ಕಳೆದುಹೋದ ಪಾರದರ್ಶಕತೆ:
2013-2016 2013ರಲ್ಲಿ ದೇಶಾದ್ಯಂತ ಏಕರೂಪದ ವೈದ್ಯಕೀಯ ಪ್ರವೇಶ ಪರೀಕ್ಷೆಯಾಗಿ ನೀಟ್ ಪರಿಚಯಿಸಲಾಯಿತು. ನಂತರ ಸುಪ್ರೀಂ ಕೋರ್ಟ್ ಇದನ್ನು ಅಸಂವಿಧಾನಿಕ ಎಂದು ರದ್ದುಗೊಳಿಸಿದರೂ, 2016ರಲ್ಲಿ ತನ್ನ ತೀರ್ಪನ್ನು ಮರುಪರಿಶೀಲಿಸಿ ಪರೀಕ್ಷೆಯನ್ನು ಮರುಸ್ಥಾಪಿಸಿತು.
2017ರ ಅನಿತಾ ಪ್ರಕರಣ – ಓಇಇಖಿ ವಿರುದ್ಧ ಕಾನೂನು ಹೋರಾಟ ನಡೆಸಿದ್ದ ತಮಿಳುನಾಡಿನ ವೈದ್ಯಕೀಯ ವಿದ್ಯಾರ್ಥಿನಿ S. ಂಟಿiಣhಚಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದೇಶಾದ್ಯಂತ ಬಾರಿ ಚರ್ಚೆಯಾಗಿತ್ತು.
2019-2020 – 2019ರಲ್ಲಿ ತಮಿಳುನಾಡಿನಲ್ಲಿ ಪ್ರಾಕ್ಸಿ (ಬದಲಿ) ಅಭ್ಯರ್ಥಿಗಳನ್ನು ಬಳಸಿ ಪರೀಕ್ಷೆ ಬರೆಸುವ ದಂಧೆ ಬಯಲಾಯಿತು. 2020ರಲ್ಲಿ ಕೋವಿಡ್ ಸಾಂಕ್ರಾಮಿಕದ ನಡುವೆಯೂ ಪರೀಕ್ಷೆ ನಡೆಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿತು.
2024ರಲ್ಲಿ 67 ಅಭ್ಯರ್ಥಿಗಳು ಪೂರ್ಣ ಅಂಕ (720/720) ಪಡೆದಿದ್ದು ಮತ್ತು ಪ್ರಶ್ನೆ ಪತ್ರಿಕೆ ತಡವಾಗಿ ಬಂದ ಕಾರಣಕ್ಕೆ ‘ಗ್ರೇಸ್ ಮಾರ್ಕ್ಸ್’ ನೀಡಿದ್ದು ಬಿಹಾರ ಸೇರಿದಂತೆ ಹಲವೆಡೆ ಪೇಪರ್ ಸೋರಿಕೆ ಆರೋಪದ ಮೇಲೆ ಸಿಬಿಐ ತನಿಖೆ ನಡೆಯಿತು. ಸುಪ್ರೀಂ ಕೋರ್ಟ್ ವ್ಯವಸ್ಥಿತ ಲೋಪಕ್ಕೆ ಪುರಾವೆಗಳಿಲ್ಲ ಎಂದು ಮರು ಪರೀಕ್ಷೆಯನ್ನು ನಿರಾಕರಿಸಿತು.
2026ರ ಮೇ ತಿಂಗಳಲ್ಲಿ ನಡೆದ ಪರೀಕ್ಷೆಗೆ ಎರಡು ದಿನಗಳ ಮೊದಲು ಗುಜರಾತ್ ರಾಜ್ಯದ ಸಿಕಾರ್‌ನಲ್ಲಿ ಓಇಇಖಿ ಪ್ರಶ್ನೆ ಪತ್ರಿಕೆಯ 180 ಪ್ರಶ್ನೆಗಳಲ್ಲಿ ಪೈಕಿ 140 ಪ್ರಶ್ನೆಗಳು ಕೈಬರಹದಲ್ಲಿ ಸೋರಿಕೆಯಾಗಿದ್ದ ಪ್ರತಿಕೆಯಲ್ಲಿ ಇದ್ದ ಪ್ರಶ್ನೆಗಳಾಗಿದ್ದವು.
2024 ಓಇಇಖಿ ಪರೀಕ್ಷೆ ಹಗರಣ:
ನೀಟ್ ಪರೀಕ್ಷೆ ಇತಿಹಾಸದಲ್ಲೇ ಮೊದಲ ಬಾರಿಗೆ 67 ವಿದ್ಯಾರ್ಥಿಗಳು 720ಕ್ಕೆ 720 ಅಂಕಗಳನ್ನು ಪಡೆದಿದ್ದು ಇದರಲ್ಲಿ ಹರಿಯಾಣದ ಒಂದೇ ಕೇಂದ್ರದ ಆರು ವಿದ್ಯಾರ್ಥಿಗಳು ಸೇರಿದ್ದು ಹೆಚ್ಚಿನ ಅನುಮಾನಕ್ಕೆ ಕಾರಣವಾಗಿತ್ತು.
ಜುಲೈ 2024ರಲ್ಲಿ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಸುಪ್ರೀಂ ಕೋರ್ಟ್ನಲ್ಲಿ ಹಲವಾರು ಅರ್ಜಿಗಳು ಸಲ್ಲಿಸಿ ಕನಿಷ್ಠ 155 ವಿದ್ಯಾರ್ಥಿಗಳು ಸೋರಿಕೆಯಿಂದ ಪ್ರಯೋಜನ ಪಡೆದಿದ್ದಾರೆ ಎಂದು ಒಪ್ಪಿಕೊಂಡಾಗ ಸಾಕ್ಷಾದಾರ ಕೊರತೆಯನ್ನು ಉಲ್ಲೇಖಿಸಿ ಸುಪ್ರೀಂ ಕೋರ್ಟ್ ಇಡೀ ರಾಷ್ಟ್ರವ್ಯಾಪಿ ಪರೀಕ್ಷೆಯನ್ನು ರದ್ದುಗೊಳಿಸಲು ನಿರಾಕರಿಸಿತು.
ಸುಪ್ರೀಂ ಕೋರ್ಟ್ ಈ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಿದ ನಂತರ ಶಿಕ್ಷಕರು, ಪಾಶುಪಾಲರು ಮತ್ತು ಶಾಲಾ ಸಿಬ್ಬಂದಿ ಸೇರಿದಂತೆ ಸುಮಾರು 50 ವ್ಯಕ್ತಿಗಳನ್ನು ಬಂಧಿಸಲಾಯಿತು.
ನಿಲ್ಲದ ಕೇಂದ್ರ ಪರೀಕ್ಷೆಗಳ ಅಕ್ರಮಗಳು: 2017ರ SSಅ ಕಂಬೈನ್ಸ್ ಗ್ರಾಜುಯೇಟ್ ಲೆವೆಲ್ ಪರೀಕ್ಷೆಯು ದೊಡ್ಡ ಪ್ರಮಾಣದ ಸೋರಿಕೆಯ ಆರೋಪಗಳಿಂದ ದೊಡ್ಡ ಮಟ್ಟದ ಪ್ರತಿಭಟನೆಗಳ ನಂತರ ಅಃI ತನಿಖೆಗೆ ನೀಡಲಾಗಿತ್ತು.
2024ರಲ್ಲಿ ಜಾರ್ಖಂಡ್ ಸ್ಟಾಫ್ ಸೆಲೆಕ್ಷನ್ ಕಮಿಷನ್ ಅಉಐ ಪರೀಕ್ಷೆಯನ್ನು ದೃಢಪಡಿಸಿದ ಪ್ರಶ್ನೆಪತ್ರಿಕೆ ಸೋರಿಕೆಯ ನಂತರ ರದ್ದುಗೊಳಿಸಲಾಯಿತು ಇದರಿಂದ 6 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳ ಮೇಲೆ ಪರಿಣಾಮ ಬೀರಿತು.
2024ರಲ್ಲಿ ನಡೆದ Uಉಅ-ಓಇಖಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಗಂಭೀರ ಮಾಹಿತಿ ಪರೀಕ್ಷೆ ನಡೆದ ಕೇವಲ 24 ಗಂಟೆಗಳಲ್ಲೇ ಬಹಿರಂಗವಾದ ಹಿನ್ನೆಲೆಯಲ್ಲಿ, ಕೇಂದ್ರ ಶಿಕ್ಷಣ ಸಚಿವಾಲಯ ಪರೀಕ್ಷೆಯನ್ನು ತುರ್ತುವಾಗಿ ಪರೀಕ್ಷೆಯನ್ನು ರದ್ದುಗೊಳಿಸಿತು. ಇದರಿಂದ ಸುಮಾರು 9.08 ಲಕ್ಷ ಅಭ್ಯರ್ಥಿಗಳ ಭವಿಷ್ಯಕ್ಕೆ ತೊಂದರೆಯಾಯಿಗಿದ್ದನ್ನು ಜನ ಮರೆತಿಲ್ಲ ಎಂದು ಗದಗ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಆರೋಪ ಮಾಡಿದ್ದಾರೆ.