ಕರುನಾಡು ಘರ್ಜನೆ ಸುದ್ದಿ ಕೊಪ್ಪಳ : ಜಿಲ್ಲೆಯ ಕಾರಟಗಿ ಪುರಸಭೆಯ ಮುಖ್ಯಾಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದವರ ವಿರುದ್ಧ ಶಿಸ್ತಿನ ಕ್ರಮಕ್ಕಾಗಿ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘ (ರಿ) ವತಿಯಿಂದ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಗಿದೆ .
ಕೊಪ್ಪಳ ಜಿಲ್ಲೆಯ ಕಾರಟಗಿ ಪುರಸಭೆಯ ಮುಖ್ಯಾಧಿಕಾರಿ ಶ್ರೀಸಾಬಣ್ಣ ಕಟಿಕಾರರವರು ಸರ್ಕಾರದ ನಿರ್ದೇಶನಗಳನುಸಾರ ನಿಷ್ಠೆ ಪ್ರಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿರುವುದು ತಮಗೆ ತಿಳಿದಿದೆ.ಸದರಿ ಪುರಸಭೆಯ ಅಧ್ಯಕ್ಷನು ನಮ್ಮ ಮುಖ್ಯಾಧಿಕಾರಿಗಳಿಗೆ ಈ ಹಿಂದಿನಿಂದಲೂ ಆಗೌರವ ತೋರುತಲಿದ್ದರೂ ಪುರದ ಅಭಿವೃದ್ಧಿಗಾಗಿ ಸಹಿಸಿಕೊಂಡು ಸೇವಾನಿರತರಾಗಿದ್ದು. ದಿನಾಂಕ:20-05-2026 ರಂದು ಜಂಗಮವಾಣಿಯ ಕರೆಯಮೂಲಕ ಅಸಂಬದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನ್ನು ಈಗಾಗಲೇ ಸದರಿ ಮುಖ್ಯಾಧಿಕಾರಿಗಳು ತಮ್ಮಗಳ ಅವಗಹನೆಗೆ ತಂದಿದ್ದು.ಈ ರೀತಿ ನಮ್ಮ ಅಧಿಕಾರಿಗಳಿಗೆ ಧಮ್ಕಿ ಹಾಕಿರುವದನ್ನು ನಮ್ಮ ಸಂಘವು ತೀವ್ರವಾಗಿ ಖಂಡಿಸುತ್ತಾ ಶ್ರೀ ಮಂಜುನಾಥ್ ಮೇಗೂ ಅಧ್ಯಕ್ಷ ಲೋಕ ನೌಕರನಾಗಿದ್ದು ಪ್ರಜಾಪ್ರತಿನಿಧಿ ಕಾಯ್ದೆಯ ನೀಯಮಗಳನ್ನು.ಪ್ರತಿಜ್ಞಾವಿಧಿಯಲ್ಲಿ ಮಾಡಿದ ಪ್ರಮಾಣವನ್ನು ಉಲ್ಲಘಿಸಿದ್ದು. ಸದರಿಯವರ ಸದಸ್ಯತ್ವವನ್ನು ರದ್ದುಗೊಳಿಸುವಂತೆ ತಮ್ಮಲ್ಲಿ ಕೋರುತ್ತವೆ.
ತಮ್ಮಗಳ ಅಧೀನದಲ್ಲಿ ಸೇವಾ ನಿರತ ನಮ್ಮ ನೌಕರರು ಒತ್ತಡವಿಲ್ಲದೇ ಸರ್ಕಾರದ ನಿಯಮಗಳನುಸಾರ ಕರ್ತವ್ಯ ನಿರ್ವಹಿಸಲು ಮುಕ್ತ ವಾತಾವರಣ ಮತ್ತು ಅವಕಾಶ ಕಲ್ಪಿಸುವ ಕ್ರಮಕ್ಕಾಗಿ ತಮ್ಮಗಳಲ್ಲಿ ಈ ದೂರನ್ನು ಸಲ್ಲಿಸುವ ಮೂಲಕ ಮುಖ್ಯಾಧಿಕಾರಿಗಳಿಗಾದ ನೋವಿಗೆ ನ್ಯಾಯ ನೀಡುವಂತೆ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರಗಡಪ್ಪ ಮರಿಯಪ್ಪ ಹುಲಿಹೈದರ್. ರಾಜ್ಯ ಜಂಟಿ ಕಾರ್ಯದರ್ಶಿ ಲಾಲ್ ಸಾಬ್ ಎಂ. ಮನಿಯಾರ. ರಾಜ್ಯ ಪರಿಷತ್ ಸದಸ್ಯ ವಸಂತ್ ಬೆಲ್ಲದ್. ಗಂಗಾವತಿ ಶಾಖಾ ಅಧ್ಯಕ್ಷ ವಾಹಿದ್ ಖಾನ್. ನಿರ್ದೇಶಕ ರಾಮಣ್ಣ ಗುಗರಿ. ಮಂಜುನಾಥ್ ಕುಣಿಕೇರಿ. ಈರಪ್ಪ ಕಾರಟಗಿ ಮುಂತಾದವರು ಮನವಿ ಮೂಲಕ ಕೋರಿದ್ದಾರೆ. ಅದೇರೀತಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೂ ಮನವಿ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಒತ್ತಾಯಿಸಿದರು.