Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಜಿಲ್ಲೆ

ಕೊಪ್ಪಳ| ಸ್ಕೇಟಿಂಗ್ ಅಭ್ಯಾಸ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಏಕಾಗ್ರತೆ ಮತ್ತು ನೆನಪಿನ ಶಕ್ತಿ ಹೆಚ್ಚುತ್ತದೆ – ಎಸ್.ಎ. ಗಫಾರ್

ಕರುನಾಡು ಘರ್ಜನೆ ಸುದ್ದಿ ಕೊಪ್ಪಳ : ಮೇ. 22. ವಿದ್ಯಾರ್ಥಿಗಳು ಸ್ಕೇಟಿಂಗ್ ಅಭ್ಯಾಸ ಮಾಡುವುದರಿಂದ ಇಡೀ ದೇಹಕ್ಕೆ ವ್ಯಾಯಾಮ ಅಷ್ಟೇ ಅಲ್ಲ ಸಮತೋಲನ ಕಾಪಾಡಿಕೊಳ್ಳುವುದು ಏಕಾಗ್ರತೆ ಮತ್ತು ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ದಿ ಬೆಸ್ಟ್ ಸ್ಕೇಟಿಂಗ್ ಅಕಾಡೆಮಿ…

ಕರುನಾಡು ಘರ್ಜನೆ ಸುದ್ದಿ ಕೊಪ್ಪಳ : ಮೇ. 22. ವಿದ್ಯಾರ್ಥಿಗಳು ಸ್ಕೇಟಿಂಗ್ ಅಭ್ಯಾಸ ಮಾಡುವುದರಿಂದ ಇಡೀ ದೇಹಕ್ಕೆ ವ್ಯಾಯಾಮ ಅಷ್ಟೇ ಅಲ್ಲ ಸಮತೋಲನ ಕಾಪಾಡಿಕೊಳ್ಳುವುದು ಏಕಾಗ್ರತೆ ಮತ್ತು ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ದಿ ಬೆಸ್ಟ್ ಸ್ಕೇಟಿಂಗ್ ಅಕಾಡೆಮಿ ಅಧ್ಯಕ್ಷ ಎಸ್.ಎ.ಗಫಾರ್ ಹೇಳಿದರು.

ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ದಿ ಬೆಸ್ಟ್ ಸ್ಕೇಟಿಂಗ್ ಅಕಾಡೆಮಿ ಸಹಯೋಗದಲ್ಲಿ ಗದಗ ರಸ್ತೆಯಲ್ಲಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ಐದು ದಿನಗಳ ಉಚಿತ ಸ್ಕೇಟಿಂಗ್ ತರಬೇತಿ ಶಿಬಿರದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಸ್.ಎ.ಗಫಾರ್ ಮುಂದುವರೆದು ಮಾತನಾಡಿ ಕ್ರೀಡಾ ಅಧಿಕಾರಿ ಜಾಬಗೌಡರ ಅವರಲ್ಲಿ ನಾವು ಸ್ಕೇಟಿಂಗ್ ತರಬೇತಿ ಬಗ್ಗೆ ಪ್ರಸ್ತಾಪಿಸಿದಾಗ ಬನ್ನಿ ತರಬೇತಿ ಕೊಡಿ ಎಂದು ಪ್ರೋತ್ಸಾಹ ಕೊಟ್ಟಿದ್ದರಿಂದ ಇದೀಗ ತರಬೇತಿ ನಡೆದಿದೆ. ಸ್ಕೇಟಿಂಗ್ ಜಿಲ್ಲೆಯ ಹಳ್ಳಿ ಹಳ್ಳಿಗಳಿಗೂ ತಲುಪಬೇಕು. ತಾಲೂಕಾ ಮಟ್ಟದಲ್ಲಿ ತರಬೇತಿಗೆ ಅನುಕೂಲ ಮಾಡಿಕೊಡಬೇಕು.ನಮ್ಮಲ್ಲಿ ಸೈಕಲ್ ಸ್ಪರ್ಧೆ ಏರ್ಪಡಿಸಬೇಕು.ಗದಗ ಬಾಗಲಕೋಟೆ ಕಡೆ ಇದೆ ಎಂದು ಮೌಖಿಕವಾಗಿ ಕೇಳಿದ್ದೇನೆ.ಅದಕ್ಕೆ ಬೇಕಾಗುವ ಅನುಕೂಲತೆ ಮಾಡೋಣ ಎಂದು ಹೇಳಿದ್ದಾರೆ. ಇಂತಹಾ ಹಲವು ಕ್ರೀಡೆಗಳು ನಮ್ಮಲ್ಲಿ ಪರಿಚಯಿಸಿದರೆ ಯುವಕರು ತರಬೇತಿ ಪಡೆದು ಜಿಲ್ಲಾ ರಾಜ್ಯ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸ್ಕೇಟಿಂಗ್ ತರಬೇತಿ ಶಿಬಿರಕ್ಕೆ ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿದ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ ಮಾತನಾಡಿ ಸ್ಕೇಟಿಂಗ್ ದಂತಹ ವಿವಿಧ ಕ್ರೀಡೆಗಳನ್ನು ತರಬೇತಿ ಪಡೆದು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಗೆದ್ದವರಿಗೆ ಉದ್ಯೋಗ ಪಡೆಯುವಾಗ 60 ಅಂಕ ಸಿಗುತ್ತದೆ.ಅಲ್ಲದೆ ದೈಹಿಕ ಆರೋಗ್ಯ ಮಾತ್ರವಲ್ಲದೆ ಮಾನಸಿಕವಾಗಿಯೂ ಉತ್ತಮ ಬೆಳವಣಿಗೆ ಹೊಂದುತ್ತಾರೆ.ಕುಸ್ತಿ ಆಡುವ ಚಾಪೆ (ಮ್ಯಾಟ್)ತರಿಸಲಾಗುತ್ತಿದೆ. ಇನ್ನೂ ಬೇರೆ ಬೇರೆ ಕ್ರೀಡೆಗಳು ನಮ್ಮಲ್ಲಿ ಪ್ರಾರಂಭಿಸುತ್ತಿದ್ದೇವೆ ಅದಕ್ಕೆ ತಕ್ಕಂತೆ ಕ್ರೀಡಾ ಆಸಕ್ತರು ಮುಂದೆ ಬರಬೇಕು ಎಂದು ಕರೆ ನೀಡಿದರು.
ಇನ್ನೊಬ್ಬ ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ ಕುಬೇರ ಮಜ್ಜಿಗಿ ಮಾತನಾಡಿ ಯಾವುದೇ ಕ್ರೀಡೆ ಆಗಿರಲಿ ಮಕ್ಕಳ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಮಕ್ಕಳು ಯಾವುದಾದರೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಮೊಬೈಲ್ ಚಟವನ್ನು ಕಡಿಮೆ ಮಾಡಿ ಕ್ರೀಡೆಯತ್ತ ಮನಸ್ಸು ಮಾಡಬೇಕು. ಸ್ಕೇಟಿಂಗ್ ಅತ್ಯುತ್ತಮ ಕ್ರೀಡೆ ಇದಕ್ಕೆ ಪ್ರೋತ್ಸಾಹ ನೀಡುತ್ತಿರುವ ಕ್ರೀಡಾ ಅಧಿಕಾರಿಗಳ ಕಾರ್ಯ ಶ್ಲಾಘನೀಯ ಎಂದು ನುಡಿದರು.
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಹಾಗೂ ಕ್ರೀಡಾ ಪಟು ಆದಿಲ್ ಪಟೇಲ್ ಮಾತನಾಡಿ ಮೊದಲಿಗಿಂತ ಈಚೆಗೆ ಕ್ರೀಡಾ ಪಟುಗಳಿಗೆ ಕ್ರೀಡಾ ಇಲಾಖೆಯಿಂದ ಅನೇಕ ಸೌಲಭ್ಯಗಳು ಸಿಗುತ್ತಿವೆ. ಕ್ರೀಡಾ ಪಟುಗಳು ತಮಗೆ ಆಸಕ್ತಿ ಇರುವ ಕ್ರೀಡೆಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಬೇಕು.ಸ್ಕೇಟಿಂಗ್ ವಿಶೇಷ ಕ್ರೀಡೆಯಾಗಿದೆ. ವಿದ್ಯಾರ್ಥಿಗಳು ಮೊಬೈಲ್ ಚಟದಿಂದ ದೂರ ಇದ್ದು ಕ್ರೀಡೆಯೊಂದಿಗೆ ಶಿಕ್ಷಣ ಮುಂದುವರೆಸಿದರೆ ದೈಹಿಕ ಹಾಗೂ ಮಾನಸಿಕವಾಗಿ ಬೆಳೆಯಲು ಸಾಧ್ಯ‌ ಎಂದು ಹೇಳಿದರು.
ಇನ್ನೊಬ್ಬ ಮುಖ್ಯ ಅತಿಥಿಯಾಗಿದ್ದ ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣವರ್ ಮಾತನಾಡಿ ಐದು ದಿನಗಳ ಉಚಿತ ಸ್ಕೇಟಿಂಗ್ ತರಬೇತಿ ಶಿಬಿರದಲ್ಲಿ ಎಲ್ಲವೂ ಕಲಿಯಲು ಸಾಧ್ಯವಿಲ್ಲ. ಕ್ರಮೇಣವಾಗಿ ಕಲಿಯಬಹುದು. ಪಾಲಕರು ಎಷ್ಟೆಲ್ಲಾ ಹಣ ಖರ್ಚು ಮಾಡುತ್ತಿದ್ದು ಮಕ್ಕಳು ದೈಹಿಕವಾಗಿ ಬೆಳೆಯಲು ಸಾಧ್ಯವಾಗುತ್ತಿಲ್ಲ. ತಂಡವಾಗಿ ಸ್ಕೇಟಿಂಗ್ ಕಲಿಯುವುದರಿಂದ ಎಲ್ಲಾ ಆಯಾಮಗಳಿಂದ ದೇಹದ ವ್ಯಾಯಾಮ ಆಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖ್ಯ ಸಂಚಾಲಕ ಬಸವರಾಜ್ ಶೀಲವಂತರ್ ಮಾತನಾಡಿ ಮನುಷ್ಯನ ಮಾನಸಿಕ ಮತ್ತು ದೈಹಿಕ ಸದೃಢವಾಗಿ ಬೆಳವಣಿಗೆ ಆಗಬೇಕೆಂದರೆ ಆಟ ಬೇಕೇ ಬೇಕು. ನಮ್ಮ ಕಾಲದ್ದು ಆಟಗಳೇ ಬೇರೆ ಲಗೋರಿ.ಬುಗುರಿ.ಗೋಲಿ.ಓಟ. ಎತ್ತರ ಜಿಗಿತ ಮುಂತಾದ ಬಂಡವಾಳ ಹಾಕದ ಅಥವಾ ಕಡಿಮೆ ಖರ್ಚಿನ ಆಟಗಳಾಗಿತ್ತು. ಈಗ ಬೇರೆ ಬೇರೆ ಹೊಸ ಕ್ರೀಡೆಗಳು ಬಂದಿದೆ.ಸ್ಕೇಟಿಂಗ್ ಹಾಕಿಕೊಂಡು ಮಕ್ಕಳು ಕಾರಿನ ಕೆಳಗಿನಿಂದ ದಾಟುತ್ತಾರೆ. ಇಂಸ್ಕೇಟಿಂಗ್ ಎಲ್ಲರೂ ಕಲಿಯಬಹುದು ಎಂದು ಹೇಳಿದರು.
ಪ್ರಸ್ತಾವಿಕವಾಗಿ ಮಾತನಾಡಿದ ದಿ ಬೆಸ್ಟ್ ಸ್ಕೇಟಿಂಗ್ ಅಕಾಡೆಮಿ ಉಪಾಧ್ಯಕ್ಷ ರಮೇಶ್ ಚಿತ್ರಗಾರ್ 20ಕ್ಕೂ ಹೆಚ್ಚು ವರ್ಷಗಳ ಹಿಂದೆ ನಾವು ಕೊಪ್ಪಳದಲ್ಲಿ ಕರಾಟೆ ಸ್ಕೇಟಿಂಗ್ ಸಾಹಸ ಕ್ರೀಡೆಗಳು ಮಾಡಲು ಬಹಳಷ್ಟು ಹರಸಾಹಸ ಪಟ್ಟಿದ್ದು. ಈಗ ಎಲ್ಲಾ ರೀತಿಯ ಸಹಕಾರ ಸಿಗುತ್ತಿದೆ ಆದರೆ ನಮ್ಮ ತಂಡದವರು ಒಂದೆಡೆ ಸೇರಿ ಮತ್ತೆ ಹಲವು ಕ್ರೀಡೆಗಳು ನಡೆಸೋಣ ಎಂದು ಅವರು ಸ್ಕೇಟಿಂಗ್ ಶಿಬಿರದಲ್ಲಿ ಬೆಳ್ಳಿಗೆ 6.30 ರಿಂದ 7.30 ವರೆಗೆ ಸಂಜೆ 5 ಗಂಟೆ ಯಿಂದ 6 ಗಂಟೆ ವರೆಗೆ ನಡೆಯಲಿರುವ ತರಬೇತಿ ಎಲ್ಲಾ ಮಕ್ಕಳು ಉಚಿತವಾಗಿ ಪಡೆಯಬಹುದು ಎಂದು ಮಾಹಿತಿ ನೀಡಿದರು.

ವೇದಿಕೆ ಮೇಲೆ ತಾಲೂಕಾ ಕ್ರೀಡಾ ಅಧಿಕಾರಿ ಶರಣು ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ದಿ ಬೆಸ್ಟ್ ಸ್ಕೇಟಿಂಗ್ ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಶಿವಾನಂದ ಹಾದಿಮನಿ ಸ್ವಾಗತಿಸಿದರು. ಕೊಳಚೆ ನಿರ್ಮೂಲನಾ ವೇದಿಕೆಯ ಸಂಚಾಲಕ ಮೊಹಮ್ಮದ್ ಗೌಸ್ ನೀಲಿ ನಿರೂಪಿಸಿದರು.ದಿ ಬೆಸ್ಟ್ ಸ್ಕೇಟಿಂಗ್ ಅಕಾಡೆಮಿಯ ಖಜಾಂಚಿ ಸೈಫುಲ್ಲಾ ವಂದಿಸಿದರು.

Editor

Leave a comment