Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಗದಗ

ಸವಿತಾ ಸಮಾಜ ಸೇರಿ 172 ಸಣ್ಣ ಜಾತಿಗಳನ್ನು ಕೇವಲ ‘ಮತಬ್ಯಾಂಕ್’ ಮಾಡಬೇಡಿ: ಕೃಷ್ಣಾ ಹಡಪದ ಆಕ್ರೋಶ

ಕರುನಾಡು ಘರ್ಜನೆ ಸುದ್ದಿ ಗದಗ 28: “ರಾಜ್ಯದಲ್ಲಿ ಸವಿತಾ ಸಮಾಜ ಸೇರಿದಂತೆ 172ಕ್ಕೂ ಹೆಚ್ಚು ಅತಿ ಸಣ್ಣ ಹಿಂದುಳಿದ ಸಮುದಾಯಗಳನ್ನು ಕೇವಲ ಚುನಾವಣಾ ಕಾಲದ ‘ಮತಬ್ಯಾಂಕ್‌’ಗಳನ್ನಾಗಿ ಬಳಸಿಕೊಂಡು, ಅಧಿಕಾರದ ಹಂಚಿಕೆಯ ವೇಳೆಯಲ್ಲಿ ಸಂಪೂರ್ಣವಾಗಿ ಮೂಲೆಗುಂಪು ಮಾಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಬಗೆಯುತ್ತಿರುವ ದ್ರೋಹ” ಎಂದು…

ಕರುನಾಡು ಘರ್ಜನೆ ಸುದ್ದಿ ಗದಗ 28: “ರಾಜ್ಯದಲ್ಲಿ ಸವಿತಾ ಸಮಾಜ ಸೇರಿದಂತೆ 172ಕ್ಕೂ ಹೆಚ್ಚು ಅತಿ ಸಣ್ಣ ಹಿಂದುಳಿದ ಸಮುದಾಯಗಳನ್ನು ಕೇವಲ ಚುನಾವಣಾ ಕಾಲದ ‘ಮತಬ್ಯಾಂಕ್‌’ಗಳನ್ನಾಗಿ ಬಳಸಿಕೊಂಡು, ಅಧಿಕಾರದ ಹಂಚಿಕೆಯ ವೇಳೆಯಲ್ಲಿ ಸಂಪೂರ್ಣವಾಗಿ ಮೂಲೆಗುಂಪು ಮಾಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಬಗೆಯುತ್ತಿರುವ ದ್ರೋಹ” ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್. ಹಡಪದ ಅವರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಮುಂಬರುವ ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗಳ ಹಿನ್ನೆಲೆಯಲ್ಲಿ ಅತ್ಯಂತ ಖಾರವಾಗಿ ಪ್ರತಿಕ್ರಿಯಿಸಿರುವ ಅವರು, ರಾಜಕೀಯ ಪಕ್ಷಗಳ ಸಾಮಾಜಿಕ ನ್ಯಾಯದ ಬೂಟಾಟಿಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅವರ ಕ್ರಾಂತಿಕಾರಿ ಹಕ್ಕೊತ್ತಾಯಗಳ ವಿವರ ಹೀಗಿದೆ:
*ಪ್ರಬಲರ ಪುನರ್ವಸತಿ ಕೇಂದ್ರಗಳಾದ ಮೇಲ್ಮನೆಗಳು:*
ಸಂಖ್ಯಾಬಲ ಮತ್ತು ಹಣಬಲದ ಕೊರತೆಯಿಂದಾಗಿ ನೇರ ಚುನಾವಣಾ ರಾಜಕಾರಣದಲ್ಲಿ ಸ್ಪರ್ಧಿಸಲು ಸಾಧ್ಯವಾಗದ ತಳಸಮುದಾಯಗಳ ಧ್ವನಿಯಾಗಬೇಕಿದ್ದ ಮೇಲ್ಮನೆಗಳನ್ನು (ರಾಜ್ಯಸಭೆ-ವಿಧಾನಪರಿಷತ್), ಇಂದಿನ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಸೋತ ಪ್ರಬಲ ಜಾತಿಗಳ ನಾಯಕರ ‘ಪುನರ್ವಸತಿ ಕೇಂದ್ರ’ಗಳನ್ನಾಗಿ ಮಾರ್ಪಡಿಸಿವೆ. ಇದು ಸಂವಿಧಾನದ ಆಶಯಕ್ಕೆ ಎಸಗುತ್ತಿರುವ ಅಪಚಾರವಾಗಿದೆ.
*ಶೇ. 25 ರಷ್ಟಿರುವ ಶ್ರಮಿಕ ವರ್ಗಕ್ಕೆ ಶೂನ್ಯ ಪ್ರಾತಿನಿಧ್ಯ:* ರಾಜ್ಯದ ವಿಧಾನಸಭೆ ಮತ್ತು ಲೋಕಸಭೆಯ ಶೇ. 85ಕ್ಕೂ ಹೆಚ್ಚು ಸ್ಥಾನಗಳು ಕೇವಲ ಬೆರಳೆಣಿಕೆಯಷ್ಟು ಪ್ರಬಲ ಸಮುದಾಯಗಳ ಪಾಲಾಗುತ್ತಿವೆ. ಆದರೆ, ದಿನದಿನದ ಶ್ರಮದ ಮೂಲಕ ಸಮಾಜದ ಚಲನೆಗೆ ರಕ್ತ ಮಾಂಸ ನೀಡಿ ದುಡಿಯುತ್ತಿರುವ ಸವಿತಾ ಸಮಾಜ (ಕ್ಷೌರಿಕರು), ಮಡಿವಾಳ, ಕುಂಬಾರ, ವಿಶ್ವಕರ್ಮ, ಉಪ್ಪಾರ, ನೇಕಾರ ಸೇರಿದಂತೆ ಶೇ. 25 ರಷ್ಟಿರುವ 172ಕ್ಕೂ ಹೆಚ್ಚು ತಳ ಸಮುದಾಯಗಳಿಗೆ ಶಾಸನಸಭೆಗಳಲ್ಲಿ ಕನಿಷ್ಠ ಪ್ರಾತಿನಿಧ್ಯವೂ ಇಲ್ಲದಿರುವುದು ಅತ್ಯಂತ ಶೋಚನೀಯ.
*ಅಶೋಕ್ ಗಸ್ತಿ ಅವರ ಸಾಮಾಜಿಕ ನ್ಯಾಯವನ್ನು ಹತ್ತಿಕ್ಕಬೇಡಿ:*
ಈ ಹಿಂದೆ ಸವಿತಾ ಸಮಾಜದ ತಳಮಟ್ಟದ ನಿಷ್ಠಾವಂತ ಕಾರ್ಯಕರ್ತ ಅಶೋಕ್ ಗಸ್ತಿ ಅವರಿಗೆ ರಾಜ್ಯಸಭಾ ಸ್ಥಾನ ನೀಡಿದಾಗ ಇಡೀ ನಾಡು ಸಾಮಾಜಿಕ ನ್ಯಾಯವನ್ನು ಕೊಂಡಾಡಿತ್ತು. ಆದರೆ ಅವರ ಅಕಾಲಿಕ ಮರಣದ ನಂತರ ಆ ಸ್ಥಾನವನ್ನು ಮತ್ತೆ ಸಣ್ಣ ಸಮುದಾಯಗಳಿಗೆ ನೀಡದೆ ಪ್ರಬಲ ಜಾತಿಗಳ ಪಾಲಾಗುವಂತೆ ಮಾಡಿದ್ದು ಶೋಷಿತ ವರ್ಗಗಳ ಹಕ್ಕನ್ನು ಕಸಿದುಕೊಂಡಂತೆ. ಆ ಶೂನ್ಯಸ್ಥಾನವನ್ನು ಭರ್ತಿ ಮಾಡಬೇಕಾದ ಅನಿವಾರ್ಯತೆ ಈಗ ಎದುರಾಗಿದೆ.
*ಲಾಬಿ ಸಂಸ್ಕೃತಿಗೆ ತಕ್ಕ ಪಾಠ:*
ಸದ್ಯ ರಾಜ್ಯಸಭೆ ಮತ್ತು ವಿಧಾನಪರಿಷತ್ ಸ್ಥಾನಗಳು ತೆರವಾಗುತ್ತಿದ್ದು, ರಾಜಕೀಯ ವಲಯದಲ್ಲಿ ಭಾರಿ ಲಾಬಿ ಆರಂಭವಾಗಿದೆ. ರಾಜಕೀಯ ಪಕ್ಷಗಳು ಕೇವಲ ಪ್ರಭಾವಿ ಕೋಟ್ಯಧಿಪತಿಗಳ ಮತ್ತು ಪ್ರಬಲ ಜಾತಿಗಳ ಲಾಬಿಗೆ ಮಣಿದರೆ, ತಳಸಮುದಾಯಗಳು ತಮ್ಮ ಅಸ್ತಿತ್ವಕ್ಕಾಗಿ ಕ್ರಾಂತಿಕಾರಿ ಹೋರಾಟ ರೂಪಿಸಬೇಕಾಗುತ್ತದೆ ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್. ಹಡಪದ ಹಿರಿಯರಾದ ಹನುಮಂತಪ್ಪ ರಾಂಪೂರ. ಮತ್ತು ಸವಿತಾ ಸಮಾಜದ ಅನೇಕ ನಾಯಕರುಗಳು ಎಚ್ಚರಿಸಿದ್ದಾರೆ.

ಬಾಕ್ಸ್ ಹೇಳಿಕೆ
°°°°°°°°°°°°°°°
*ಕೃಷ್ಣಾ ಎಚ್. ಹಡಪದ ಅವರ ಕ್ರಾಂತಿಕಾರಿ ಎಚ್ಚರಿಕೆ:*
“ಸಮಾಜದ ಸುಗಮ ಚಲನೆಗೆ ನಮ್ಮ ಸಮಾಜದ ನಿರಂತರ ಸೇವೆ ಎಷ್ಟು ಮುಖ್ಯವೋ, ರಾಜ್ಯದ ನೀತಿ-ನಿರೂಪಣೆಯಲ್ಲಿ ನಮ್ಮ ರಾಜಕೀಯ ಧ್ವನಿಯೂ ಅಷ್ಟೇ ಮುಖ್ಯ. ಶ್ರಮಿಕ ವರ್ಗದವರನ್ನು ಕೇವಲ ರಸ್ತೆ ಬದಿಯ ಸೇವೆಗೆ ಸೀಮಿತಗೊಳಿಸಿ, ಶಾಸನಸಭೆಯ ಕುರ್ಚಿಗಳನ್ನು ತಾವೇ ಆಕ್ರಮಿಸಿಕೊಳ್ಳುವ ಪ್ರಬಲರ ಮನಸ್ಥಿತಿಯನ್ನು ನಾವು ಖಂಡಿಸುತ್ತೇವೆ. ಈ ಬಾರಿಯಾದರೂ ರಾಜಕೀಯ ಪಕ್ಷಗಳು ತಮ್ಮ ಆತ್ಮಸಾಕ್ಷಿಯನ್ನು ಜಾಗೃತಗೊಳಿಸಿಕೊಂಡು ಸವಿತಾ ಸಮಾಜಕ್ಕೆ ಮೇಲ್ಮನೆ ಪ್ರವೇಶದ ಹಕ್ಕನ್ನು ಗೌರವದಿಂದ ನೀಡಬೇಕು.”

ಕೃಷ್ಣಾ ಎಚ್. ಹಡಪದ
9845650612

Editor

Leave a comment