Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಗದಗ

ಗದಗ | ಶ್ರಮಿಕರ ಬೆವರಿನ ಬದುಕಿಗೆ ಆಸರೆಯಾದ ‘ದಾರಿದೀಪ ಸಂಸ್ಥೆ’: ಬೀದಿ ಬದಿ ವ್ಯಾಪಾರಿಗಳಿಗೆ ಛತ್ರಿ ವಿತರಣೆ

ಕರುನಾಡು ಘರ್ಜನೆ ಸುದ್ದಿ ಗದಗ 28:”ಬಿಸಿಲು-ಮಳೆಯೆನ್ನದೆ ರಸ್ತೆ ಬದಿಯಲ್ಲೇ ಕುಳಿತು ಬದುಕು ಕಟ್ಟಿಕೊಳ್ಳುವ ಶ್ರಮಿಕ ವರ್ಗದ ಕಷ್ಟಗಳು ವರ್ಣನಾತೀತ. ಇಂತಹ ಅಸಂಘಟಿತ ವಲಯದ ಬೀದಿ ಬದಿ ವ್ಯಾಪಾರಿಗಳ ಹಾಗೂ ವೃದ್ಧರ ಆರೋಗ್ಯ ಮತ್ತು ಸುರಕ್ಷತೆಗೆ ಸಮಾಜ ಮುಂಚೂಣಿಯಲ್ಲಿ ನಿಂತು ಆಸರೆಯಾಗಬೇಕಿದೆ” ಎಂದು…

ಕರುನಾಡು ಘರ್ಜನೆ ಸುದ್ದಿ ಗದಗ 28:”ಬಿಸಿಲು-ಮಳೆಯೆನ್ನದೆ ರಸ್ತೆ ಬದಿಯಲ್ಲೇ ಕುಳಿತು ಬದುಕು ಕಟ್ಟಿಕೊಳ್ಳುವ ಶ್ರಮಿಕ ವರ್ಗದ ಕಷ್ಟಗಳು ವರ್ಣನಾತೀತ. ಇಂತಹ ಅಸಂಘಟಿತ ವಲಯದ ಬೀದಿ ಬದಿ ವ್ಯಾಪಾರಿಗಳ ಹಾಗೂ ವೃದ್ಧರ ಆರೋಗ್ಯ ಮತ್ತು ಸುರಕ್ಷತೆಗೆ ಸಮಾಜ ಮುಂಚೂಣಿಯಲ್ಲಿ ನಿಂತು ಆಸರೆಯಾಗಬೇಕಿದೆ” ಎಂದು ದಾರಿದೀಪ ಮಹಿಳಾ ವಿವಿಧೋದ್ದೇಶಗಳ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಶಕುಂತಲಾ ಮುಳುಗುಂದ ಅವರು ಪ್ರತಿಪಾದಿಸಿದರು.
ನಗರದ ಸಿದ್ದರಾಮೇಶ್ವರ ನಗರ ಹಾಗೂ ಪ್ರಮುಖ ತರಕಾರಿ ಮಾರುಕಟ್ಟೆಯ ಆವರಣದಲ್ಲಿ ಸುಡು ಬಿಸಿಲಿನಲ್ಲಿಯೇ ವ್ಯಾಪಾರ ಮಾಡುವ ವೃದ್ಧರಿಗೆ ಹಾಗೂ ಮಹಿಳಾ ವ್ಯಾಪಾರಸ್ಥರಿಗೆ ದಾರಿದೀಪ ಮಹಿಳಾ ವಿವಿಧೋದ್ದೇಶಗಳ ಸಂಸ್ಥೆಯ ವತಿಯಿಂದ ಹಾಗೂ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರು, ಸಮಾಜ ಸೇವಕರೂ ಆದ ಕೃಷ್ಣಾ ಎಚ್. ಹಡಪದ ಅವರ ವಿಶೇಷ ಆರ್ಥಿಕ ಸೌಜನ್ಯ ಹಾಗೂ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದ್ದ ‘ಮಾನವೀಯತೆಯ ಕೊಡೆ (ಛತ್ರಿ)’ ವಿತರಣಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿ ಪ್ರಸ್ತುತ ದಿನಗಳಲ್ಲಿ ತಾಪಮಾನದ ಏರಿಳಿತ ಹಾಗೂ ಮುಂದಿನ ದಿನಗಳಲ್ಲಿ ಎದುರಾಗಲಿರುವ ಮಳೆಗಾಲದ ಮುನ್ಸೂಚನೆಯು ಬೀದಿ ಬದಿ ವ್ಯಾಪಾರಿಗಳ ದೈನಂದಿನ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ತಲೆಯ ಮೇಲೊಂದು ಸೂರಿಲ್ಲದೆ ವ್ಯಾಪಾರ ಮಾಡುವ ಇಂತಹ ಶ್ರಮಿಕ ವರ್ಗಕ್ಕೆ ಸಕಾಲದಲ್ಲಿ ನೆರವಾಗುವ ನಿಟ್ಟಿನಲ್ಲಿ ಈ ಕೊಡೆಗಳನ್ನು ವಿತರಿಸಲಾಗುತ್ತಿದೆ ಎಂದು ಶ್ರೀಮತಿ ಶಕುಂತಲಾ ಮುಳುಗುಂದ ಅವರು ಅತ್ಯಂತ ಭಾವನಾತ್ಮಕವಾಗಿ ನುಡಿದರು.
ಸಂಸ್ಥೆಯ ಪ್ರಮುಖ ಪದಾಧಿಕಾರಿಗಳಾದ ಜ್ಯೋತಿ ದೇಸಾಯಿ ಗೌಡರ, ವಿಜಯಲಕ್ಷ್ಮಿ ಅಸೂಟಿ, ರಾಜೇಶ್ವರಿ ಕುಲಕರ್ಣಿ, ಶಶಿಕಲಾ ಗಾವಡಿ ಹಾಗೂ ರಮ್ಯಾ ಗಾವಡಿ ಅವರು ಪ್ರತ್ಯೇಕವಾಗಿ ಮಾತನಾಡಿ, ಕೇವಲ ಭಾಷಣಗಳಿಗೆ ಸೀಮಿತವಾಗದೆ ತಳಮಟ್ಟದ ಜನರ ಕಷ್ಟಗಳಿಗೆ ಸ್ವಯಂಪ್ರೇರಿತರಾಗಿ ಸ್ಪಂದಿಸುವ ಕೃಷ್ಣಾ ಎಚ್ ಹಡಪದ ಅವರ ಸಮಾಜಮುಖಿ ಕಳಕಳಿ ಇತರರಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದಿ ಕಾರ್ಪೊರೇಷನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷರಾದ ನಾಗರಾಜ ಗಾವಡಿ ಅವರು ಮಾತನಾಡಿ, ಇಂತಹ ಸಣ್ಣ ಸಣ್ಣ ಸೇವಾ ಕಾರ್ಯಗಳು ದೊಡ್ಡ ಸಾಮಾಜಿಕ ಬದಲಾವಣೆಗೆ ಮುನ್ನುಡಿ ಬರೆಯುತ್ತವೆ ಎಂದರು.
ಪ್ರಮುಖರಾದ ದೇವಿ, ಲಕ್ಷ್ಮಿ ಸೇರಿದಂತೆ ಸಿದ್ದರಾಮೇಶ್ವರ ನಗರ ಮತ್ತು ತರಕಾರಿ ಮಾರುಕಟ್ಟೆಯ ನೂರಾರು ಮಹಿಳಾ ಹಾಗೂ ಪುರುಷ ಶ್ರಮಿಕರು ಉಪಸ್ಥಿತರಿದ್ದರು. ಕೊಡೆಗಳನ್ನು ಪಡೆದ ವೃದ್ಧರು ಹಾಗೂ ಬೀದಿ ಬದಿ ವ್ಯಾಪಾರಿಗಳು ದಾರಿದೀಪ ಮಹಿಳಾ ವಿವಿಧೋದ್ದೇಶಗಳ ಸಂಸ್ಥೆಯ ಮತ್ತು ಕೃಷ್ಣಾ ಎಚ್ ಹಡಪದ ಅವರ ಮಾನವೀಯ ಕಾರ್ಯವನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸಿದರು.
*ಬಾಕ್ಸ್ ಹೇಳಿಕೆ*
°°°°°°°°°°°°°°°°
*”ಶ್ರಮಿಕರ ಬೆವರಿನ ಹನಿಗೆ ಗೌರವ ನೀಡುವುದು ನಮ್ಮ ಕರ್ತವ್ಯ”*
“ಬೀದಿ ಬದಿಯ ವ್ಯಾಪಾರಿಗಳು ಸಮಾಜದ ಅತ್ಯಂತ ಪ್ರಾಮಾಣಿಕ ಶ್ರಮಿಕರು. ಸುಡು ಬಿಸಿಲು, ಬಿರುಗಾಳಿ, ಮಳೆಯ ನಡುವೆಯೂ ಅವರು ರಸ್ತೆ ಬದಿಯಲ್ಲಿ ಕುಳಿತು ದುಡಿಯುವುದು ಕೇವಲ ಹೊಟ್ಟೆಪಾಡಿಗಾಗಿ ಮಾತ್ರವಲ್ಲ, ನಮ್ಮೆಲ್ಲರ ದೈನಂದಿನ ಅಗತ್ಯಗಳನ್ನು ಪೂರೈಸಲು. ಇಂತಹ ಶ್ರಮಜೀವಿಗಳಿಗೆ, ವಿಶೇಷವಾಗಿ ವೃದ್ಧರಿಗೆ ಸುಡು ಬಿಸಿಲು ಮತ್ತು ಮುಂಬರುವ ಮಳೆಗಾಲದಲ್ಲಿ ಕನಿಷ್ಠ ಸುರಕ್ಷತೆ ಒದಗಿಸುವುದು ನಮ್ಮ ಸಾಮಾಜಿಕ ಜವಾಬ್ದಾರಿಯಾಗಿದೆ. ದಾರಿದೀಪ ಸಂಸ್ಥೆಯ ಸಹೋದರಿಯರೊಂದಿಗೆ ಸೇರಿ ಈ ಸಣ್ಣ ಸೇವೆ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ಮುಂದಿನ ದಿನಗಳಲ್ಲೂ ಇಂತಹ ಜನಪರ ಕಾರ್ಯಗಳು ನಿರಂತರವಾಗಿ ಮುಂದುವರಿಯಲಿವೆ.”

– ಕೃಷ್ಣಾ ಎಚ್. ಹಡಪದ
ಸಮಾಜ ಸೇವಕರು ಹಾಗೂ ಜಿಲ್ಲಾಧ್ಯಕ್ಷರು, ಗದಗ ಜಿಲ್ಲಾ ಸವಿತಾ ಸಮಾಜ

ವರದಿ- ಕೃಷ್ಣಾ ಎಚ್ ಹಡಪದ
9845650612

Editor

Leave a comment