Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಗದಗ

“ಬದಲಾಗು ಮನವೇ” ತಂಬಾಕು ಮುಕ್ತ ಜೀವನದಿಂದ ಮಾತ್ರ ಬಂಗಾರದಂತಹ ಕುಟುಂಬ ಸಾಧ್ಯ – ಡಾಕ್ಟರ್ ವಸುಂದರ ಕರೆ

ಕರುನಾಡು ಘರ್ಜನೆ ಸುದ್ದಿ ಗದಗ 31: “ತಂಬಾಕು ಸೇವನೆ ಕೇವಲ ಒಬ್ಬ ವ್ಯಕ್ತಿಯ ಆಯಸ್ಸನ್ನು ಮುಗಿಸುವುದಿಲ್ಲ, ಬದಲಿಗೆ ಒಂದು ಇಡೀ ಸುಂದರ ಸಂಸಾರವನ್ನು ಬೀದಿಗೆ ತರುತ್ತದೆ. ವ್ಯಸನ ಮುಕ್ತವಾಗಿ ಆರೋಗ್ಯ ಕಾಪಾಡಿಕೊಂಡಾಗ ಮಾತ್ರ ಪ್ರತಿಯೊಬ್ಬರ ಸಂಸಾರವೂ ಬಂಗಾರದಂತಾಗಲು ಸಾಧ್ಯ,” ಎಂದು ಕೆ.ಎಚ್…

ಕರುನಾಡು ಘರ್ಜನೆ ಸುದ್ದಿ ಗದಗ 31: “ತಂಬಾಕು ಸೇವನೆ ಕೇವಲ ಒಬ್ಬ ವ್ಯಕ್ತಿಯ ಆಯಸ್ಸನ್ನು ಮುಗಿಸುವುದಿಲ್ಲ, ಬದಲಿಗೆ ಒಂದು ಇಡೀ ಸುಂದರ ಸಂಸಾರವನ್ನು ಬೀದಿಗೆ ತರುತ್ತದೆ. ವ್ಯಸನ ಮುಕ್ತವಾಗಿ ಆರೋಗ್ಯ ಕಾಪಾಡಿಕೊಂಡಾಗ ಮಾತ್ರ ಪ್ರತಿಯೊಬ್ಬರ ಸಂಸಾರವೂ ಬಂಗಾರದಂತಾಗಲು ಸಾಧ್ಯ,” ಎಂದು ಕೆ.ಎಚ್ ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಮುದಾಯ ಆರೋಗ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾಕ್ಟರ್ ವಸುಂದರ ಅವರು ತಿಳಿಸಿದರು.
ದಾರಿದೀಪ ಮಹಿಳಾ ವಿವಿಧೋದ್ದೇಶಗಳ ಸಂಸ್ಥೆಯ ವತಿಯಿಂದ ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ “ಬದಲಾಗು ಮನವೇ” ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿ ತಂಬಾಕು ಮತ್ತು ಧೂಮಪಾನದಿಂದ ದೇಹದ ಒಳಗೆ ಏನೆಲ್ಲಾ ದಾರುಣ ಪರಿಣಾಮಗಳಾಗುತ್ತವೆ ಎಂಬುದನ್ನು ವೈಜ್ಞಾನಿಕವಾಗಿ ವಿವರಿಸಿದ ಡಾ. ವಸುಂದರ ಅವರು ಪ್ರಮುಖ ಅಪಾಯಗಳನ್ನು ಪಟ್ಟಿ ಮಾಡಿ ಹೇಳಿದ ಅವರು ಶ್ವಾಸಕೋಶ, ಬಾಯಿ, ಗಂಟಲು, ಜಠರ ಹಾಗೂ ಲಿವರ್ ಕ್ಯಾನ್ಸರ್‌ಗೆ ತಂಬಾಕಿನಲ್ಲಿರುವ ವಿಷಕಾರಿ ರಾಸಾಯನಿಕಗಳೇ ನೇರ ಕಾರಣ. ರಕ್ತನಾಳಗಳು ಕಿರಿದಾಗಿ ತಕ್ಷಣವೇ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗಿ ಹಾರ್ಟ್ ಅಟ್ಯಾಕ್ ಹಾಗೂ ಪಾರ್ಶ್ವವಾಯು ಸಂಭವಿಸುತ್ತದೆ. ದೀರ್ಘಕಾಲದ ಉಸಿರಾಟದ ತೊಂದರೆ ಹಾಗೂ ಅಸ್ತಮಾ ಕಾಯಿಲೆಗಳು ಜೀವಚ್ಛವವನ್ನಾಗಿ ಮಾಡುತ್ತವೆ ಎಂದರಲ್ಲದೆ ಧೂಮಪಾನಿಗಳು ಸಾಮಾನ್ಯ ಜನರಿಗಿಂತ ಸರಾಸರಿ 10 ವರ್ಷ ಮುಂಚಿತವಾಗಿಯೇ ಸಾವನ್ನಪ್ಪುತ್ತಿದ್ದಾರೆ.
ವ್ಯಸನಿಯು ಸೇದುವ ಹೊಗೆ ಕೇವಲ ಅವನಿಗೆ ಮಾತ್ರವಲ್ಲ, ಮನೆಯಲ್ಲಿರುವ ಹೆಂಡತಿ ಮತ್ತು ಅಮಾಯಕ ಮಕ್ಕಳ ಆರೋಗ್ಯವನ್ನೂ ಕಸಿದುಕೊಳ್ಳುತ್ತದೆ ಮನೆಯಲ್ಲಿ ತಂದೆ ಧೂಮಪಾನ ಮಾಡುವುದರಿಂದ ಮಕ್ಕಳಿಗೆ ನಿರಂತರ ಕೆಮ್ಮು, ಬ್ರಾಂಕೈಟಿಸ್, ನ್ಯುಮೋನಿಯಾ ಹಾಗೂ ಕಿವಿ ಸೋಂಕಿನ ಸಮಸ್ಯೆಗಳು ಕಾಡುತ್ತವೆ. ಗರ್ಭಿಣಿ ಮಹಿಳೆಯರು ಈ ಹೊಗೆಯನ್ನು ಉಸಿರಾಡಿದರೆ ಹುಟ್ಟುವ ಮಗು ತೂಕ ಕಳೆದುಕೊಳ್ಳುತ್ತದೆ ಅಥವಾ ಗರ್ಭಪಾತವಾಗುವ ಅಪಾಯವಿರುತ್ತದೆ. ತಂಬಾಕಿನ ದುಬಾರಿ ವೆಚ್ಚ ಹಾಗೂ ನಂತರದ ಕಾಯಿಲೆಗಳ ಚಿಕಿತ್ಸೆಯು ಇಡೀ ಕುಟುಂಬವನ್ನು ಸಾಲದ ಸುಳಿಗೆ ದೂಡುತ್ತದೆ. ಮನೆಯ ಯಜಮಾನ ರೋಗಗ್ರಸ್ತನಾದಾಗ ಹೆಂಡತಿ-ಮಕ್ಕಳು ಮಾನಸಿಕ ನಿರಾಸೆ ಮತ್ತು ಆತಂಕಕ್ಕೆ ಒಳಗಾಗುತ್ತಾರೆ ಎಂದು ಡಾಕ್ಟರ್ ವಸುಂದರ ಅವರು ಅತ್ಯಂತ ಕಳಕಳಿಯಿಂದ ತಿಳಿಸಿಕೊಟ್ಟರು.
ಕ್ರಾಂತಿ ಸೇನಾ ಜಿಲ್ಲಾಧ್ಯಕ್ಷರಾದ ಬಾಬು ಬಾಕಳೆ ಅವರು ಮಾತನಾಡಿ, “ಒಬ್ಬ ಪುರುಷ ತಂಬಾಕು ತ್ಯಜಿಸಿದರೆ ಆ ಮನೆಯಲ್ಲಿ ಹೆಣ್ಣುಮಕ್ಕಳ ಕಣ್ಣೀರು ನಿಲ್ಲುತ್ತದೆ. ಆ ಹಣ ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಕೆಯಾಗುತ್ತದೆ ಎಂದರು.
ದಾರಿದೀಪ ಮಹಿಳಾ ವಿವಿಧೋದ್ದೇಶಗಳ ಸಂಸ್ಥೆಯ ಅಧ್ಯಕ್ಷಣಿಯವರಾದ ಶ್ರೀಮತಿ ಶಕುಂತಲಾ ಮುಳುಗುಂದ ಅವರು ಮಾತನಾಡಿ, “ನಮ್ಮ ಸಂಸ್ಥೆಯ ಮೂಲ ಉದ್ದೇಶವೇ ಸಮಾಜದಲ್ಲಿ ನೆಮ್ಮದಿ ತರುವುದು. ಪ್ರತಿಯೊಬ್ಬರೂ ತಮ್ಮ ಮನಸ್ಸನ್ನು ಬದಲಾಯಿಸಿಕೊಂಡು ವ್ಯಸನದಿಂದ ದೂರ ಸರಿದರೆ, ಹೆಂಡತಿ-ಮಕ್ಕಳ ಮುಖದಲ್ಲಿ ನಗು ಅರಳುತ್ತದೆ. ಆರೋಗ್ಯವೇ ನಿಜವಾದ ಸಂಪತ್ತು ಎಂಬುದನ್ನು ಅರಿತು ಬಂಗಾರದಂತಹ ಜೀವನವನ್ನು ಪ್ರತಿಯೊಂದು ಕುಟುಂಬವೂ ನಡೆಸಬೇಕು,” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ. ಹಾಗೂ ದಾರಿದೀಪ ಮಹಿಳಾ ವಿವಿಧೋದ್ದೇಶಗಳ ಸಂಸ್ಥೆಯ ಪ್ರಮುಖ ಅಧಿಕಾರಿಗಳಾದ ಜ್ಯೋತಿ ದೇಸಾಯಿಗೌಡರ್, ವಿಜಯಲಕ್ಷ್ಮಿ ಅಸೂಟಿ, ಸುಪ್ರಿಯಾ ಅಯ್ಯನಗೌಡರ, ಸುರೇಖಾ, ಶೋಭಾ ಹಿರೇಮಠ, ಪ್ರತಿಭಾ ಇನಾಮತಿ. ದೀಪಾ ಬೆಳವಡಿ. ಹಾಗೂ ಸಂಸ್ಥೆಯ ಸರ್ವ ಸದಸ್ಯರು ಉಪಸ್ಥಿತರಿದ್ದು, ಪ್ರತಿಜ್ಞಾ ವಿಧಿ ಸ್ವೀಕರಿಸುವ ಮೂಲಕ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು.
*ಬಾಕ್ಸ್ ಹೇಳಿಕೆ*

*ವ್ಯಸನ ಮುಕ್ತ ಬದುಕಿನಿಂದ ಮಾತ್ರ ಹೆಣ್ಣುಮಕ್ಕಳ ಕಣ್ಣೀರು ನಿಲ್ಲಲು ಸಾಧ್ಯ: ಸುಪ್ರಿಯಾ ಅಯ್ಯನಗೌಡರ,*

ಯಾವ ಮನೆಯಲ್ಲಿ ಪುರುಷರು ತಂಬಾಕು ಮತ್ತು ಧೂಮಪಾನದಂತಹ ಘೋರ ವ್ಯಸನಗಳಿಗೆ ದಾಸರಾಗುತ್ತಾರೋ, ಆ ಮನೆಯ ಹೆಣ್ಣುಮಕ್ಕಳು ಮತ್ತು ಅಮಾಯಕ ಮಕ್ಕಳು ಜೀವಂತ ನರಕವನ್ನು ಅನುಭವಿಸುತ್ತಾರೆ. ತಂಬಾಕಿಗೆ ಸುಡುವ ಹಣ ಕೇವಲ ಹೊಗೆಯಾಗಿ ಹೋಗುವುದಿಲ್ಲ, ಅದು ಆ ಕುಟುಂಬದ ನೆಮ್ಮದಿ, ಆರೋಗ್ಯ ಮತ್ತು ಮಕ್ಕಳ ಭವಿಷ್ಯವನ್ನು ಸುಟ್ಟು ಬೂದಿ ಮಾಡುತ್ತದೆ. ತಂಬಾಕು ಮುಕ್ತವಾಗುವ ಮೂಲಕ ಪ್ರತಿಯೊಬ್ಬ ಪುರುಷನೂ ತನ್ನ ಹೆಂಡತಿ-ಮಕ್ಕಳಿಗೆ ನೆಮ್ಮದಿಯ ಬಂಗಾರದಂತಹ ಜೀವನವನ್ನು ಉಡುಗೊರೆಯಾಗಿ ನೀಡಬೇಕು. ನಮ್ಮ ದಾರಿದೀಪ ಸಂಸ್ಥೆಯ ‘ಬದಲಾಗು ಮನವೇ’ ಆಂದೋಲನವು ಕೇವಲ ಒಂದು ದಿನದ ಆಚರಣೆಯಲ್ಲ; ಇದು ಪ್ರತಿಯೊಂದು ಮನೆಯಲ್ಲಿ ನೆಮ್ಮದಿಯ ದೀಪ ಹಚ್ಚುವ ಸಂಕಲ್ಪವಾಗಿದೆ.”
– ಶ್ರೀಮತಿ ಸುಪ್ರಿಯಾ ಅಯ್ಯನಗೌಡರ,
ಪ್ರಮುಖರು, ದಾರಿದೀಪ ಮಹಿಳಾ ವಿವಿಧೋದ್ದೇಶಗಳ ಸಂಸ್ಥೆ, ಗದಗ

ವರದಿ.ಕೃಷ್ಣ ಎಚ ಹಡಪದ
9845650612

Editor

Leave a comment