ಕರುನಾಡು ಘರ್ಜನೆ ಸುದ್ದಿ ಗದಗ 01: “ಯಾರಿಗೆ ಸಂಕಷ್ಟ ಎದುರಾಗುತ್ತದೆಯೋ ಅಲ್ಲಿಗೆ ಪ್ರತ್ಯಕ್ಷವಾಗಿ ಧಾವಿಸಿ, ಕಷ್ಟದಲ್ಲಿರುವವರ ಕಣ್ಣೀರು ಒರೆಸುವ ಗುಣವುಳ್ಳ ಹಿರಿಯ ಸಚಿವರಾದ ಎಚ್.ಕೆ ಪಾಟೀಲ ಸಾಹೇಬರ ಸುಪುತ್ರರಾದ ಕೃಷ್ಣಗೌಡ್ರು ಪಾಟೀಲ ಅವರು ಇಂದಿನ ರಾಜಕೀಯ ವ್ಯವಸ್ಥೆಗೆ ಅತ್ಯಂತ ಆದರ್ಶಪ್ರಾಯರಾದ ಹೃದಯವಂತ ಜನನಾಯಕರಾಗಿದ್ದಾರೆ,” ಎಂದು ಗದಗಿನ ಸಾಮಾಜಿಕ ಕಾರ್ಯಕರ್ತರಾದ ಕೃಷ್ಣಾ ಎಚ್. ಹಡಪದ ಅವರು ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ.
ಇತ್ತೀಚೆಗೆ ಸುರಿದ ಭೀಕರ ಬಿರುಗಾಳಿ ಮಳೆಗೆ ಗದಗ ನಗರದ ಐತಿಹಾಸಿಕ ಶ್ರೀ.ವೀರನಾರಾಯಣ ದೇವಸ್ಥಾನದ ಹಿಂಭಾಗದ ಖಾನತೋಟ ರಸ್ತೆಯಲ್ಲಿ ಬೃಹತ್ ಮರ ಬಿದ್ದು, ಸಂಪೂರ್ಣ ಮನೆ ಜಖಂಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಹಿರಿಯ ಮುಖಂಡರಾದ ನಾಸೀರುದ್ದೀನ್ ಮುಲ್ಲಾ ಅವರ ನಿವಾಸಕ್ಕೆ ಕಾಂಗ್ರೆಸ್ ಯುವ ನಾಯಕರಾದ ಕೃಷ್ಣಗೌಡ್ರು ಪಾಟೀಲ ಅವರು ಖುದ್ದಾಗಿ ಭೇಟಿ ನೀಡಿ ಪರಿಸ್ಥಿತಿಯನ್ನು ವೀಕ್ಷಿಸಿದರು.
ಅವಘಡದಿಂದ ಸಂಪೂರ್ಣ ಜಖಂ ಆದ, ಮನೆ ಶೌಚಾಲಯ ಸ್ನಾನದ ಗೃಹ ಹಾಗೂ ಇಡೀ ಬದುಕನ್ನೇ ಕಳೆದುಕೊಂಡು ಕಣ್ಣೀರಲ್ಲಿ ಮುಳುಗಿದ್ದ ನಾಸೀರುದ್ದೀನ್ ಮುಲ್ಲಾ ಮತ್ತು ಅವರ ಕುಟುಂಬಸ್ಥರ ಕೈ ಹಿಡಿದು ಸಾಂತ್ವನ ಹೇಳಿದ ಸಾಹೇಬರು, “ನಾವಿದ್ದೇವೆ ನಿಮ್ಮ ಜೊತೆ, ಯಾವುದೇ ಕಾರಣಕ್ಕೂ ಧೈರ್ಯಗೆಡಬೇಡಿ” ಎಂದು ಬೆಂಬಲವಾಗಿ ನಿಲ್ಲುವ ಮೂಲಕ ಬಡ ಕುಟುಂಬದಲ್ಲಿ ಹೊಸ ಭರವಸೆ ಮತ್ತು ಆತ್ಮವಿಶ್ವಾಸ ಮೂಡಿಸಿದರು.
ಬರೀ ಸಾಂತ್ವನ ಹೇಳುವುದಷ್ಟಕ್ಕೆ ಸೀಮಿತವಾಗದ ಪಾಟೀಲ ಸಾಹೇಬರು, ಸ್ಥಳದಲ್ಲೇ ಇದ್ದುಕೊಂಡೇ ನಗರಸಭೆಯ ಪೌರಾಯುಕ್ತರಿಗೆ ದೂರವಾಣಿ ಮುಖಾಂತರ ಮಾತನಾಡಿ, “ತಕ್ಷಣವೇ ಅಧಿಕಾರಿಗಳನ್ನು ಸ್ಥಳ ಪರಿಶೀಲನೆಗೆ ಕಳುಹಿಸಿ, ಬಡ ಕುಟುಂಬದ ಮನೆಯ ಮೇಲ್ಚಾವಣಿ (ಸ್ಲಾಬ್) ದುರಸ್ತಿ, ನೂತನ ಶೌಚಾಲಯ ಮತ್ತು ಸ್ನಾನದ ಗೃಹ ನಿರ್ಮಾಣ ಹಾಗೂ ಇನ್ನುಳಿದ ಸಣ್ಣಪುಟ್ಟ ಹಾನಿಗಳಿಗೆ ನಗರಸಭೆಯ ವಿಶೇಷ ನಿಧಿಯಡಿ ತುರ್ತು ಪರಿಹಾರ ಒದಗಿಸಬೇಕು” ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
*ಆಡಳಿತ ವ್ಯವಸ್ಥೆಗೆ ಆದರ್ಶ:* ಕಚೇರಿಗಳಲ್ಲಿ ಕುಳಿತು ಕೇವಲ ಆದೇಶಿಸುವವರ ನಡುವೆ, ಬಡವರ ಬದುಕಿನ ಕಷ್ಟಕ್ಕೆ ಸ್ಪಂದಿಸಲು ಖುದ್ದಾಗಿ ಬಿಸಿಲನ್ನೂ ಲೆಕ್ಕಿಸದೆ ಸ್ಥಳಕ್ಕೆ ಬಂದು ಇಂಚಿಂಚೂ ಹಾನಿಯನ್ನು ವೀಕ್ಷಿಸಿದ ಅವರ ಬಡವರ ಪರವಾದ ಕಳಕಳಿ ಮತ್ತು ಕಾಳಜಿಯನ್ನು ಇಂದಿನ ಇಡೀ ಆಡಳಿತ ವ್ಯವಸ್ಥೆ ಕಣ್ಣುತೆರೆದು ನೋಡಬೇಕಾಗಿದೆ.”ಅಧಿಕಾರ ಇರಲಿ, ಇಲ್ಲದಿರಲಿ, ಸದಾ ಜನಸಾಮಾನ್ಯರ ಸುಖ-ದುಃಖಗಳಲ್ಲಿ ಭಾಗಿಯಾಗುವ ಇಂತಹ ಒಬ್ಬ ಸಹೃದಯಿ ಮತ್ತು ಜನಾನುರಾಗಿ ನಾಯಕನನ್ನು ಪಡೆದಿರುವುದು ನಮ್ಮ ಭಾಗದ ಹೆಮ್ಮೆಯಾಗಿದೆ. ನಾಸಿರುದ್ದೀನ್ ಮುಲ್ಲಾ ಅವರ ಕುಟುಂಬಕ್ಕೆ ಶೀಘ್ರದಲ್ಲೇ ನ್ಯಾಯ ಸಿಗುವಂತೆ ಅವರು ಕೈಗೊಂಡಿರುವ ಕ್ಷಿಪ್ರ ಕ್ರಮಕ್ಕೆ ಇಡೀ ಸಾರ್ವಜನಿಕ ವಲಯ ಹಾಗೂ ಸಮಾಜದ ಬಂಧುಗಳ ಪರವಾಗಿ ಕೋಟಿ ಕೋಟಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ,” ಎಂದು ಗದಗಿನ ಸಾಮಾಜಿಕ ಕಾರ್ಯಕರ್ತ ಕೃಷ್ಣಾ ಎಚ್. ಹಡಪದ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಖಾನತೋಟ ಓಣಿಯ ಗುರು ಹಿರಿಯರು ಪ್ರಮುಖ ನಾಯಕರುಗಳು ಮುಖಂಡರುಗಳು ಯುವ ನಾಯಕರುಗಳು ಮತ್ತು ವಿಶೇಷವಾಗಿ ಕೃಷ್ಣಗೌಡ್ರು ಪಾಟೀಲರ ನೂರಾರು ಅಭಿಮಾನಿಗಳು ಹಾಜರಿದ್ದರು
*ಬಾಕ್ಸ್ ಹೇಳಿಕೆ*
°°°°°°°°°°°°°°°°
*”ನಮ್ಮ ಓಣಿಯ ಕುಟುಂಬದ ಕಷ್ಟಕ್ಕೆ ದೇವರೆಂತೆ ಧಾವಿಸಿ ಬಂದು ಧೈರ್ಯ ತುಂಬಿದ ಜನನಾಯಕ ಕೃಷ್ಣಗೌಡ್ರು ಪಾಟೀಲ ಸಾಹೇಬರು!”*
ನಮ್ಮ ಖಾನತೋಟ ಓಣಿಯ ಹಿರಿಯರಾದ ನಾಸೀರುದ್ದೀನ್ ಮುಲ್ಲಾ ಅವರ ಮನೆಗೆ ಬಿರುಗಾಳಿ ಮಳೆಯಿಂದ ಬೃಹತ್ ಮರ ಬಿದ್ದು ಇಡೀ ಬದುಕು ಅಸ್ತವ್ಯಸ್ತಗೊಂಡಾಗ, ಇಡೀ ಓಣಿಯೇ ಮರುಕಪಟ್ಟಿತ್ತು. ಇಂತಹ ಕಡು ಕಷ್ಟದ ಸಮಯದಲ್ಲಿ ಸಚಿವರ ಸುಪುತ್ರರಾದ ಕೃಷ್ಣಗೌಡ್ರು ಪಾಟೀಲ ಸಾಹೇಬರು ನಮ್ಮ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ, ಸಂತ್ರಸ್ತ ಕುಟುಂಬಕ್ಕೆ ಆಸರೆಯಾಗಿ ನಿಂತಿರುವ ನಡೆ ನಿಜಕ್ಕೂ ಶ್ಲಾಘನೀಯ.
-ಅರುಣ ರಾಂಪೂರ
ಸ್ಥಳೀಯ ಮುಖಂಡರು, ಖಾನತೋಟ ಓಣಿ, ಗದಗ.
ಕೃಷ್ಣಾ ಎಚ್. ಹಡಪದ
9845650612