ಕರುನಾಡು ಘರ್ಜುನೆ ಸುದ್ದಿ ಗದಗ:ಅಸುಂಡಿ, ಜೂನ್ 2: ಅಸುಂಡಿ ಗ್ರಾಮದ ಸಮಸ್ತ ಮುಸ್ಲಿಂ ಬಾಂಧವರು, ಗ್ರಾಮ ಪಂಚಾಯಿತಿ ಹಿರಿಯರು ಹಾಗೂ ಗೌರವಾನ್ವಿತ ಮುಪ್ತಿ ಅಬ್ದುಸಮದಸಾಬ ಜಕಾತಿ (ಮಲ್ಲಸಮುದ್ರ) ಅವರ ಮಾರ್ಗದರ್ಶನದಲ್ಲಿ ದಿನಾಂಕ 02-06-2026 ರಂದು ನಡೆದ ಸಭೆಯಲ್ಲಿ ನೂತನ ಅಂಜುಮನ ಕಮೀಟಿ ಹಾಗೂ ಅಬ್ದುಲ್ ಕಲಾಂ ಶಾದಿ ಮಹಲ್ ಕಮೀಟಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಗ್ರಾಮದ ಹಿರಿಯರು, ಪಂಚರು ಹಾಗೂ ಜಮಾತಿನ ಸದಸ್ಯರು ಒಗ್ಗಟ್ಟಿನಿಂದ ಭಾಗವಹಿಸಿ, ಸಮಾಜದ ಅಭಿವೃದ್ಧಿ, ಶೈಕ್ಷಣಿಕ ಪ್ರಗತಿ, ಧಾರ್ಮಿಕ ಚಟುವಟಿಕೆಗಳ ಬಲವರ್ಧನೆ ಹಾಗೂ ಶಾದಿ ಮಹಲ್‌ನ ಸಮರ್ಪಕ ನಿರ್ವಹಣೆಯ ಉದ್ದೇಶದಿಂದ ನೂತನ ಕಮೀಟಿಯನ್ನು ರಚಿಸಿದರು.
ನೂತನ ಕಮೀಟಿಯ ಅಧ್ಯಕ್ಷರಾಗಿ ಹಸನಸಾಬ ತಾ. ಓಲೇಕಾರ ಅವರನ್ನು ಆಯ್ಕೆ ಮಾಡಲಾಯಿತು. ಸಮಾಜ ಸೇವೆಯಲ್ಲಿ ಸಕ್ರಿಯರಾಗಿರುವ ಅವರು ಗ್ರಾಮದ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಅವರ ನೇತೃತ್ವದಲ್ಲಿ ಸಮಾಜಮುಖಿ ಕಾರ್ಯಗಳು ಇನ್ನಷ್ಟು ಚುರುಕುಗೊಳ್ಳಲಿವೆ ಎಂಬ ವಿಶ್ವಾಸ ವ್ಯಕ್ತವಾಯಿತು.
ಉಪಾಧ್ಯಕ್ಷರಾಗಿ ಕಾಸೀಮಸಾಬ ಹು. ಭಾವಿಕಟ್ಟಿ, ಗೌರವಾಧ್ಯಕ್ಷರಾಗಿ ಬಾಬುಸಾಬ ನದಾಫ, ಕಾರ್ಯದರ್ಶಿಯಾಗಿ ಅಲ್ಲಾಭಕ್ಷಿ ಮಾ. ನದಾಫ, ಹಾಗೂ ಖಜಾಂಚಿಯಾಗಿ ರಾಜೇಸಾಬ ದಾ. ಬೆಳೆಕೊಪ್ಪ ಅವರನ್ನು ಆಯ್ಕೆ ಮಾಡಲಾಯಿತು.
ಜಮಾತಿನ ಸದಸ್ಯರು
ಯತಿಮಸಾಬ ಗುಳಗುಂದಿ
ಹುಜೇಪಾ ಡಾಲಾಯತ
ರಫೀಕ ಅ. ನದಾಫ
ಯಾಸೀನ ನ. ಭಾವಿಕಟ್ಟಿ
ರಫೀಕ ಶ. ಬಿಂಕದಕಟ್ಟಿ
ಇಸ್ಮಾಯಿಲ್ ಧಾರವಾಡ
ಮಾಬುಸಾಬ ಹು. ಕಾಗದಗಾರ
ಸಭೆಯಲ್ಲಿ ಭಾಗವಹಿಸಿದ ಪಂಚರು
ಮಾಬುಸಾಬ ಅ. ಡಾಲಾಯತ
ದೂದುಸಾಬ ಮ. ಜಮಾಲಖಾನವರ
ಹಸನಸಾಬ ರಾ. ನದಾಫ (H.R.)
ಗಫಾರಸಾಬ ರಾ. ಬೆಂತೂರ
ರಫೀಕ ಬುರಬುರೆ
ಬಬಲಿಸಾಬ ಕೊತಬಾಳ
ಕಾಸೀಮಸಾಬ ರಾ. ನದಾಫ
ಗ್ರಾಮದ ಹಿರಿಯರು ಹಾಗೂ ಯುವಕರು
ಶರೀಫಸಾಬ ಬಿಂಕದಕಟ್ಟಿ, ತಾಜುದ್ದೀನ್ ಹ. ಓಲೇಕಾರ, ಮಾಬುಸಾಬ ರಾ. ಬೆಂತೂರ, ಅಲ್ಲಾಭಕ್ಷಿ ಜಮಾಲಖಾನವರ, ರಫೀಕಸಾಬ ಬೆಟಗೇರಿ, ಯೂಸುಫಸಾಬ ಧಾರವಾಡ, ಬಾಬುಸಾಬ ಓಲೇಕಾರ, ಅಲ್ಲಾಸಾಬ ನದಾಫ, ಶರೀಫಸಾಬ ರಾ. ನದಾಫ, ಶರೀಫಸಾಬ ಮಾ. ಜಮಾಲಖಾನವರ, ಅಲ್ಲಾಸಾಬ ಬೆಂತೂರ, ಹುಸೇನಬಾಷಾ ಮೂತೇಖಾನವರ, ಫಕ್ರುಸಾಬ ಶೇತಸನದಿ, ಮಕಬೂಲ್ ಗುಳಗುಂದಿ, ರಿಯಾಜ್ ಬಾ. ಮುಲ್ಲಾನವರ, ರಾಜೇಸಾಬ ಬಿಂಕದಕಟ್ಟಿ, ರಾಜೇಸಾಬ ಶಿಗ್ಲಿ, ಮಹ್ಮದ್ ರಫೀಕ ಭಾವಿಕಟ್ಟಿ, ಮಕ್ತುಮಸಾಬ ಓಲೇಕಾರ, ಈಸೂಫ ಇ. ಭಾವಿಕಟ್ಟಿ, ಖಾಸೀಮಸಾಬ ಭಾವಿಕಟ್ಟಿ ಹಾಗೂ ಅಲ್ಲಾಸಾಬ ಕೊತಬಾಳ ಸೇರಿದಂತೆ ಅನೇಕರು
ಸಭೆಯಲ್ಲಿ ಉಪಸ್ಥಿತರಿದ್ದರು.
ಸಭೆಯ ಅಂತ್ಯದಲ್ಲಿ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿ, ಸಮಾಜದ ಹಿತಾಸಕ್ತಿ ಮತ್ತು ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವಂತೆ ಶುಭ ಹಾರೈಸಿದರು. ಅಸುಂಡಿ ಗ್ರಾಮದ ಮುಸ್ಲಿಂ ಸಮುದಾಯದಲ್ಲಿ ಒಗ್ಗಟ್ಟು, ಸಹಕಾರ ಮತ್ತು ಅಭಿವೃದ್ಧಿಯ ಹೊಸ ಅಧ್ಯಾಯಕ್ಕೆ ಈ ಕಮೀಟಿ ರಚನೆ ಮುನ್ನುಡಿಯಾಗಿದೆ ಎಂದು ಹಿರಿಯರು ಅಭಿಪ್ರಾಯಪಟ್ಟರು.
– ಕರುನಾಡು ಘರ್ಜನೆ ಸುದ್ದಿ 