Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
Uncategorized

ಉತ್ತರ ಕರ್ನಾಟಕಕ್ಕೆ ನಿರಂತರ ರಾಜಕೀಯ ವಂಚನೆ. ಹಿರಿಯ ಮುತ್ಸದ್ದಿ ಎಚ್. ಕೆ. ಪಾಟೀಲ್ ಅವರಿಗೆ ಮೊದಲ ಹಂತದಲ್ಲೇ ಮಂತ್ರಿ ಸ್ಥಾನ ನೀಡಬೇಕಾಗಿತ್ತು – ಕೃಷ್ಣಾ ಹಡಪದ ಆಕ್ರೋಶ

ಕರುನಾಡು ಘರ್ಜನೆ ಸುದ್ದಿ ಗದಗ 03: ನೂತನ ಮುಖ್ಯಮಂತ್ರಿ ಸನ್ಮಾನ್ಯ ಡಿ. ಕೆ. ಶಿವಕುಮಾರ್ ಅವರ ಸಚಿವ ಸಂಪುಟದ ಮೊದಲ ಹಂತದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಉತ್ತರ ಕರ್ನಾಟಕದ ಧೀಮಂತ ನಾಯಕ, ಅಪ್ರತಿಮ ಸಂಸದೀಯ ಪಟು ಶ್ರೀ ಎಚ್. ಕೆ.…

ಕರುನಾಡು ಘರ್ಜನೆ ಸುದ್ದಿ ಗದಗ 03: ನೂತನ ಮುಖ್ಯಮಂತ್ರಿ ಸನ್ಮಾನ್ಯ ಡಿ. ಕೆ. ಶಿವಕುಮಾರ್ ಅವರ ಸಚಿವ ಸಂಪುಟದ ಮೊದಲ ಹಂತದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಉತ್ತರ ಕರ್ನಾಟಕದ ಧೀಮಂತ ನಾಯಕ, ಅಪ್ರತಿಮ ಸಂಸದೀಯ ಪಟು ಶ್ರೀ ಎಚ್. ಕೆ. ಪಾಟೀಲ್ ಸಾಹೇಬರ ಹೆಸರು ಹೊರಗುಳಿದಿರುವುದು ಇಡೀ ಉತ್ತರ ಕರ್ನಾಟಕದ ಜನತೆಗೆ ತೀವ್ರ ಆಘಾತ ಮತ್ತು ಬೇಸರವನ್ನು ಉಂಟುಮಾಡಿದೆ. ರಾಜಕೀಯ ಸ್ಥಾನಮಾನ ಮತ್ತು ಸಮಗ್ರ ಅಭಿವೃದ್ಧಿ ಕಾರ್ಯಗಳಿಂದ ನಿರಂತರವಾಗಿ ವಂಚಿತವಾಗುತ್ತಲೇ ಬಂದಿರುವ ಉತ್ತರ ಕರ್ನಾಟಕದ ಸರ್ವತೋಮುಖ ಏಳಿಗೆಗಾಗಿ, ಈ ಭಾಗದ ಬಲವಾದ ಶಕ್ತಿಯಾಗಿರುವ ಎಚ್. ಕೆ. ಪಾಟೀಲ್ ಅವರಿಗೆ ಮೊದಲ ಹಂತದಲ್ಲೇ “ಉಪಮುಖ್ಯಮಂತ್ರಿ” ಹುದ್ದೆಯನ್ನು ನೀಡಿ ಗೌರವಿಸಬೇಕಾಗಿತ್ತು ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್. ಹಡಪದ ಅವರು ಪತ್ರಿಕಾ ಹೇಳಿಕೆಯ ಮೂಲಕ ತಮ್ಮ ತೀವ್ರ ಆಕ್ರೋಶ ಮತ್ತು ಹಕ್ಕೊತ್ತಾಯವನ್ನು ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಆದಾಯ ನೀಡಿದರೂ, ರಾಜಕೀಯ ಸ್ಥಾನಮಾನ ಹಾಗೂ ಪ್ರಮುಖ ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ವಂಚನೆಗೆ ಒಳಗಾಗುತ್ತಿರುವುದು ಇದೇ ಏಕೈಕ ಉತ್ತರ ಕರ್ನಾಟಕ ಭಾಗ. ಈ ಪ್ರಾದೇಶಿಕ ಅಸಮತೋಲನ ನಿವಾರಣೆಯಾಗಬೇಕಾದರೆ ಮತ್ತು ಈ ಭಾಗದ ಧ್ವನಿಗೆ ದೆಹಲಿ ಮಟ್ಟದಲ್ಲಿ ಮನ್ನಣೆ ಸಿಗಬೇಕಾದರೆ ಎಚ್. ಕೆ. ಪಾಟೀಲ್ ಅವರಂತಹ ಬಲಿಷ್ಠ ನಾಯಕನಿಗೆ ಉಪಮುಖ್ಯಮಂತ್ರಿ ಸ್ಥಾನ ಸಿಗಬೇಕಿರುವುದು ಅತ್ಯಂತ ಅನಿವಾರ್ಯವಾಗಿತ್ತು. ಹೈಕಮಾಂಡ್ ಮೊದಲ ಹಂತದಲ್ಲೇ ಈ ಮಹತ್ವದ ನಿರ್ಧಾರ ಕೈಗೊಳ್ಳಬೇಕಾಗಿತ್ತು. ಎಂದರಲ್ಲದೆ ಎಚ್. ಕೆ. ಪಾಟೀಲ್ ಅವರ ಕುಟುಂಬಕ್ಕೆ ದೇಶಪ್ರೇಮದ ರಕ್ತಗತ ಇತಿಹಾಸವಿದೆ. ಇವರ ಮುತ್ತಾತನವರು ಬ್ರಿಟಿಷರ ವಿರುದ್ಧ ಹೋರಾಡಿದ ಸಾಹಸಿಗಳು. ಇನ್ನು ಇವರ ತಂದೆಯವರಾದ ದಿವಂಗತ ಕೆ. ಎಚ್. ಪಾಟೀಲ್ ಅವರು ಉತ್ತರ ಕರ್ನಾಟಕದ ಭಾಗದಲ್ಲಿ ಕೃಷಿ, ನೀರಾವರಿ ಹಾಗೂ ಸಹಕಾರಿ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕಿದ ‘ಸಹಕಾರ ಚತುರ’. ಹಸಿರು ಕ್ರಾಂತಿಯ ಹರಿಕಾರರಾಗಿ ಇಡೀ ಭಾಗದ ರೈತರ ಬದುಕಿಗೆ ಬೆಳಕಾದ ಮಹನೀಯರ ಕುಟುಂಬದಿಂದ ಬಂದ ಎಚ್. ಕೆ. ಪಾಟೀಲ್ ಅವರಿಗೆ ಮೊದಲ ಹಂತದಲ್ಲೇ ಅತ್ಯುನ್ನತ ಆದ್ಯತೆ ಸಿಗಬೇಕಿತ್ತು. ಎಚ್. ಕೆ. ಪಾಟೀಲ್ ಅವರು ಇಡೀ ರಾಜ್ಯ ಮೆಚ್ಚಿದ ಆಡಳಿತಗಾರ. ಈ ಹಿಂದೆ ಅವರು ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳಂತಹ ಅತ್ಯಂತ ಪ್ರಮುಖ ಇಲಾಖೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ ದೇಶದಲ್ಲೇ ಅತಿ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿ ರಾಷ್ಟ್ರೀಯ ಪ್ರಶಸ್ತಿ ತಂದುಕೊಟ್ಟ ಕೀರ್ತಿ ಇವರದ್ದು. ಇಂತಹ ಕಳಂಕರಹಿತ ಮತ್ತು ಅನುಭವದ ಗಣಿಯನ್ನು ಸಂಪುಟದಿಂದ ದೂರ ಇಟ್ಟಿರುವುದು ಸರಿಯಲ್ಲ.
ಉತ್ತರ ಕರ್ನಾಟಕದ ಮಹಾದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿದಂತೆ ಈ ಭಾಗದ ಜ್ವಲಂತ ನೀರಾವರಿ ಸಮಸ್ಯೆಗಳ ಬಗ್ಗೆ ಸದನದಲ್ಲಿ ಗರ್ಜಿಸುವ ಏಕೈಕ ಧ್ವನಿ ಎಚ್. ಕೆ. ಪಾಟೀಲ್. ಪ್ರಾದೇಶಿಕ ಅಸಮತೋಲನವನ್ನು ನಿವಾರಿಸಲು ಇವರ ಆಡಳಿತಾತ್ಮಕ ದೂರದೃಷ್ಟಿ ಸರ್ಕಾರಕ್ಕೆ ಅತ್ಯಂತ ಅವಶ್ಯಕವಾಗಿದೆ. ಹಾಗಾಗಿ ಇವರಿಗೆ ಮುಕ್ತವಾಗಿ ಆಡಳಿತ ನಡೆಸುವ ದೊಡ್ಡ ಜವಾಬ್ದಾರಿ ನೀಡಬೇಕಿತ್ತು. ಇವರ ಅನುಭವವನ್ನು ಕಡೆಗಣಿಸಿರುವುದು ಇಡೀ ಉತ್ತರ ಕರ್ನಾಟಕದ ಜನಸಾಮಾನ್ಯರಲ್ಲಿ ತಪ್ಪು ಸಂದೇಶ ರವಾನಿಸಿದೆ.
*”ಕೊನೆಯದಾಗಿ ಹೈಕಮಾಂಡ್‌ಗೆ ಕ್ರಾಂತಿಕಾರಿ ಆಗ್ರಹ:”*
ಮೊದಲ ಹಂತದ ಸಂಪುಟ ರಚನೆಯಲ್ಲಿ ಹಿರಿಯರ ಅನುಭವ ಮತ್ತು ಉತ್ತರ ಕರ್ನಾಟಕದ ಬಲವಾದ ಧ್ವನಿಯನ್ನು ಕಡೆಗಣಿಸಿರುವುದು ಸರಿಯಾದ ಕ್ರಮವಲ್ಲ. ಹೈಕಮಾಂಡ್ ತಕ್ಷಣವೇ ತನ್ನ ತಪ್ಪು ನಿರ್ಧಾರವನ್ನು ತಿದ್ದಿಕೊಂಡು, ಮುಂದಿನ ಎರಡನೇ ಹಂತದ ವಿಸ್ತರಣೆಯಲ್ಲಾದರೂ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಎಚ್. ಕೆ. ಪಾಟೀಲ್ ಸಾಹೇಬರಿಗೆ ‘ಉಪಮುಖ್ಯಮಂತ್ರಿ’ (ಡಿ.ಸಿ. ಎಮ್) ಹುದ್ದೆ ಮತ್ತು ಅತ್ಯುನ್ನತ ಇಲಾಖೆಗಳನ್ನು ನೀಡಿ ಗೌರವಿಸಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಇಡೀ ಉತ್ತರ ಕರ್ನಾಟಕದಾದ್ಯಂತ ಜನಾಗ್ರಹ ಎದುರಿಸಬೇಕಾಗುತ್ತದೆ ಎಂದು ಗನದ ಜಿಲ್ಲೆಯ ಜನತೆಯ ಹಾಗೂ ಸಮಸ್ತ ಸವಿತಾ ಸಮಾಜದ ಪರವಾಗಿ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್. ಹಡಪದ. ಹಿರಿಯರಾದ ಹನುಮಂತಪ್ಪ ರಾಂಪೂರ. ಜಮ್ಮಣ್ಣ ಕಡಮೂರು. ರಾಜು ಮಾನೆ. ವಿಕಾಸ ಕ್ಷೀರಸಾಗರ್. ಆಂಜನೇಯ ಆದೋನಿ. ಹೇಮಂತ್ ವಡ್ಡೇಪಲ್ಲಿ. ಶ್ರೀನಿವಾಸ್ ಕೋಟೆಕಲ್ಲ. ಖಜಾಂಚಿ ಅರುಣ ರಾಂಪುರ. ಯುವ ನಾಯಕರಾದ ಎಲ್ಲಪ್ಪ ರಾಂಪೂರ. ಹಾಗೂ ಇನ್ನೂ ಅನೇಕರು ತೀವ್ರವಾಗಿ ಎಚ್ಚರಿಸಿದ್ದಾರೆ.
*ಬಾಕ್ಸ್ ಹೇಳಿಕೆ*
°°°°°°°°°°°°°°°°
*”63 ಶಾಸಕರನ್ನು ಗೆಲ್ಲಿಸಿದ ಉತ್ತರ ಕರ್ನಾಟಕಕ್ಕೆ ದ್ರೋಹ ಎಸಗಬೇಡಿ!”*
ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಕನಸು ಹೊತ್ತು ಈ ಭಾಗದ ಜನಸಾಮಾನ್ಯರು ಕಾಂಗ್ರೆಸ್ ಪಕ್ಷದ ಮೇಲೆ ಅತಿ ಹೆಚ್ಚು ನಂಬಿಕೆ ಇಟ್ಟು, ಬರೋಬ್ಬರಿ 63 ಶಾಸಕರನ್ನು ಆಯ್ಕೆ ಮಾಡಿ ಸರ್ಕಾರ ರಚಿಸಲು ಸಿಂಹಪಾಲು ನೀಡಿದ್ದಾರೆ. ಆದರೆ ಸಂಪುಟ ರಚನೆಯ ಮೊದಲ ಹಂತದಲ್ಲೇ ಉತ್ತರ ಕರ್ನಾಟಕದ ಈ ಐತಿಹಾಸಿಕ ಬೆಂಬಲವನ್ನು ಹೈಕಮಾಂಡ್ ಸಂಪೂರ್ಣವಾಗಿ ಕಡೆಗಣಿಸಿರುವುದು ಅತ್ಯಂತ ಅನ್ಯಾಯ ಮತ್ತು ಈ ಭಾಗದ ಜನತೆಗೆ ಮಾಡಿದ ಮಹಾದ್ರೋಹವಾಗಿದೆ.
ಇಡೀ ಉತ್ತರ ಕರ್ನಾಟಕದ ಧ್ವನಿ ಹಾಗೂ ಸಮಗ್ರ ಆಡಳಿತಾತ್ಮಕ ದೂರದೃಷ್ಟಿಯ ಜವಾಬ್ದಾರಿಯನ್ನು ಹೊರಬಲ್ಲ ಏಕೈಕ ಧೀಮಂತ ನಾಯಕ ಸನ್ಮಾನ್ಯ ಶ್ರೀ ಎಚ್. ಕೆ. ಪಾಟೀಲ್ ಸಾಹೇಬರು. ಇಂತಹ ಮುತ್ಸದ್ದಿಯನ್ನು ಸಚಿವ ಸಂಪುಟದ ಮೊದಲ ಹಂತದಲ್ಲೇ ‘ಉಪಮುಖ್ಯಮಂತ್ರಿ’ (ಡಿ. ಸಿ. ಎಮ್) ಹುದ್ದೆಗೆ ಪರಿಗಣಿಸದೆ ಇರುವುದು ಇಡೀ ಉತ್ತರ ಕರ್ನಾಟಕದ ಸ್ವಾಭಿಮಾನಕ್ಕೆ ಬಡಿದ ಕೊಡಲಿ ಪೆಟ್ಟಾಗಿದೆ. ಹೈಕಮಾಂಡ್ ತಕ್ಷಣವೇ ಈ ತಾರತಮ್ಯವನ್ನು ಸರಿಪಡಿಸದಿದ್ದರೆ, ಈ ಭಾಗದ ಜನತೆ ಮತ್ತು ಸಮಸ್ತ ಸವಿತಾ ಸಮಾಜವು ಸರ್ಕಾರದ ವಿರುದ್ಧ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ!
– ಕೃಷ್ಣಾ ಎಚ್. ಹಡಪದ
ಜಿಲ್ಲಾಧ್ಯಕ್ಷರು, ಗದಗ ಜಿಲ್ಲಾ ಸವಿತಾ ಸಮಾಜ

ಕೃಷ್ಣಾ ಎಚ್. ಹಡಪದ
9845650612

Editor

Leave a comment