ಕರುನಾಡು ಘರ್ಜನೆ ಸುದ್ದಿ ಕೊಪ್ಪಳ : ಜೂನ್ 5.ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ಜಿಲ್ಲಾ ಅಧ್ಯಕ್ಷರಾಗಿ ವಸಂತ ಡಿ. ಬೆಲ್ಲದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕೊಪ್ಪಳ ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ರಾಜ್ಯ ಅಧ್ಯಕ್ಷೆ ಶ್ರೀಮತಿ ಶೈಲಾ ಕೆ.ಡಿ.ಅವರ ನಿರ್ದೇಶನದಂತೆ.ಕಲಬುರಗಿ ವಿಭಾಗದ ಉಪಾಧ್ಯಕ್ಷ ನೀಲಕಂಠರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಿ ಈ ಹಿಂದೆ ಅಖ್ತರ್ ಅಲಿ ಮಕಾಂದಾರ್ ರಾಜೀನಾಮೆ ನೀಡಿ ತೆರವಾಗಿದ್ದ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಒಮ್ಮತದ ನಿರ್ಧಾರಕ್ಕೆ ಬಂದು ವಸಂತ ಡಿ.ಬೆಲ್ಲದ ಅವರನ್ನು ಅವಿರೋಧ ಆಯ್ಕೆ ಮಾಡಲಾಯಿತು ಎಂದು ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಲಾಲ್ ಸಾಬ್ ಎಂ.ಮನಿಯಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರಗಡಪ್ಪ ಹುಲಿಹೈದರ.ಕೊಪ್ಪಳ ಶಾಖಾ ಸಂಘದ ಅಧ್ಯಕ್ಷ ಶಿವಪ್ಪ ಗಿಣಿಗೇರಿ. ವಾಹಿದ್ ಖಾನ್ ಗಂಗಾವತಿ, ಶ್ರೀಮತಿ ಈರಮ್ಮ ಘಾಟಿ ಕುಕನೂರ.ಜಿಲ್ಲಾ ನಿರ್ದೇಶಕ ದ್ಯಾವಣ್ಣ ಕಾರಟಗಿ.ಕೊಪ್ಪಳ.ಗಂಗಾವತಿ.ನಗರಸಭೆಗಳ.
ಕುಷ್ಟಗಿ.ಕಾರಟಗಿ ಪುರಸಭೆಗಳ.
ಯಲಬುರ್ಗಾ.ಕುಕುನೂರು, ತಾವರಗೇರಾ,ಕನಕಗಿರಿ,ಭಾಗ್ಯನಗರ ಪಟ್ಟಣ ಪಂಚಾಯಿತಿಗಳ ಶಾಖಾ ನಿರ್ದೇಶಕರು,ಪದಾಧಿಕಾರಿಗಳು. ಸದಸ್ಯರು ಹಾಜರಿದ್ದರು.