ಕರುನಾಡು ಘರ್ಜನೆ ಸುದ್ದಿ ಗದಗ: ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಗದಗ ಜಿಲ್ಲಾ ಘಟಕದ 2026–28ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಎಲ್ಲ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಡಾ. ಕಳಕೇಶ್ ಉಳಕ್ಕಿ ಪ್ರಕಟಿಸಿದ್ದಾರೆ.
ಸಂಘದ ಗೌರವ ಅಧ್ಯಕ್ಷರಾಗಿ ಕುಮಾರ್ ಕಟ್ಟಿಮನಿ, ಅಧ್ಯಕ್ಷರಾಗಿ ಮಂಜುನಾಥ ಮರಾಠೆ, ಉಪಾಧ್ಯಕ್ಷರಾಗಿ ಚಂದ್ರು ಪಾಟೀಲ್ ಹಾಗೂ ಜಿಲ್ಲಾ ಉಪಾಧ್ಯಕ್ಷೆಯಾಗಿ ಶಿಲ್ಪಾ ಬಂಡಿಹಾಳ್ ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಾಂತ್ ಅಂಗಡಿ, ಜಂಟಿ ಕಾರ್ಯದರ್ಶಿಯಾಗಿ ಬಸವರಾಜ್ ಈರಣ್ಣವರ, ಖಜಾಂಚಿಯಾಗಿ ಪ್ರದೀಪ್ ಹಿರೇಮಠ್ ಆಯ್ಕೆಯಾಗಿದ್ದಾರೆ.
ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾಗಿ ಧರ್ಮೇಂದ್ರ ಇಟಗಿ, ಶೇಖಸಾಬ್ ಕಾತರಕಿ, ಪ್ರವೀಣ್‌ಕುಮಾರ್ ಕನ್ಯಾಳ್, ಜಗದೀಶ್ ಬಳಿಗೇರ್, ಗಾಳೆಪ್ಪ ಹರಿಜನ್ ಹಾಗೂ ಶಿವಯೋಗಿ ಭಾವಿ ಅವರು ಆಯ್ಕೆಯಾಗಿದ್ದಾರೆ.
ಅವಿರೋಧವಾಗಿ ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ಜಿಲ್ಲೆಯ ಪತ್ರಕರ್ತರು ಅಭಿನಂದನೆ ಸಲ್ಲಿಸಿದ್ದು, ಸಂಘದ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ನೂತನ ತಂಡ ಕಾರ್ಯನಿರ್ವಹಿಸಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.