ಕರುನಾಡು ಘರ್ಜನೆ ಸುದ್ದಿ ಕೋಲ್ಕತ್ತಾ: ಬಂಗಾಳದ ಬಿರ್ಭಮ್‌ನಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಮರಳು ಮಾಫಿಯಾ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ಪೊಲೀಸರು (Bengal Police) ನಿವೃತ್ತ ಸರ್ಕಾರಿ ಬಸ್ ಚಾಲಕನ (ಈಗ ಕಲ್ಲು ವ್ಯಾಪಾರಿ) ಮನೆ ಮೇಲೆ ದಾಳಿ ನಡೆಸಿದ ವೇಳೆ ಭಾರೀ ಸಂಪತ್ತನ್ನ ಕಂಡು ಬೆಚ್ಚಿಬಿದ್ದಿದ್ದಾರೆ.
ಹೌದು. ನಿವೃತ್ತ ಸರ್ಕಾರಿ ಬಸ್ ಚಾಲಕನ (Retired Bus Driver) ಮನೆ ಮೇಲೆ ದಾಳಿ ನಡೆಸಿದ ಬಂಗಾಳ ಪೊಲೀಸರು ಕನಿಷ್ಠ 28.5 ಕೋಟಿ ನಗದು, 15 ಚಿನ್ನ ಜಪ್ತಿಮಾಡಿದ್ದಾರೆ. ಜಪ್ತಿ ಮಾಡಿದ ಚಿನ್ನದ ಮೌಲ್ಯ 20 ಕೋಟಿ ರೂ.ಗಿಂತಲೂ ಅಧಿಕ ಎಂದು ಅಂದಾಜಿಸಲಾಗಿದೆ.ಈ ಪ್ರಕರಣ ಸಂಬಂಧ ಪೊಲೀಸರು ನಿವೃತ್ತ ಬಸ್ ಚಾಲಕ ಮಿನಾರ್ ಮತ್ತು ಅವರ ಮಗನನ್ನ ಬಂಧಿಸಿದ್ದಾರೆ. ಜೊತೆಗೆ ಇತರ ಸ್ಥಳಗಳಲ್ಲೂ ಹಣ ಸಂಗ್ರಹಿಸಲಾಗಿದೆಯೇ ಅನ್ನೋದ್ರ ಬಗ್ಗೆ ಪ್ರಶ್ನೆ ಮಾಡಲಾಗ್ತಿದೆ. ಮಿನಾರ್, ಎಸ್ಕೇಪ್ ಆಗಿರುವ ಟಿಲ್ಲು ಮೊಂಡಲ್ ಅಲಿಯಾಸ್ ಮೊಹಮ್ಮದ್ ನಜೀಬುದ್ದೀನ್ ಅವರ ಸೋದರ ಮಾವ
ಟಿಲ್ಲು ಮಂಡಲ್ ಬಿರ್ಭಮ್‌ನ ಕ್ಷೇತ್ರದ ತೃಣಮೂಲ ಕಾಂಗ್ರೆಸ್ (Birbhum Trinamool Congress) ಮುಖ್ಯಸ್ಥ ಅನುಬ್ರತಾ ಮೊಂಡಲ್ ಅವರ ಆಪ್ತ. ಸರ್ಕಾರಿ ಬಸ್ ಚಾಲಕನ ವೃತ್ತಿಯಿಂದ ನಿವೃತ್ತಿ ಆದ ಬಳಿಕ ಕಲ್ಲು ವ್ಯಾಪಾರದಲ್ಲಿ ವಹಿವಾಟುಗಳಲ್ಲಿ ಬಲವಾದ ಹಿಡಿತ ಹೊಂದಿದ್ದರು ಎಂದು ಹೇಳಲಾಗ್ತಿದೆ.
ಈ ಹಿಂದೆ ಕೂಡ ಮಿನಾರ್ ಅವರನ್ನ ದನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದ ಬಹುಕೋಟಿ ಹಗರಣದಲ್ಲಿ ಸಿಬಿಐ ವಿಚಾರಣೆ ನಡೆಸಿತ್ತು. ಟಿಲ್ಲು ಮಂಡಲ್ ಬಿರ್ಭಮ್‌ನ ಕ್ಷೇತ್ರದ ತೃಣಮೂಲ ಕಾಂಗ್ರೆಸ್ (Birbhum Trinamool Congress) ಮುಖ್ಯಸ್ಥ ಅನುಬ್ರತಾ ಮೊಂಡಲ್ ಅವರ ಆಪ್ತ. ಸರ್ಕಾರಿ ಬಸ್ ಚಾಲಕನ ವೃತ್ತಿಯಿಂದ ನಿವೃತ್ತಿ ಆದ ಬಳಿಕ ಕಲ್ಲು ವ್ಯಾಪಾರದಲ್ಲಿ ವಹಿವಾಟುಗಳಲ್ಲಿ ಬಲವಾದ ಹಿಡಿತ ಹೊಂದಿದ್ದರು ಎಂದು ಹೇಳಲಾಗ್ತಿದೆ.
ಈ ಹಿಂದೆ ಕೂಡ ಮಿನಾರ್ ಅವರನ್ನ ದನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದ ಬಹುಕೋಟಿ ಹಗರಣದಲ್ಲಿ ಸಿಬಿಐ ವಿಚಾರಣೆ ನಡೆಸಿತ್ತು.