Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಗದಗ

ತಾ ಪಂ ಇಓ ಪ್ರಭಾರ ಹೆಚ್ ಎಸ್ ಜಿನಗಿ ಮಾತೃ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಬೇಕೆಂದು: ರವಿ ವಗ್ಗನವರ ಆಗ್ರಹ

ಕರುನಾಡು ಘರ್ಜನೆ ಸುದ್ದಿ ಗದಗ::ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ (EO) ಹುದ್ದೆಯ ಹೆಚ್ಚುವರಿ/ಪ್ರಭಾರ ಜವಾಬ್ದಾರಿಯಲ್ಲಿದ್ದ ಹೆಚ್ ಎಸ್ ಜಿನಗಿ ರವರನ್ನು ಆ ಹುದ್ದೆಯಿಂದ ಬಿಡುಗಡೆಗೊಳಿಸಿ, ಅವರ ಮಾತೃ ಇಲಾಖೆಯಾದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಗೆ ಹಿಂಪಡೆಯುವ ಕುರಿತ ಅಧಿಕೃತ ಆಡಳಿತಾತ್ಮಕ…

ಕರುನಾಡು ಘರ್ಜನೆ ಸುದ್ದಿ ಗದಗ::ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ (EO) ಹುದ್ದೆಯ ಹೆಚ್ಚುವರಿ/ಪ್ರಭಾರ ಜವಾಬ್ದಾರಿಯಲ್ಲಿದ್ದ ಹೆಚ್ ಎಸ್ ಜಿನಗಿ ರವರನ್ನು ಆ ಹುದ್ದೆಯಿಂದ ಬಿಡುಗಡೆಗೊಳಿಸಿ, ಅವರ ಮಾತೃ ಇಲಾಖೆಯಾದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಗೆ ಹಿಂಪಡೆಯುವ ಕುರಿತ ಅಧಿಕೃತ ಆಡಳಿತಾತ್ಮಕ ಪತ್ರವನ್ನ ಸರ್ಕಾರದ ಅಧೀನ ಕಾರ್ಯದರ್ಶಿ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಬೆಂಗಳೂರು ರವರು ಆಯುಕ್ತರು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಬೆಂಗಳೂರು ರವರಿಗೆ ದಿನಾಂಕ 16-06-2026 ರಂದು ಆದೇಶಿಸಿರುತ್ತಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗದಗ ಜಿಲ್ಲಾ ಕಾರ್ಯಾಧ್ಯಕ್ಷ ರವಿ ವಗ್ಗನವರ ತಿಳಿಸಿದರು.

               ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೆಚ್. ಎಸ್. ಜಿನಗಿ, ಪಶುವೈದ್ಯಕೀಯ ಪರಿವೀಕ್ಷಕರು/ಅಧಿಕಾರಿಗಳು, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಗದಗ ಇವರನ್ನು ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ (EO) ಹುದ್ದೆಗೆ ಹೆಚ್ಚುವರಿ ಪ್ರಭಾರದಲ್ಲಿ ನೇಮಕ ಮಾಡಲಾಗಿತ್ತು. ಪ್ರಸ್ತುತ ಆಡಳಿತಾತ್ಮಕ ಹಿತದೃಷ್ಟಿಯಿಂದ ಹಾಗೂ ಇಲಾಖಾ ನಿಯಮಾವಳಿಗಳಂತೆ ಇವರನ್ನು ತಾಲೂಕು ಪಂಚಾಯತಿಯ ಪ್ರಭಾರ ಜವಾಬ್ದಾರಿಯಿಂದ ಮುಕ್ತಗೊಳಿಸಿ ಮೂಲ ಇಲಾಖೆಗೆ ಹಿಂಪಡೆಯಲು ಆಗ್ರಹಿಸಿ ಅನೇಕ ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರದ ಮುಖಾಂತರ ಗಮನಕ್ಕೆ ತರಲಾದರು ಯಾವುದೇ ಪ್ರಯೋಜನವಾಗಿರಲಿಲ್ಲ ಎಂದರು.

ಜುಲೈ- 23 ರಂದು ಮಧ್ಯಾಹ್ನ 02:20

ಗಂಟೆಗೆ ಗದಗ ನಗರದ ಪಾಲಿ ಕ್ಲಿನಿಕ್ ಪಶು ವೈದ್ಯಕೀಯ ಇಲಾಖೆಗೆ ಹೋಗಿದ್ದು, ಅಲ್ಲಿ ಪಾಲಿ ಕ್ಲಿನಿಕ್ ಕೋಠಡಿ ಸಂಖ್ಯೆ: 15 ರಲ್ಲಿ ಉಪನಿರ್ದೇಶಕರನ್ನು ಭೇಟಿಯಾಗಲು ಹೋದಾಗ ಉಪನಿರ್ದೇಶಕರು, ಆ ದಿವಸ ಬರದ

ಕಾರಣ ಅವರಿಗೆ ಭೇಟಿಯಾಗಲು ಆಗಲಿಲ್ಲಾ. ಆದರೆ ಅದೇ ವೇಳೆಗೆ ಅಲ್ಲಿ ಪಶು ವೈದ್ಯಾಧಿಕಾರಿ ಡಾ.ಹೀರಾಲಾಲ ಎಸ್. ಜಿನಗಿ ಇವರು ಏಕಾ ಏಕಿ ನನ್ನ ಮೇಲೆ ಹಿಂದಿನ ದ್ವೇಷ ಇಟ್ಟುಕೊಂಡು ನನ್ನ ಮೇಲೆ ಹಲ್ಲೆ ಮಾಡಿದ್ದು ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಲೇ ಸೂಳೆ ಮಗನೇ ನನ್ನ ಮೇಲೆ ನೀನು ಸರಕಾರದಿಂದ ನನ್ನ ವಿರುದ್ಧ ಆದೇಶ ಮಾಡಿಸಿಕೊಂಡು ಬರುತ್ತೀಯಾ ಲೇ ಲೋಫರ್ ಎಂದು ಬೈದಾಡಿ ನಿನ್ನನ್ನು ಜೀವ ಸಮೇತ ಮುಗಿಸುತ್ತೇನೆ, ನನ್ನ ನೌಕರಿ ಹೋದರು ಚಿಂತೆ ಇಲ್ಲಾ ಅಂತಾ ಕೋಠಡಿಯಲ್ಲಿದ್ದ ಕುರ್ಚಿಗಳನ್ನು ಎತ್ತಿ ಎಸೆಯಲು ಬಂದು ಜೀವಕ್ಕೆ ಹಾನಿ ಮಾಡುವ ರೀತಿಯಲ್ಲಿ ನನ್ನನ್ನು ಎಳೆದಾಡಿ ಅಲ್ಲಿಯೇ ಇದ್ದ ಡಾ. ಆರ್.ವಾಯ್, ಗುರಿಕಾರ, ಹಾಗೂ ಡಾ. ಸತೀಶ ಕಟ್ಟಿಮನಿ, ಡಾ.ಪ್ರಕಾಶ

ಜಟ್ಟೆಣ್ಣವರ ಹಾಗೂ ಇಲಾಖೆಯ ಸಿಬ್ಬಂಧಿಯಾದ ಕಲ್ಮೇಶ ಹಿರೇಮಠ ಇವರು ಬಂದು ನನ್ನನ್ನು ಬಿಡಿಸಿಕೊಂಡು ಕೊಠಡಿಯಿಂದ ಹೊರಗೆ ಕರೆದುಕೊಂಡು ಬಂದರು. ಇಷ್ಟಾದರೂ ಸಹಿತ ಹೀರಾಲಾಲ ಜಿನಗಿ ವಿರುದ್ದ ಉಪನಿರ್ದೇಶಕ ಅಧಿಕಾರಿ ಪಶು ಅಧಿಕಾರಿಗಳು ಗದಗ ರವರಿಗೆ ದೂರು ನೀಡಿದರು ಯಾವುದೇ ಕ್ರಮ ಜರುಗಿಸಿಲ್ಲ.   ನನಗೆ ಜೀವ ಬೇದರಿಕೆ ಹಾಕಿದ್ದು ಅವರಿಂದ ನನಗೆ ಜೀವ ಭಯವಿದೆ.ನನ್ನ ಮೇಲೆ ಆಗಿರುವ ಘಟನೆಗೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ಉನ್ನತ ಅಧಿಕಾರಿಗಲ್ಲಿ ಮನವಿ ಮಾಡಿದರು.

ಪತ್ರಿಕಾ ಗೋಷ್ಠಿ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಶಂಕರಗೌಡ್ರು ಜಯನಗೌಡ್ರ ಉಪಾಧ್ಯಕ್ಷ ಗಿರೀಶ ಹೊಸಮನಿ, ತಾಲೂಕ ಪ್ರಧಾನ ಕಾರ್ಯದರ್ಶಿ ಶಂಕ್ರಗೌಡ ಪಾಟೀಲ, ಜಿಲ್ಲಾ ಕಾರ್ಯದರ್ಶಿ ಈಶ್ವರ ಗದಗಿನ, ತಾಲೂಕ ಕಾರ್ಯದರ್ಶಿ ರೇವಣಸಿದ್ದಪ್ಪ ಬೀಡನಾಳ, ತಾಲೂಕ ಸಂಚಾಲಕ ಶರಣಪ್ಪ ಕಮ್ಮಾರ, ತಾಲೂಕ ಕಾರ್ಯಾಧ್ಯಕ್ಷ ಗೂಳಪ್ಪ ಗುಡದೂರ ಸೇರಿದಂತೆ ಇತರರಿದ್ದರು.

Editor

Leave a comment