ಕರುನಾಡು ಘರ್ಜನೆ ಸುದ್ದಿ ಹುಬ್ಬಳ್ಳಿ:- ಅಸ್ಸಾಂನಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ನಿರಂತರ ಧಾರಾಕಾರ ಮಳೆ ಮತ್ತು ಪ್ರವಾದಿಂದ ನೂರಾರು ಮಂದಿ ಮತ್ತು ದನ ಕರಗಳನ್ನು ನೀರಲ್ಲಿ ಸತ್ತು ಕೊಚ್ಚಿ ಹೋಗಿದ್ದವು ಊರಲ್ಲಿ ಕಲುಷಿತ ವಾತಾವರಣ ನಿರ್ಮಾಣ ಆಗಿದೆ ಇದು ಸಣ್ಣ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಇದು ಒಂದು ದೊಡ್ಡ ಸಮಸ್ಯ ಆಗುವುದರಿಂದ ಆರೋಗ್ಯದ ಮೇಲೆ ಕೆಟ್ಟು ಪರಿಣಾಮ ಬಿದ್ದು ಆಸ್ಪತ್ರೆಯಲ್ಲಿ ದಾಖಲಿಸಲಾಗುವ ಸಂಭವವಿದೆ. ಸುಮಾರು 810 ಹಳ್ಳಿಗಳು ನೀರಿನ ಮೇಲೆ ತೇಲ್ತಾ ಇದಾವೆ ನೀರಿನ ರಭಸಕ್ಕೆ ಮನೆ ಮತ್ತು ಬಹಳಷ್ಟು ವಾಹನಗಳು ನೀರಲ್ಲಿ ಕೊಚ್ಚಿ ಹೋದವು ಇದಕ್ಕೆ ತಕ್ಷಣ ಕೇಂದ್ರ ಮೋದಿ ಸರ್ಕಾರ ಅಸ್ಸಾಂ ಸರ್ಕಾರಕ್ಕೆ 10 ಸಾವಿರು ಕೋಟಿ ಹಣವನ್ನು ಬಿಡುಗಡೆ ಮಾಡಬೇಕು ಎಂದು ರಾಷ್ಟ್ರೀಯ ಅಹಿಂದ ಸಂಘಟನೆಯ ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷರಾದ ಶ್ರೀ ಬಾಬಾಜಾನ್ ಮುಧೋಳ್ ಹಾಗೂ ರಾಷ್ಟ್ರೀಯ ಅಹಿಂದ ಸಂಘಟನೆಯ ಅಧ್ಯಕ್ಷರಾದ ಶ್ರೀ ಮುತ್ತಣ್ಣ ಶಿವಳ್ಳಿ ಕೇಂದ್ರ ಮೋದಿ ಸರ್ಕಾರಕ್ಕೆ ಆಗ್ರಹಿಸಿದರು. ಅಸ್ಸಾಂ ಸರಕಾರ ನೊಂದಂತ ಜನರಿಗೆ ತಾತ್ಕಾಲಿಕ ಮನೆಯ ಷಡ್ ಹಾಕಿ ಕೊಡಬೇಕು ಆ ಕುಟುಂಬದವರಿಗೆ ಬದುಕಲಿಕ್ಕೆ ಅವಕಾಶ ಮಾಡಿಕೊಡಬೇಕು ಜೊತೆಗೆ ಪ್ರತಿ ಕುಟುಂಬಕ್ಕೆ ರೇಷನ್ ಕಿಟ್ಟಿನ ವ್ಯವಸ್ಥೆ ಮತ್ತು ಹೆಚ್ಚಿನ ಗಂಜಿ ಕೇಂದ್ರಗಳು ಹಾಗೂ ಔಷಧಿನ ಉಪ್ಚರಗಳು ನಿರ್ಮಿಸಿಬೇಕು ಇಲ್ಲಿಯ ಯಾವುದೇ ಜಾತಿ ಧರ್ಮ ನೋಡದೆ ನಿಸ್ವಾರ್ಥ ಸೇವೆ ಮಾಡಬೇಕು ಇಂತಹ ಕೆಟ್ಟ ಪರಿಸ್ತಿತಿದಲ್ಲಿ ದೇಶದ ಉದ್ಯೋಪತಿಗಳು, ಎನ್ ಜಿ ಓ ಗಳು ನೊಂದಂತಹ ನಿರ್ಗತಕರಿಗೆ ಹಾಗೂ ವೃದ್ಧಜೀವಿಗಳಿಗೆ ಸಹಾಯ ಮಾಡಬೇಕು. ಜೊತೆಗೆ ಅಲ್ಲಿಯ ಆಸ್ಪತ್ರೆ, ಶಾಲಾ, ಕಾಲೇಜುಗಳಲ್ಲಿ ಪ್ರವಾಹ ಬರುವುದರಿಂದ ಧ್ವಂಸಗೊಂಡಿದೆ ಅದಕ್ಕೆ ಅಸ್ಸಾಂ ಸರ್ಕಾರ ತಕ್ಷಣ ಹಣ ಬಿಡುಗಡೆ ಮಾಡಿ ಪುನರ ದುರಸ್ತಿಗೊಳಿಸಬೇಕು ಎಂದು ಮುಧೋಳ ಸರ್ಕಾರಕ್ಕೆ ಒತ್ತಾಯಿಸಿದರು. ಇದೊಂದು ಪುಣ್ಯದ ಕೆಲಸ “ಜನ ಸೇವೆ ಮತ್ತು ಜನಾರ್ಧನ ಸೇವೆ” ಮಾಡುವುದರಿಂದ ಅಲ್ಲಾ ಮತ್ತು ಈಶ್ವರ ಕೂಡ ಮೆಚ್ಚುತ್ತಾನೆ ಈಗಾಗಲೇ ರಬಸದ ಮಳೆ ಮತ್ತು ಪ್ರವಾಹ ಬರುವುದರಿಂದ 35 ಸಾವಿರ ಹೆಕ್ಟರ್ ಕ್ಕಿಂತ ಹೆಚ್ಚು ರೈತರು ಬೆಳೆದಂತಹ ಬೆಳೆಗಳನ್ನು ಸಂಪೂರ್ಣ ನಷ್ಟ ಆಗಿದೆ ಅದರ ಜೊತೆಗೆ 2,90,ಸಾವಿರ ಜನ ಈ ಪ್ರವಾಹದಿಂದ ಸಿಲುಕಿಕೊಂಡಿದ್ದಾರೆ ಈ ನೀರಿಂದ ಆಸಾಮಿನ ಸಧ್ಯ ಪರಿಸ್ಥಿತಿ ಬಹಳ ಕೆಟ್ಟು ಆಗಿದೆ ಎಂದು ಇತರ ಸಂಘಟನೆಯ ಮುಖಂಡರಗಳಾದ ಶ್ರೀ ಬಾಬಾಜಾನ್ ಮುಧೋಳ್, ಮುತ್ತಣ್ಣ ಶಿವಳ್ಳಿ, ಮೌಲಾ ಸಾಬ್ ನದಾಫ್ , ಗುರನಗೌಡ ಪಾಟೀಲ್ , ಶಮ್ ಶೀರ್ ಗಂಜೆವಾಲೆ , ಯೂಸುಫ್ ಬಳ್ಳಾರಿ , ರಮೇಶ್ ಭೋಸ್ಲೆ , ಕೇಶವ್ ಮೂರ್ತಿ , ಮುನಾಫ್ ದೇವಗಿರಿ , ಶಂಕರ ಭೋಜಗಾರ್ , ಗಂಗಾಧರ ಪೆರೂರ್ ,ಪೀರ್ ಸಾಬ್ ನದಾಫ್,ಮುಂತಾದವರು ಆಗ್ರಹಿಸಿದರು. ಪ್ರಕಟಣೆ ಕೃಪೆಗಾಗಿ. ತಮ್ಮ ವಿಶ್ವಾಸಿಕ: ಬಾಬಾಜಾನ್ ಮುಧೋಳ
ಪ್ರಕೃತಿ ವಿಕೋಪ ಆಗುವುದರಿಂದ ಕೇಂದ್ರ ಸರ್ಕಾರ ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕು – ಬಾಬಾಜಾನ್ ಮುಧೋಳ್ ಆಗ್ರಹ
ಕರುನಾಡು ಘರ್ಜನೆ ಸುದ್ದಿ ಹುಬ್ಬಳ್ಳಿ:- ಅಸ್ಸಾಂನಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ನಿರಂತರ ಧಾರಾಕಾರ ಮಳೆ ಮತ್ತು ಪ್ರವಾದಿಂದ ನೂರಾರು ಮಂದಿ ಮತ್ತು ದನ ಕರಗಳನ್ನು ನೀರಲ್ಲಿ ಸತ್ತು ಕೊಚ್ಚಿ ಹೋಗಿದ್ದವು ಊರಲ್ಲಿ ಕಲುಷಿತ ವಾತಾವರಣ ನಿರ್ಮಾಣ ಆಗಿದೆ ಇದು ಸಣ್ಣ…