Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
Uncategorized

ಕ್ಷೌರಿಕನನ್ನು ಮದುವೆಯಾಗುವ ಯುವತಿಗೆ 5 ಲಕ್ಷ ರೂ. ನೀಡಿ: ಸರಕಾರಕ್ಕೆ ಕೃಷ್ಣಾ ಹಡಪದ ಒತ್ತಾಯ..!

ಕರುನಾಡು ಘರ್ಜನೆ ಸುದ್ದಿ ಗದಗ 17: ಕ್ಷೌರಿಕನನ್ನು ಮದುವೆಯಾಗುವ ಯುವತಿಗೆ 5 ಲಕ್ಷ ರೂ. ಪ್ರೋತ್ಸಾಹ ಧನವನ್ನು ನೀಡಬೇಕು ಮತ್ತು ದಿ.ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ ರಾಜ್ಶದ ಸವಿತಾ ಸಮಾಜ ಬಾಂಧವರು ಪಡೇದ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಹಾಗೂ 10…

ಕರುನಾಡು ಘರ್ಜನೆ ಸುದ್ದಿ ಗದಗ 17: ಕ್ಷೌರಿಕನನ್ನು ಮದುವೆಯಾಗುವ ಯುವತಿಗೆ 5 ಲಕ್ಷ ರೂ. ಪ್ರೋತ್ಸಾಹ ಧನವನ್ನು ನೀಡಬೇಕು ಮತ್ತು ದಿ.ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ ರಾಜ್ಶದ ಸವಿತಾ ಸಮಾಜ ಬಾಂಧವರು ಪಡೇದ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಹಾಗೂ 10 ಲಕ್ಷ ರೂ ಸಬ್ಸಿಡಿಯೊಂದಿಗೆ ಬಡ್ಡಿ ರಹಿತವಾಗಿ ಕನಿಷ್ಠ 25 ಲಕ್ಷ ರೂ. ಯಾವುದೇ ಗ್ಯಾರಂಟಿ ಇಲ್ಲದೆ ಸಾಲ ಸೌಲಭ್ಶ ನೀಡಬೇಕು ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಶಕ್ಷರಾದ ಕೃಷ್ಣಾ ಎಚ್ ಹಡಪದ ಅವರು ಸರಕಾರಕ್ಕೆ ಮನವಿ ಮಾಡಿ ಒತ್ತಾಯಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಇತ್ತೀಚಿನ ದಿನಗಳಲ್ಲಿ ಕ್ಷೌರಿಕರ ಮಕ್ಕಳಿಗಾಗಿ ಮದುವೆಯಾಗಲು ಹೆಣ್ಣು ಕೊಡೋದಕ್ಕೆ ನಿರಾಕರಿಸುತ್ತಿದ್ದಾರೆ. ನೌಕರಿ ಇದ್ದರೆ ಮಾತ್ರ ಕನ್ಯೆ ಕೊಡ್ತೀವಿ ಅಂತಿದ್ದಾರೆ. ಆದ್ದರಿಂದ ಕ್ಷೌರಿಕರ ಗೋಳು ಮುಗಿಲು ಮುಟ್ಟಿದೆ

ಇತ್ತ ಸರಕಾರದ ಸೌಲಭ್ಶಗಳ ಅನಕೂಲ ಇಲ್ಲದೆ ಕ್ಷೌರ ವೃತ್ತಿ ಮಾಡುವನೆಂಬ ಒಂದೇ ಕಾರಣಕ್ಕೆ ಹೆಣ್ಣು ಕೊಡಲು ಕೆಲ ಕ್ಷೌರಿಕ ಕುಟುಂಬದವರಾರೂ ಮುಂದೆ ಬರುತ್ತಿಲ್ಲ. ಸರ್ಕಾರಿ ನೌಕರನೇ ಬೇಕೆನ್ನುತ್ತಾರೆ. ಕಾಯಕದಲ್ಲೇ ಸ್ರೇಷ್ಟ ಕಾಯಕ ಕ್ಷೌರಿಕ ವೃತ್ತಿಯನ್ನು ಹಾಗೂ ವೃತ್ತಿ ಮಾಡುತ್ತಿರುವ ಯುವ ಕ್ಷೌರಿಕರನ್ನು ಅಸಡ್ಡೆಯಿಂದ ನೋಡುತ್ತಿರುವುದರಿಂದ ಅನೇಕ ಸಮಸ್ಯೆಗಳಿಂದ ಕ್ಷೌರಿಕರು ತತ್ತರಿಸಿ ಹೋಗಿದ್ದಾರೆ ಆದ್ದರಿಂದ ಇತ್ತೀಚೆಗೆ ಯುವ ಕ್ಷೌರಿಕರಿಗೆ ಹೆಣ್ಣೆ ಸಿಗುತ್ತಿಲ್ಲ. ಇದು ಕೌಟುಂಬಿಕ ಸಮಸ್ಯೆಗೆ ಕಾರಣವಾಗಿದೆ. ಇದಕ್ಕೆ ಸ್ಪಂದಿಸುವುದನ್ನು ಬಿಟ್ಟು ಸರ್ಕಾರ ನಿರ್ಲಕ್ಷ್ಯ ಧೋರಣೆ ತಾಳಿದೆ ಎಂದು ಕೃಷ್ಣಾ ಹಡಪದ ಕಿಡಿಕಾರಿದರು.

ಏನಿದು ವಿಷಯ..?

ಹೆಣ್ಣು ಸಿಗದ ಬಹಳಷ್ಟು ಯುವ ಕ್ಷೌರಿಕರುಗಳಿಗೆ ಮದುವೆ ವಯಸ್ಸು 30 ರಿಂದ 35 ರ ಗಡಿ ಮೀರತಾಯಿದೆ ಆದರೂ ಮದುವೆ ಆಗಿಲ್ಲ. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ಇದು ಸಾಮಾಜಿಕ ಸಮಸ್ಯೆಯಾಗಿ ಪರಿವರ್ತನೆಯಾಗಿದ್ದು, ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಎಂದ ಅವರು ಕ್ಷೌರಿಕ ವೃತ್ತಿಗೂ ಆರ್ಥಿಕ ಅಂತಸ್ತು ಕಲ್ಪಿಸಿಕೊಡುವ ಕೆಲಸವನ್ನು ಸರಕಾರ ಮಾಡುವ ಅಗತ್ಶವಿದೆ ಎಂದು ಆಗ್ರಹಿಸಿದರಲ್ಲದೆ ಮುಂದಿನ ದಿನಗಳಲ್ಲಿ ಕ್ಷೌರ ಸೇವೆ ಮಾಡಲು ಯಾವುದೇ ಕ್ಷೌರಿಕರ ಮಕ್ಕಳು ಇಲ್ಲದಂತಾಗಲಿದೆ. ಕ್ಷೌರಿಕ ವೃತ್ತಿ ನಶಿಸಿ ಹೋಗುವ ಸಂಭವ ಕಾಣುತ್ತಿದೆ. ಆದ್ದರಿಂದ ಕ್ಷೌರಿಕರ ಮಕ್ಕಳನ್ನು ಉತ್ತೇಜಿಸಲು ಸರ್ಕಾರ ಕ್ರಮ ವಹಿಸಬೇಕು. ಅದಕ್ಕಾಗಿ ಸರ್ಕಾರವು ಸರ್ಕಾರೇತರ ಕಚೇರಿಗಳ ಉದ್ಯೋಗಗಳಲ್ಲಿ ಕ್ಷೌರಿಕ ಕುಟುಂಬಕ್ಕೆ ಮೀಸಲಾತಿ ಸೌಲಭ್ಯ ಕಲ್ಪಿಸಿಕೊಡಬೇಕು ಹಾಗೂ ಮುದ್ರಾ ಯೋಜನೆಯಡಿ ಸ್ವಯಂ ಉದ್ಯೋಗ, ಕೈಗಾರಿಕೆ ಸ್ಥಾಪನೆ, ವಾಣಿಜ್ಯ ಉದ್ದೇಶಗಳಿಗೆ ಸಾಲ ನೀಡುವ ಮಾದರಿಯಲ್ಲೇ ಸರ್ಕಾರವು ಸವಿತಾ ಸಮಾಜದ ಕ್ಷೌರಿಕರ ಮಕ್ಕಳಿಗೂ ಹೈಟೇಕ್ ಸಲೂನ ತೆರೇದು ಕ್ಷೌರಿಕ ವೃತ್ತಿ ಪ್ರಾರಂಭಿಸಲು 10 ಲಕ್ಷ ರೂ ಸಬ್ಸಿಡಿಯೊಂದಿಗೆ ಬಡ್ಡಿ ರಹಿತವಾಗಿ ಕನಿಷ್ಠ 25 ಲಕ್ಷ ರೂ. ಯಾವುದೇ ಗ್ಯಾರಂಟಿ ಇಲ್ಲದೆ ಸಾಲ ಸೌಲಭ್ಶ ನೀಡಬೇಕು ಇದರಿಂದ ಕ್ಷೌರಿಕ ಆಧಾರಿತ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದೆ. ಜತೆಗೆ, ಕೌಟುಂಬಿಕ ಭದ್ರತೆಯೂ ಸಿಗಲಿದೆ ಎಂದರಲ್ಲದೆ ಕ್ಷೌರಿಕ ವೃತ್ತಿಯಲ್ಲಿ ಯುವ ಕ್ಷೌರಿಕರು ಸಹ ಗಮನಾರ್ಹವಾದ ಸಾಧನೆ ಮಾಡುತ್ತಿದ್ದಾರೆ. ಇಂತಹವರನ್ನು ಸರಕಾರವು ಗುರುತಿಸಿ, ಸನ್ಮಾನಿಸಿ, ಪ್ರೋತ್ಸಾಹಧನ ಸಹ ನೀಡಬೇಕು. ಆ ಮೂಲಕ ಮತ್ತಷ್ಟು ಯುವ ಕ್ಷೌರಿಕರು ಕ್ಷೌರಿಕ ವೃತ್ತಿಕಡೆಗೆ ಒಲವು ಮೂಡಲು ಉತ್ತೇಜನ ನೀಡಲು ಹಾಗೂ ಕ್ಷೌರಿಕನನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ 5 ಲಕ್ಷ ರೂ ಪ್ರೋತ್ಸಾಹಧನವನ್ನು ನೀಡಲು ಮುಂದಾಗಬೇಕು ಎಂದು ಕರ್ನಾಟಕ ಸರಕಾರಕ್ಕೆ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಶಕ್ಷ ಕೃಷ್ಣಾ ಹಡಪದ ಮನವಿ ಮಾಡಿ ಆಗ್ರಹಿಸಿದರು

Editor

Leave a comment