ಕರುನಾಡು ಘರ್ಜನೆ ಸುದ್ದಿ ಗದಗ, ಅ. ೧ : ವಿಧಾನಸಭೆಯ ನೂತನ ಸಭಾಪತಿ, ಹಿರಿಯ ರಾಜಕೀಯ ಮುತ್ಸದ್ಧಿ ಜಿ.ಎಸ್.ಪಾಟೀಲ ಅವರಿಗೆ ವಿವಿದ ಸಂಘಟನೆಗಳ ಮುಖಂಡರು ಸನ್ಮಾನಿಸಿ ಗೌರವಿಸಿದರು.
ಗುರುವಾರ ರೋಣದ ಜಿ.ಎಸ್.ಪಾಟೀಲ ಅವರ ನಿವಾಸಕ್ಕೆ ತೆರಳಿದ ವಿವಿದ ಸಂಘಟನೆಗಳ ನಿಯೋಗ ಸನ್ಮಾನಿಸಿ ಗದಗ ಜಿಲ್ಲೆಯ ವಿಧಾನಸಭೆಯ ಸಭಾಪತಿ ಸ್ಥಾನವು ದೊರೆತಿರುವದು ಹೆಮ್ಮೆ ಅಭಿಮಾನದ ಸಂಗತಿ ಎಂದರು.
ನಿಯೋಗದ ನೇತೃತ್ವವನ್ನು ಗದುಗಿನ ಅಂಜುಮನ್ ಇಸ್ಲಾಂ ಪಾಲಿಟೆಕ್ನಿಕ್‌ನ ನಿರ್ದೆಶಕ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಶಿರಾಜ್‌ಅಹ್ಮದ್ ಖಾಜಿ, ಗದಗ ಎಪಿಎಂಸಿಯ ಮಾಜಿ ಸದಸ್ಯ ಜಿ.ಆರ್.ಕರಡಿ, ನಿವೃತ್ತ ಪ್ರಾಚಾರ್ಯರಾದ ಎ.ಎಂ.ಮುಲ್ಲಾ, ಎಸ್.ಎಸ್.ಇನಾಮದಾರ ವಹಿಸಿದ್ದರು. ಈ ಸಂದರ್ಭದಲ್ಲಿ ಅನೇಕ ಗಣ್ಯರು ಉಪಸ್ಥಿತರಿದ್ದರು.
ಸನ್ಮಾನ ಸ್ವೀಕರಿಸಿ ಔಪಚಾರಿಕವಾಗಿ ಮಾತನಾಡಿದ ವಿಧಾನಸಭೆಯ ಸಭಾಪತಿ ಜಿ.ಎಸ್.ಪಾಟೀಲ ಅವರು ದೊರೆತ ರಾಜಕೀಯ ಸ್ಥಾನಮಾನಗಳನ್ನು ಜನಪರ ಕಾರ್ಯಗಳಿಗೆ, ರಾಜ್ಯದ ಹಿತಾಸಕ್ತಿಗೆ ಸದುಪಯೋಗ ಮಾಡಿಕೊಳ್ಳುವದಾಗಿ ಹೇಳಿದರು.