Saturday, 7 November 2026 Karunadu Gharjane — Edition

Karunadu Gharjane

News website

ಗದಗ ಗದಗ I ರಕ್ತ ಸುರಿಸಿ ನಾಯಕರನ್ನು ಗೆಲ್ಲಿಸುವ ಸಾಮಾನ್ಯ ಕಾರ್ಯಕರ್ತರ ಶೋಷಣೆ ನಿಲ್ಲಲಿ; ನಿಷ್ಠಾವಂತ ಕೃಷ್ಣಾ ಹಡಪದಗೆ ಉನ್ನತ ಸ್ಥಾನ ನೀಡಿ: ಎಂ. ನರಸಿಂಹಯ್ಯ ಆಗ್ರಹ. ಗದಗ ಗದಗ I ರೋಣದಲ್ಲಿ ಕಾನೂನು ಶಿಕ್ಷಣಕ್ಕೆ ಹೊಸ ಮುನ್ನುಡಿ: ನ್ಯಾಯಮೂರ್ತಿ ಬಿ.ಎಸ್. ಪಾಟೀಲರಿಂದ ವ್ಹಿ.ಎಂ. ನಾಡಗೌಡ್ರ ಕಾನೂನು ಮಹಾವಿದ್ಯಾಲಯ ಉದ್ಘಾಟನೆ! ಗಜೇಂದ್ರಗಡ ಗದಗ I ಲೋಕಾಯುಕ್ತರು ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರ ಜಿಲ್ಲಾ ಪ್ರವಾಸ. ಅರೋಗ್ಯ ಗದಗ I ಶೌಚಾಲಯ ಕಟ್ಟಿದರೆ ಸಾಲದು, ಬಳಸಿದರೆ ಸಾಧನೆ”- ಸಭಾಧ್ಯಕ್ಷ ಜಿ.ಎಸ್. ಪಾಟೀಲ. ಗದಗ ಗದಗ I ನಿರಂತರ ಪುರಸ್ಕಾರಕ್ಕೆ ಡಾ ವೇದಾರಾಣಿ ದಾಸನೂರ ಆಯ್ಕೆ ಅಪರಾಧ ಗದಗ I ನಾಲ್ಕು ಕಳ್ಳತನ ಪ್ರಕರಣ ಭೇದಿಸಿದ ಲಕ್ಷ್ಮೇಶ್ವರ ಪೊಲೀಸರು! ಐವರು ಆರೋಪಿಗಳ ಬಂಧನ – 2.48 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣ ಜಪ್ತಿ. ಗದಗ ಗದಗ I ಗದಗ ನಗರದ ವಿವಿಧೆಡೆ ನೀರು ಪೂರೈಕೆ. ಗದಗ ಗದಗ I ದೀಪಾವಳಿ ಹಬ್ಬದ ಪ್ರಯುಕ್ತ 340 ಹೆಚ್ಚುವರಿ ವಿಶೇಷ ಬಸ್‌ಗಳ ಸಂಚಾರ ಗದಗ ಗದಗ I ರಕ್ತ ಸುರಿಸಿ ನಾಯಕರನ್ನು ಗೆಲ್ಲಿಸುವ ಸಾಮಾನ್ಯ ಕಾರ್ಯಕರ್ತರ ಶೋಷಣೆ ನಿಲ್ಲಲಿ; ನಿಷ್ಠಾವಂತ ಕೃಷ್ಣಾ ಹಡಪದಗೆ ಉನ್ನತ ಸ್ಥಾನ ನೀಡಿ: ಎಂ. ನರಸಿಂಹಯ್ಯ ಆಗ್ರಹ. ಗದಗ ಗದಗ I ರೋಣದಲ್ಲಿ ಕಾನೂನು ಶಿಕ್ಷಣಕ್ಕೆ ಹೊಸ ಮುನ್ನುಡಿ: ನ್ಯಾಯಮೂರ್ತಿ ಬಿ.ಎಸ್. ಪಾಟೀಲರಿಂದ ವ್ಹಿ.ಎಂ. ನಾಡಗೌಡ್ರ ಕಾನೂನು ಮಹಾವಿದ್ಯಾಲಯ ಉದ್ಘಾಟನೆ! ಗಜೇಂದ್ರಗಡ ಗದಗ I ಲೋಕಾಯುಕ್ತರು ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರ ಜಿಲ್ಲಾ ಪ್ರವಾಸ. ಅರೋಗ್ಯ ಗದಗ I ಶೌಚಾಲಯ ಕಟ್ಟಿದರೆ ಸಾಲದು, ಬಳಸಿದರೆ ಸಾಧನೆ”- ಸಭಾಧ್ಯಕ್ಷ ಜಿ.ಎಸ್. ಪಾಟೀಲ. ಗದಗ ಗದಗ I ನಿರಂತರ ಪುರಸ್ಕಾರಕ್ಕೆ ಡಾ ವೇದಾರಾಣಿ ದಾಸನೂರ ಆಯ್ಕೆ ಅಪರಾಧ ಗದಗ I ನಾಲ್ಕು ಕಳ್ಳತನ ಪ್ರಕರಣ ಭೇದಿಸಿದ ಲಕ್ಷ್ಮೇಶ್ವರ ಪೊಲೀಸರು! ಐವರು ಆರೋಪಿಗಳ ಬಂಧನ – 2.48 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣ ಜಪ್ತಿ. ಗದಗ ಗದಗ I ಗದಗ ನಗರದ ವಿವಿಧೆಡೆ ನೀರು ಪೂರೈಕೆ. ಗದಗ ಗದಗ I ದೀಪಾವಳಿ ಹಬ್ಬದ ಪ್ರಯುಕ್ತ 340 ಹೆಚ್ಚುವರಿ ವಿಶೇಷ ಬಸ್‌ಗಳ ಸಂಚಾರ
ಗದಗ

ಗದಗ I ರಕ್ತ ಸುರಿಸಿ ನಾಯಕರನ್ನು ಗೆಲ್ಲಿಸುವ ಸಾಮಾನ್ಯ ಕಾರ್ಯಕರ್ತರ ಶೋಷಣೆ ನಿಲ್ಲಲಿ; ನಿಷ್ಠಾವಂತ ಕೃಷ್ಣಾ ಹಡಪದಗೆ ಉನ್ನತ ಸ್ಥಾನ ನೀಡಿ: ಎಂ. ನರಸಿಂಹಯ್ಯ ಆಗ್ರಹ.

ಕರುನಾಡು ಘರ್ಜನೆ ಸುದ್ದಿ ಬೆಂಗಳೂರು / ಗದಗ 06: ಚುನಾವಣೆ ಬಂದಾಗ ಮನೆ-ದುಡಿಮೆ ಮರೆತು, ಸ್ವಂತ ಶ್ರಮದ ಹಣವನ್ನು ನೀರಂತೆ ಖರ್ಚು ಮಾಡಿ ನಾಯಕರ ಗೆಲುವಿಗಾಗಿ ರಕ್ತ ಸುರಿಸುವ ಪ್ರಾಮಾಣಿಕ ಕಾರ್ಯಕರ್ತರನ್ನು ಕೇವಲ ‘ಜೈಕಾರ’ ಹಾಕುವ ವೋಟ್ ಬ್ಯಾಂಕ್ ಗುಲಾಮರನ್ನಾಗಿ ಇಟ್ಟುಕೊಳ್ಳುವ…

ಕರುನಾಡು ಘರ್ಜನೆ ಸುದ್ದಿ ಬೆಂಗಳೂರು / ಗದಗ 06: ಚುನಾವಣೆ ಬಂದಾಗ ಮನೆ-ದುಡಿಮೆ ಮರೆತು, ಸ್ವಂತ ಶ್ರಮದ ಹಣವನ್ನು ನೀರಂತೆ ಖರ್ಚು ಮಾಡಿ ನಾಯಕರ ಗೆಲುವಿಗಾಗಿ ರಕ್ತ ಸುರಿಸುವ ಪ್ರಾಮಾಣಿಕ ಕಾರ್ಯಕರ್ತರನ್ನು ಕೇವಲ ‘ಜೈಕಾರ’ ಹಾಕುವ ವೋಟ್ ಬ್ಯಾಂಕ್ ಗುಲಾಮರನ್ನಾಗಿ ಇಟ್ಟುಕೊಳ್ಳುವ ಇಂದಿನ ಸ್ವಾರ್ಥ, ವಂಶಾಡಳಿತ ರಾಜಕಾರಣಕ್ಕೆ ಪ್ರಜಾಪ್ರಭುತ್ವದಲ್ಲೇ ಕೊಡಲಿ ಪೆಟ್ಟು ಬೀಳಬೇಕಿದೆ. ಗದಗಿನ ಜನಪ್ರಿಯ ಶಾಸಕರು ಹಾಗೂ ಹಿರಿಯ ಮುತ್ಸದ್ದಿ ನಾಯಕರಾದ ಎಚ್.ಕೆ. ಪಾಟೀಲರು ಈ ಶೋಷಿತ ವ್ಯವಸ್ಥೆಯ ವಿರುದ್ಧ ನಿಂತು, ಸಮಾಜದ ಕಟ್ಟಕಡೆಯ ನಿಷ್ಠಾವಂತ ಕ್ರಾಂತಿಕಾರಿ ಕಾರ್ಯಕರ್ತ ಕೃಷ್ಣಾ ಎಚ್. ಹಡಪದ ಅವರಿಗೆ ಉನ್ನತ ರಾಜಕೀಯ ಸ್ಥಾನಮಾನ ನೀಡುವ ಮೂಲಕ ಇಡೀ ರಾಜ್ಯ ರಾಜಕಾರಣಕ್ಕೆ ಹೊಸ ದಿಕ್ಸೂಚಿ ತೋರಿಸಬೇಕು, ಎಂದು ಕರ್ನಾಟಕ ರಾಜ್ಯ ಸವಿತಾ ಸಮಾಜದ ಬೆಂಗಳೂರು ನಗರ ಜಿಲ್ಲೆಯ ಸಂಘಟನಾ ಕಾರ್ಯದರ್ಶಿಗಳು ಹಾಗೂ ದಿ. ರಾಜೀವ್ ಗಾಂಧಿ ಸೇವಾ ಸಂಸ್ಥೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಎಂ. ನರಸಿಂಹಯ್ಯ ಅವರು ತೀವ್ರ ಆಕ್ರೋಶ ಹಾಗೂ ಕಳಕಳಿಯ ಪ್ರಕಟಣೆ ಹೊರಡಿಸಿದ್ದಾರೆ.

ಬೆಂಗಳೂರಿನಲ್ಲಿ ಹಿರಿಯ ಸಚಿವರಾದ ಎಚ್ ಕೆ ಪಾಟೀಲರನ್ನು ಭೇಟಿಯಾಗಿ ಸುದೀರ್ಘ ಮನವಿ ಮಾಡಿರುವ ಅವರು, ಇಂದಿನ ನಾಯಕರ ಸ್ವಾರ್ಥ ರಾಜಕೀಯ ಸಿದ್ಧಾಂತ ಹಾಗೂ ಶೋಷಣೆಗೆ ಒಳಗಾಗುತ್ತಿರುವ ಕಾರ್ಯಕರ್ತರ ಕರುಣಾಜನಕ ಸ್ಥಿತಿಯ ವಿರುದ್ಧ ಕ್ರಾಂತಿಕಾರಿಯಾಗಿ ಮಾತನಾಡಿ
ಇಂದಿನ ರಾಜಕಾರಣ ಅತ್ಯಂತ ಕೆಟ್ಟ ಹಂತಕ್ಕೆ ತಲುಪಿದೆ. ನೊಂದ ಸಮುದಾಯಗಳ ಬಂಧುಗಳು ನಮ್ಮ ಸಮಾಜಕ್ಕೆ ಒಳ್ಳೆಯದಾಗಬಹುದು, ನಮಗೂ ಒಂದು ಅವಕಾಶ ಸಿಕ್ಕರೆ ಜನಸೇವೆ ಮಾಡಬಹುದು ಎಂಬ ಪವಿತ್ರ ಆಸೆಯಿಂದ ನಾಯಕರ ಹಿಂದೆ ಓಡಾಡುತ್ತಾರೆ. ಆದರೆ, ಬಹುತೇಕ ಎಂಎಲ್ಎ ಮತ್ತು ಎಂಪಿಗಳು ಇವರನ್ನು ಕೇವಲ ತಮ್ಮ ಕುರ್ಚಿ ಭದ್ರಪಡಿಸಿಕೊಳ್ಳುವ ‘ಫಾಲೋವರ್ಸ್’ ಮಾಡಿಕೊಳ್ಳುತ್ತಾರೆಯೇ ಹೊರತು, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಬೆಳೆಸುವ ಪ್ರಾಮಾಣಿಕ ಮನಸ್ಸು ಮಾಡುವುದಿಲ್ಲ. ಗೆದ್ದ ಮೇಲೆ ಇವರ ಕಣ್ಣಿಗೆ ಬೀಳದ ನಾಯಕರು, ತಮ್ಮ ಮಕ್ಕಳು, ಮೊಮ್ಮಕ್ಕಳು ಮತ್ತು ಸಂಬಂಧಿಕರ ಮುಂದಿನ ತಲೆಮಾರನ್ನು ರಾಜಕೀಯವಾಗಿ ಪ್ರತಿಷ್ಠಾಪಿಸುವ ಚಿಂತನೆಯಲ್ಲೇ ಮುಳುಗಿರುತ್ತಾರೆ. ಇಂತಹ ಸ್ವಾರ್ಥಿಗಳಿಂದಾಗಿ ದೇಶ ಕಟ್ಟಬೇಕಾದ ಯುವ ಕಾರ್ಯಕರ್ತರು ವಯಸ್ಸು ಕಳೆದುಕೊಂಡು, ಉನ್ನತ ಭವಿಷ್ಯವನ್ನು ಹಾಳು ಮಾಡಿಕೊಂಡು ಕೊನೆಗೆ ಏನೂ ಇಲ್ಲದೆ ಆಯುಷ್ಯ ಮುಗಿಸುತ್ತಿದ್ದಾರೆ. ಈ ಶೋಷಣೆ ಕೊನೆಯಾಗಬೇಕು, ಎಂದು ನರಸಿಂಹಯ್ಯ ಗುಡುಗಿದ್ದಾರೆ.
ಈ ಕೆಟ್ಟ ಮತ್ತು ಸವಕಲು ಪರಿಪಾಠಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುವ ಏಕೈಕ ಆಶಾಕಿರಣ ಎಂದರೆ ಅದು ಎಚ್.ಕೆ. ಪಾಟೀಲ್ ಸಾಹೇಬರು ಮಾತ್ರ. ಎಲ್ಲಾ ಸಮುದಾಯಗಳನ್ನು ಸಮಾನವಾಗಿ ಕಂಡು ಸಾಮಾಜಿಕ ನ್ಯಾಯದ ಪರ ನಿಲ್ಲುವ ಅವರು, ಹಿರಿಯರಾದ ಡಿ.ಆರ್. ಪಾಟೀಲರ ಕಾಲದಿಂದ ಹಿಡಿದು ಇಂದಿನವರೆಗೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಸೈನಿಕನಂತೆ ದುಡಿದಿರುವ ಕೃಷ್ಣಾ ಎಚ್. ಹಡಪದ ಅವರ ಶ್ರಮಕ್ಕೆ ನ್ಯಾಯ ಒದಗಿಸಬೇಕು. ಹಗಲಿರುಳು ಶ್ರಮಿಸಿ ಸವಿತಾ ಸಮಾಜವನ್ನು ಸಂಘಟಿಸಿ, ಇಡೀ ರಾಜ್ಯಕ್ಕೇ ಮಾದರಿಯಾಗುವಂತೆ ಗದಗಿನಲ್ಲಿ ರಾಜ್ಯದ ಪ್ರಥಮ ‘ಸವಿತಾ ಮಹರ್ಷಿ ವೃತ್ತ’ ನಿರ್ಮಿಸಿ, ನುರಾರು ಶೋಷಿತ ಬಡ ಕುಟುಂಬಗಳಿಗೆ ಸರಕಾರಿ ಸೌಲಭ್ಯ ಒದಗಿಸಿದ ಕೃಷ್ಣಾ ಎಚ್ ಹಡಪದ ಕೇವಲ ಕಾರ್ಯಕರ್ತನಲ್ಲ, ಬದಲಿಗೆ ಬದಲಾವಣೆಯ ಹರಿಕಾರ,” ಎಂದು ನರಸಿಂಹಯ್ಯ ಬಣ್ಣಿಸಿದ್ದಾರೆ.
ಕೃಷ್ಣಾ ಎಚ್ ಹಡಪದ ಅವರಿಗೆ ಉನ್ನತ ರಾಜಕೀಯ ಸ್ಥಾನಮಾನ ನೀಡುವುದು ಕೇವಲ ವೈಯಕ್ತಿಕ ಅಧಿಕಾರವಲ್ಲ, ಬದಲಾಗಿ ಅಧಿಕಾರಕ್ಕಾಗಿ ಕಾಯುತ್ತಿರುವ ಪ್ರತಿಯೊಬ್ಬ ಪ್ರಾಮಾಣಿಕ ಕಾರ್ಯಕರ್ತನ ಹೋರಾಟಕ್ಕೆ ಸಿಗುವ ಜಯ. ಅವರ ಕ್ರಾಂತಿಕಾರಿ ಸೇವೆಗೆ ಆನೆ ಬಲ ತುಂಬಲು ಎಚ್.ಕೆ. ಪಾಟೀಲರು ತಕ್ಷಣವೇ ಮುಂದಾಗಬೇಕು. ಇದು ಇಡೀ ಕರ್ನಾಟಕ ರಾಜ್ಯದ ರಾಜಕಾರಣದಲ್ಲಿ ನಾಯಕರನ್ನು ನಂಬಿ ಮನೆ-ಹಾಳು ಮಾಡಿಕೊಳ್ಳುತ್ತಿರುವ ಲಕ್ಷಾಂತರ ಕಾರ್ಯಕರ್ತರಿಗೆ ಧೈರ್ಯ ತುಂಬುವ ಐತಿಹಾಸಿಕ ತೀರ್ಮಾನವಾಗಲಿದೆ,” ಎಂದು ಕರ್ನಾಟಕ ರಾಜ್ಯ ಸವಿತಾ ಸಮಾಜದ ಬೆಂಗಳೂರು ನಗರ ಜಿಲ್ಲೆಯ ಸಂಘಟನಾ ಕಾರ್ಯದರ್ಶಿಗಳು ಹಾಗೂ ದಿ. ರಾಜೀವ್ ಗಾಂಧಿ ಸೇವಾ ಸಂಸ್ಥೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಎಂ. ನರಸಿಂಹಯ್ಯ ಪ್ರಕಟಣೆಯಲ್ಲಿ ಕೈಮುಗಿದು ಬಲವಾಗಿ ಒತ್ತಾಯಿಸಿದ್ದಾರೆ.

ಎಂ. ನರಸಿಂಹಯ್ಯ
9845650612

Editor

Leave a comment