ಕರುನಾಡು ಘರ್ಜನೆ ಸುದ್ದಿ ಗದಗ : ಮುಳಗುಂದ ಪಟ್ಟಣದ ಖಿದ್ಮತ್-ಎ-ಮಿಲ್ಲತ್ ಗ್ರೂಪ್ ಮುಳಗುಂದ ಇವರ ವತಿಯಿಂದ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಇಂದು
ಗೌರವಿಸಿ ಸನ್ಮಾನಿಸಲಾಯಿತು.
ಸನ್ 2023-24 ಸಾಲಿನಲ್ಲಿ ಮುಳಗುಂದದ ಅಂಜುಮನ್-ಎ-ಇಸ್ಲಾಂ ಸರಕಾರಿ ಪ್ರೌಢಶಾಲೆಯ SSLC ಯಲ್ಲಿ 76.47%.ಪ್ರತಿಶತ ಸಾಧನೆ ಮಾಡಿದ್ದು ಹಾಗೂ ಪದವಿ ಪೂರ್ವ ಕಾಲೇಜು ಕಾಮರ್ಸ್ ವಿಭಾಗದಲ್ಲಿ 96%.ಪ್ರತಿಶತ ಆಟ್ಸ್೯ ವಿಭಾಗದಲ್ಲಿ 68% ಪ್ರತಿಶತ ಸಾಧನೆ ಮಾಡಿದ್ದಕ್ಕಾಗಿ ಈ ಯಶಸ್ಸು ಗಳಿಸಿದ ವಿದ್ಯಾರ್ಥಿ/ನಿಯರಿಗೆ ಪ್ರೋತ್ಸಾಹಿಸಿದ ಶಿಕ್ಷಕರಿಗೆ ಗೌರವಿಸಿ ಸನ್ಮಾನ ಮಾಡಲಾಯಿತು.
ಸನ್ಮಾನಿಸಿ ಮಾತನಾಡಿದ ತಾಜುದ್ದೀನ ಕಿಂಡ್ರೀಯವರು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಿರುವ ಎಲ್ಲ ವಿದ್ಯಾರ್ಥಿಗಳಿಗೂ ಅಭಿನಂದಿಸುತ್ತಾ ತಮ್ಮ ಮುಂದಿನ ಶಿಕ್ಷಣವನ್ನು ಚೆನ್ನಾಗಿ ಕಲಿತು ಕಲೆತ ಶಾಲೆಗೆ ಹಾಗೂ ತಂದೆ ತಾಯಿಗಳ ಕೀರ್ತಿ ತರುವಂತಹ ವಿದ್ಯಾರ್ಥಿಗಳಾಗಿ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಲಿ ಎಂದು ಹಿತನುಡಿಗಳನ್ನು ಹೇಳಿದರು.
ಸನ್ಮಾನ ಕಾರ್ಯಕ್ರಮದಲ್ಲಿ ಅಬ್ದುಲ್ ಹಮೀದ ಮುಜಾವರ,ಸೈಯದಲಿ ಶೇಖ, ಅಜರುದ್ದೀನ ಲಾಡಸಾಬನವರ, ರಫೀಕ ಅಹ್ಮದ ದಲೀಲ,ಚಮನಸಾಬ ಹಾದಿಮನಿ, ಹೈದರಲಿ ಖವಾಸ, ಮುನ್ನಾ ಢಾಲಾಯತ, ಮಾಬುಲಿ ದುರ್ಗಿಗುಡಿ, ಹುಸೇನ ಅಕ್ಕಿ, ದಾವೂದ ಜಮಾಲ್, ಪ್ರಾಚಾರ್ಯ ಜಿ.ಎಸ್. ಶಿರ್ಶಿ, ಪ್ರದಾನ ಗುರುಗಳು ಎಸ್,ಎಂಉಮರ್ಜಿ, ಹಾಗೂ
ಗ್ರೂಪ್ ನ ಸರ್ವ ಸದಸ್ಯರು ಎಸ್‌ಡಿಎಂಸಿ
ಅಧ್ಯಕ್ಷರು & ಸದಸ್ಯರು ಶಾಲಾ ಕಾಲೇಜಿನ ಶಿಕ್ಷಕ ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.